ರಸ್ತೆ ದುರಸ್ತಿಗೆ ಆಗ್ರಹ

ಬ್ರಹ್ಮದೇವನಮಡು: ಸಿಂದಗಿ ತಾಲೂಕಿನ ಗೋಲಗೇರಿಯಿಂದ ಕೊಂಡಗೂಳಿಗೆ ಹೋಗುವ ರಸ್ತೆ ಒಗಿನಿಹಾಳ ಬಸವಣ್ಣ ದೇವರ ಗುಡಿ ಹತ್ತಿರ ಸಂಪೂರ್ಣ ಹದಗೆಟ್ಟಿದ್ದು, ಶೀಘ್ರ ದುರಸ್ತಿಗೊಳಿಸಬೇಕು ಎಂದು ರೈತರು ಆಗ್ರಹಿಸಿದ್ದಾರೆ.

ಈ ಭಾಗದ ಹೊಲಗಳಿಗೆ ಹೋಗುವ ರಸ್ತೆ ಸಂಪೂರ್ಣ ಕೆಸರಮಯವಾಗಿದ್ದು, ಪರದಾಡುವಂತಾಗಿದೆ. ಹಲವು ಬಾರಿ ಈ ಬಗ್ಗೆ ಗ್ರಾಪಂಗೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಶೀಘ್ರವೇ ರಸ್ತೆ ದುರಸ್ತಿಗೆ ಕ್ರಮ ಕೈಗೊಳ್ಳಬೇಕು ಎಂದು ರೈತರಾದ ಬಸವರಾಜ ಜಂಬಗಿ, ಮಲಕಪ್ಪ ಚಟ್ಟಿ, ಗೋಲ್ಲಾಳಪ್ಪ ಸಜ್ಜನ, ಶಿವಣ್ಣ ಮಾರಲಭಾವಿ, ಈರಪ್ಪ ಕೋಟೆಗೋಳ ಆಗ್ರಹಿಸಿದ್ದಾರೆ.