ಪರಿಶಿಷ್ಟ ಜಾತಿಗಳಲ್ಲೂ ಒಳಮೀಸಲಾತಿ ಕಲ್ಪಿಸಿ

ಸಿಂದಗಿ: ಪರಿಶಿಷ್ಟ ಜಾತಿಗಳಲ್ಲೂ ಒಳಮೀಸಲಾತಿ ಕಲ್ಪಿಸಿ ಮಾದಿಗ ಸಮುದಾಯಕ್ಕೆ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿ ಪಟ್ಟಣದಲ್ಲಿ ಮಾದಿಗ ಸಂಘಟನೆಗಳ ಒಕ್ಕೂಟದ ಕಾರ್ಯಕರ್ತರು ಬೃಹತ್ ಪ್ರತಿಭಟನೆ ನಡೆಸಿದರು.

ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮುಖಾಂತರ ತೆರಳಿದ ಪ್ರತಿಭಟನಾಕಾರರು ಉಸ್ತುವಾರಿ ಸಚಿವ ಎಂ.ಸಿ. ಮನಗೂಳಿ ಮನೆ ಮುಂದೆ ಧರಣಿ ಕೈಗೊಂಡರು. ನಂತರ ತಹಸೀಲ್ದಾರ್ ಕಾರ್ಯಾಲಯದ ಮುಂದೆ ಬಹಿರಂಗ ಸಭೆ ನಡೆಸಿ ತಹಸೀಲ್ದಾರ್ ಬಿ.ಎಸ್. ಕಡಕ್​ಭಾವಿ ಅವರಿಗೆ ಮನವಿ ಸಲ್ಲಿಸಿದರು.

ರಾಜ್ಯದಲ್ಲಿ ಪರಿಶಿಷ್ಟ ಜಾತಿಗಳಲ್ಲಿನ ಶೇ. 18ರ ಮೀಸಲಾತಿ ಪ್ರಮಾಣವನ್ನು ಮೂಲ ಪರಿಶಿಷ್ಟರಲ್ಲಿ ಅತ್ಯಂತ ಆರ್ಥಿಕವಾಗಿ ಶೈಕ್ಷಣಿಕವಾಗಿ ಹಿಂದುಳಿದಿರುವವರನ್ನು ಪ್ರಥಮ ಆದ್ಯತೆಯಾಗಿ ಪರಿಗಣಿಸಬೇಕು. ನ್ಯಾಯಮೂರ್ತಿ ಎ.ಜೆ. ಸದಾಶಿವ ಆಯೋಗದ ವರದಿ ಕೂಡಲೇ ರಾಜ್ಯ ಸರ್ಕಾರ ಅಂಗಿಕಾರ ಮಾಡಿ ಕೇಂದ್ರ ಸರ್ಕಾರಕ್ಕೆ ಕಳುಹಿಸದಿದ್ದರೆ ರಾಜ್ಯಾದ್ಯಂತ ಉಗ್ರ ಹೋರಾಟ ಕೈಗೊಳ್ಳಲಾಗುವುದು. ರಾಜ್ಯದ ಮೂಲೆ ಮೂಲೆಯಲ್ಲಿಯೂ ಮಾದಿಗರ ಮಹಾ ಯುದ್ಧದ ರಣಕಹಳೆ ಮೊಳಗುತ್ತಿದ್ದು, ಸರ್ಕಾರ ಎಚ್ಚೆತ್ತುಕೊಂಡು ಬಹು ಸಂಖ್ಯಾತ ಮಾದಿಗರಿಗೆ ನ್ಯಾಯ ದೊರಕಿಸಿ ಕೊಡಬೇಕು ಎಂದು ಕಾರ್ಯಕರ್ತರು ಒತ್ತಾಯಿಸಿದರು.

ಮಾದಿಗರ ಸಂಘದ ಸಂಚಾಲಕ ಸಾಯಬಣ್ಣ ದೇವರಮನಿ, ರಾಜಕುಮಾರ ಭಾಸಗಿ, ಮಲ್ಲೇಶಿ ಕೆರೂರ, ತಿಪ್ಪಣ್ಣ ಮಾದರ, ಯಲ್ಲು ಇಂಗಳಗಿ, ಪ್ರಧಾನಿ ಮೂಲಿಮನಿ, ಕಂಟೆಪ್ಪ ಬಂಲಕಗಿ, ಶಿವಾನಂದ ಹಂಚಿನಾಳ, ಏಕನಾಥ ದೋಶ್ಯಾಳ, ರಾಜು ಗುಬ್ಬೇವಾಡ, ಶಾಂತು ಹಚ್ಯಾಳ ಮಾತನಾಡಿದರು. ಸಿದ್ದು ಪೂಜಾರಿ, ಖಾಜು ಬಂಕಲಗಿ, ಅನಿಲ ಇಂಗಳಗಿ, ರವಿ ಮಾದರ, ಪರಶುರಾಮ ಕಲ್ಲೋಳ್ಳಿ, ಶರಣಪ್ಪ ಬೂದಿಹಾಳ, ಪ್ರಭು ಹಂಗರಗಿ, ಮಲ್ಲಿಕಾರ್ಜುನ ಕಾಂಬಳೆ, ಚಂದ್ರು ಸೌತಲಗಾಂವ, ಸಾಯಬಣ್ಣ ಕೆರೂರ, ಅನಿಲ ಪೂಜಾರಿ, ರವಿ ವಣಕಿಹಾಳ ಇದ್ದರು.