ಬಾಡಿಗೆ ನೀಡದ್ದಕ್ಕೆ ಹಾಸ್ಟೆಲ್‌ಗೆ ಬೀಗ ಜಡಿದ ಮಾಲೀಕ

ಸಿಂಧನೂರು: ನಗರದ ಕುಷ್ಟಗಿ ರಸ್ತೆಯಲ್ಲಿರುವ ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಮೆಟ್ರಿಕ್ ನಂತರ ಬಾಲಕರ ವಸತಿ ನಿಲಯದ ಬಾಡಿಗೆ ಪಾವತಿಸದ್ದರಿಂದ ಮಾಲೀಕರು ಬುಧವಾರ ಹಾಸ್ಟೆಲ್‌ಗೆ ಬೀಗ ಜಡಿದರು.

ಕನಕದಾಸ ಕಾಲೇಜು ಕಟ್ಟಡದ ಮೇಲ್ಭಾಗದಲ್ಲಿನ ಬಾಡಿಗೆ ಕಟ್ಟಡದಲ್ಲಿ ಎರಡ್ಮೂರು ವರ್ಷಗಳಿಂದ ವಸತಿ ನಿಲಯ ನಡೆಸಲಾಗುತ್ತಿದೆ. ಪದವಿ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳು ವಸತಿ ನಿಲಯದ ಸೌಲಭ್ಯ ಪಡೆಯುತ್ತಿದ್ದಾರೆ. ಒಂದು ವರ್ಷದಿಂದ ಕಟ್ಟಡ ಮಾಲೀಕರಿಗೆ ಇಲಾಖೆ ಬಾಡಿಗೆ ಕೊಟ್ಟಿಲ್ಲ. ಹಲವು ಬಾರಿ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಇದರಿಂದ ಬೇಸೆತ್ತ ಕಟ್ಟಡ ಮಾಲೀಕ ವಸತಿ ನಿಲಯಕ್ಕೆ ಬೀಗ ಜಡಿದು, ಹಣ ಪಾವತಿಸುವವರೆಗೆ ಹಾಸ್ಟೆಲ್ ತೆರೆಯುವುದಿಲ್ಲ ಎಂದು ಎಚ್ಚರಿಸಿದ್ದಾರೆ.

ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ ಕಾಲೇಜುಗಳು ಆರಂಭವಾಗಿದ್ದು, ಪದವಿ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳು ವಸತಿ ಸೌಲಭ್ಯವಿಲ್ಲದೆ ಪ್ರತಿನಿತ್ಯ ತಂತಮ್ಮ ಗ್ರಾಮಗಳಿಗೆ ತೆರಳುತ್ತಿದ್ದು, ಇದರಿಂದ ವಿದ್ಯಾಭ್ಯಾಸಕ್ಕೆ ತೊಂದರೆಯಾಗಿದೆ.

Leave a Reply

Your email address will not be published. Required fields are marked *