ಗ್ರಾಪಂ ಅಧ್ಯಕ್ಷರಾಗಿ ಪತ್ತಾರ ಆಯ್ಕೆ

ಸಿಂದಗಿ: ತಾಲೂಕಿನ ಯಲಗೋಡ ಗ್ರಾಪಂ ಅಧ್ಯಕ್ಷರ ರಾಜೀನಾಮೆಯಿಂದ ತೆರುವಾಗಿದ್ದ ಸ್ಥಾನಕ್ಕೆ ಗುರುವಾರ ನಡೆದ ಚುನಾವಣೆಯಲ್ಲಿ ಕಾಶಿಪತಿ ಪತ್ತಾರ ಆಯ್ಕೆಯಾಗಿದ್ದಾರೆ.

ಗ್ರಾಪಂನ ಒಟ್ಟು 18 ಸದಸ್ಯರಲ್ಲಿ ಒಬ್ಬ ಸದಸ್ಯ ಮರಣ ಹೊಂದಿದ್ದರಿಂದ 17 ಸದಸ್ಯರು ಮತಚಲಾಯಿಸಿದರು. ಅವರಲ್ಲಿ ಒಬ್ಬ ಸದಸ್ಯರ ಮತ ತಿರಸ್ಕೃತಗೊಂಡಿದ್ದರಿಂದ ಕಾಶಿಪತಿ ಪತ್ತಾರ ಅವರು 10 ಹಾಗೂ ಪ್ರತಿಸ್ಪರ್ಧಿ ರಾಜುಗೌಡ ಹೊಸಗೌಡರ 6 ಮತಗಳನ್ನು ಪಡೆದರು.

ಪಿಡಿಒ ಮಹೇಶ ಚಿಂಚೂರ, ಸಾಹೇಬಗೌಡ ಪಾಟೀಲ(ವಂದಾಲ), ಹುಯ್ಯೋಗಿ ತಳ್ಳೊಳ್ಳಿ, ವಿಜುಗೌಡ ಬಿರಾದಾರ, ರಾಮಚಂದ್ರ ರಾಠೋಡ, ಮಹೇಶ್ವರಿ ಬಡಿಗೇರ, ಶಿವಮ್ಮ ನಾಟೀಕಾರ, ರೇಣುಕಾ ತಳ್ಳೊಳ್ಳಿ ಸೇರಿದಂತೆ ಗ್ರಾಪಂ ಸದಸ್ಯರು ಇದ್ದರು.