21 ರಂದು ಯಡಿಯೂರಪ್ಪರಿಂದ ರೋಡ್ ಶೋ

ಸಿಂದಗಿ: ಪಟ್ಟಣದಲ್ಲಿ ಏ.21 ರಂದು ವಿಜಯಪುರ ಲೋಕಸಭೆ ಬಿಜೆಪಿ ಅಭ್ಯರ್ಥಿ ರಮೇಶ ಜಿಗಜಿಣಗಿ ಪರ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರು ರೋಡ್ ಶೋ ಮೂಲಕ ಪ್ರಚಾರ ನಡೆಸಲಿದ್ದಾರೆ ಎಂದು ಮಾಜಿ ಶಾಸಕ ರಮೇಶ ಭೂಸನೂರ ಹೇಳಿದರು.

ಅಂದು ಬೆಳಗ್ಗೆ 11 ಗಂಟೆಗೆ ಮೊರಟಗಿ ರಸ್ತೆಯ ನುಲಿಯ ಚಂದಯ್ಯ ವೃತ್ತದಿಂದ ಡಾ. ಅಂಬೇಡ್ಕರ್ ವೃತ್ತವರೆಗೆ ರೋಡ್ ಶೋ ನಡೆಸಿ ನಂತರ ಅಂಬೇಡ್ಕರ್ ವೃತ್ತದಲ್ಲಿ ಸಾರ್ವಜನಿಕ ಸಭೆಯಲ್ಲಿ ಮಾತನಾಡುವರು. 8 ರಿಂದ 9 ಸಾವಿರ ಜನರು ಭಾಗವಹಿಸುವರು. ಏ.18 ರಂದು ಬಾಗಲಕೋಟೆಯ ರೋಟರಿ ವೃತ್ತದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಲಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಅಭಿಮಾನಿಗಳು ಭಾಗವಹಿಸಬೇಕೆಂದು ಪಟ್ಟಣದಲ್ಲಿ ಬುಧವಾರ ನಡೆೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ವಿರೋಧ ಪಕ್ಷದವರು ಜಿಗಜಿಣಗಿ ಅವರು ಜಿಲ್ಲೆಗೆ ಏನು ಕೊಡುಗೆ ನೀಡಿಲ್ಲ ಎಂಬ ಆರೋಪವಿದೆ, ಇದು ಶುದ್ಧ ಸುಳ್ಳು ಜಿಲ್ಲೆಯ ಅಭಿವೃದ್ಧಿಗೆ ಜಿಗಜಿಣಗಿ ಅನೇಕ ಕೊಡುಗೆ ನೀಡಿದ್ದಾರೆ. ಬೇಕಿದ್ದರೆ ಅವರು ಸಾಬೀತು ಪಡಿಸಲಿ ಎಂದು ಸವಾಲೆಸೆದರು.

ಮೈತ್ರಿಯಲ್ಲಿ ಒಮ್ಮತವಿಲ್ಲ
ರಾಜ್ಯ ಸರ್ಕಾರದ ಮೈತ್ರಿ ಒಕ್ಕೂಟದಲ್ಲಿ ಯಾವುದೇ ಒಮ್ಮತವಿಲ್ಲ. ಹೀಗಾಗಿ ಈ ರಾಜ್ಯ ಅಭಿವೃದ್ಧಿಯಾಗುತ್ತಿಲ್ಲ. ಕ್ಷೇತ್ರದಲ್ಲಿ 5 ಗುಂಪುಗಳಾಗಿ ಚುನಾವಣೆ ಪ್ರಚಾರದ ಕಾರ್ಯ ನಡೆಯುತ್ತಿದೆ. ಅದರಲ್ಲಿ ಮಹಿಳಾ ಗುಂಪುಗಳೂ ಸಕ್ರಿಯವಾಗಿ ಪಕ್ಷದ ಚಟುವಟಿಕೆ ನಡೆಸುತ್ತಿವೆ. ಮೋದಿ ಹೆಸರು ಹೇಳಿ ಮತ ಕೇಳುವುದು ತಪ್ಪಾ, ಕಾಂಗ್ರೆಸ್ ಪಕ್ಷದವರೂ ಮಾಜಿ ಪ್ರಧಾನಿ ಮನಮೋಹನಸಿಂಗ್ ಅವರ ಹೆಸರು ಹೇಳಿ ಮತ ಕೇಳಲಿ ಎಂದು ಟಾಂಗ್ ನೀಡಿದರು.

ಚುನಾವಣೆ ತಾಲೂಕು ಸಂಚಾಲಕ ಮಲ್ಲಿಕಾರ್ಜುನ ಜೋಗೂರ, ಕೇಂದ್ರ ರೈಲ್ವೆ ಸಲಹಾ ಸಮಿತಿ ಸದಸ್ಯ ಸಿದ್ದು ಭಂಟನೂರ, ಬಿಜೆಪಿ ಮುಖಂಡ ಅಶೋಕ ಅಲ್ಲಾಪುರ, ಎಂ.ಎಸ್. ಮಠ, ರಾಜಶೇಖರ ಪೂಜಾರಿ, ಶ್ರೀಕಾಂತ ಸೋಮಜ್ಯಾಳ, ಬಿ.ಎಚ್. ಬಿರಾದಾರ, ರಾಜಶೇಖರ ಮಗಿಮಠ, ನಿಂಗರಾಜ ಬಗಲಿ, ಗುರು ಅಗಸರ, ಬಸವರಾಜ ಸಜ್ಜನ, ಗುರು ತಳವಾರ, ಸಿದ್ದಲಿಂಗಯ್ಯ ಹಿರೇಮಠ, ಮಲ್ಲು ಪೂಜಾರಿ, ಪ್ರಕಾಶ ದಸ್ಮಾ, ಪ್ರಕಾಶ ನಂದಿಕೋಲ, ಈರಣ್ಣ ರಾವೂರ ಮತ್ತಿತರರಿದ್ದರು.

Leave a Reply

Your email address will not be published. Required fields are marked *