ಅಲಬನೂರಿನಲ್ಲಿ ಯೋಧನ ಅಂತ್ಯಕ್ರಿಯೆ

ಸೇನೆ, ಸರ್ಕಾರಿ ಗೌರವದೊಂದಿಗೆ ಅಂತ್ಯಸಂಸ್ಕಾರ

ಸಿಂಧನೂರು: ತಾಲೂಕಿನ ಅಲಬನೂರು ಗ್ರಾಮದಲ್ಲಿ ಯೋಧ ಶಿವಕುಮಾರಸ್ವಾಮಿ ಅಂತ್ಯಕ್ರಿಯೆ ಶುಕ್ರವಾರ ಮಧ್ಯಾಹ್ನ ಸೇನೆ ಹಾಗೂ ಸರ್ಕಾರಿ ಗೌರವದೊಂದಿಗೆ ನೆರವೇರಿಸಲಾಯಿತು.

ಕಳೆದ 16 ವರ್ಷಗಳಿಂದ ಸೈನ್ಯದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಯೋಧ ಶಿವಕುಮಾರಸ್ವಾಮಿ ಗುರುವಾರ ಹೃದಯಾಘಾತದಿಂದ ಮೃತಪಟ್ಟಿದ್ದರು. ಶುಕ್ರವಾರ ಮಧ್ಯಾಹ್ನ 1 ಗಂಟೆಗೆ ಅಲಬನೂರು ಗ್ರಾಮಕ್ಕೆ ಆಗಮಿಸಿದ ಭಾರತೀಯ ಸೈನ್ಯ ತಂಡ ಪಾರ್ಥಿವ ಶರೀರಕ್ಕೆ ರಾಷ್ಟ್ರ ಧ್ವಜ ಹೊದಿಸಿ ಗೌರವ ಸೂಚಿಸಿತು. ತಾಲೂಕು ಆಡಳಿತದಿಂದ ಶಿರಸ್ತೇದಾರ್ ಅಂಬಾದಾಸ್ ಅಂತಿಮ ನಮನ ಸಲ್ಲಿಸಿದರು. ನಂತರ ಕುಟುಂಬದವರ ಇಚ್ಛೆಯಂತೆ ಅಂತ್ಯಕ್ರಿಯೆ ನೆರವೇರಿಸಲಾಯಿತು. ಕುಟುಂಬ ಸದಸ್ಯರ ಆಕ್ರಂದನ ಮುಗಿಲು ಮುಟ್ಟಿತ್ತು.

ಸಿಪಿಐ ನಾಗರಾಜ ಎಂ.ಕಮ್ಮಾರ, ಪಿಎಸ್‌ಐ ಸೋಮಶೇಖರ, ಯದ್ದಲದೊಡ್ಡಿ ಮಹಾಲಿಂಗ ಸ್ವಾಮೀಜಿ, ಕೃಷಿ ಬೆಲೆ ಆಯೋಗದ ಮಾಜಿ ಸದಸ್ಯ ಹನುಮನಗೌಡ ಬೆಳಗುರ್ಕಿ, ಜಿಪಂ ಸದಸ್ಯ ಬಾಬುಗೌಡ ಬಾದರ್ಲಿ, ಜೆಡಿಎಸ್ ವಕ್ತಾರ ಬಸವರಾಜ ನಾಡಗೌಡ, ಯುವ ಕಾಂಗ್ರೆಸ್ ರಾಜ್ಯ ಅಧ್ಯಕ್ಷ ಬಸನಗೌಡ ಬಾದರ್ಲಿ, ತಾಪಂ ಸದಸ್ಯ ಉದಯಗೌಡ ವಳಬಳ್ಳಾರಿ, ರೈತ ಮತ್ತು ಸೈನಿಕ ವೇದಿಕೆ ಗೌರವಾಧ್ಯಕ್ಷ ವೀರೇಶಗೌಡ ನೆಟೆಕಲ್, ಅವಿನಾಶ ದೇಶಪಾಂಡೆ, ಪದಾಧಿಕಾರಿಗಳು, ಅಭಿಮಾನಿಗಳು ಹಾಗೂ ನೂರಾರು ಸಂಖ್ಯೆಯಲ್ಲಿ ಜನರು ಭಾಗವಹಿಸಿದ್ದರು.

ಅಲಬನೂರು ಗ್ರಾಮದಲ್ಲಿ ಯೋಧ ಶಿವಕುಮಾರಸ್ವಾಮಿ ಅಂತ್ಯಕ್ರಿಯೆ ವೇಳೆ ಪತ್ನಿ, ತಾಯಿ ಹಾಗೂ ಕುಟುಂಬ ವರ್ಗದವರ ಆಕ್ರಂದನ ಮುಗಿಲುಮುಟ್ಟಿತ್ತು. ಸಿಪಿಐ ನಾಗರಾಜ ಕಮ್ಮಾರ, ಪಿಎಸ್‌ಐ ಸೋಮಶೇಖರ ಹಾಗೂ ಸೈನಿಕರು ಇದ್ದರು.