ಬಿಜೆಪಿ ಗೆಲುವಿಗೆ ಕಾರ್ಯಕರ್ತರ ವಿಜಯೋತ್ಸವ

ಸಿಂದಗಿ: ಕೇಂದ್ರದಲ್ಲಿ ಮೋದಿ ಹಾಗೂ ವಿಜಯಪುರ ಲೋಕಸಭೆ ಬಿಜೆಪಿ ಅಭ್ಯರ್ಥಿ ರಮೇಶ ಜಿಗಜಿಣಗಿ ಗೆಲುವು ಸಾಧಿಸಿದ ಹಿನ್ನೆಲೆ ಪಟ್ಟಣದ ಬಸವೇಶ್ವರ ವೃತ್ತದಲ್ಲಿ ತಾಲೂಕು ಬಿಜೆಪಿ ಮಂಡಲ ಕಾರ್ಯಕರ್ತರು ಸಾರ್ವಜನಿಕರಿಗೆ ಶರಬತ್ ವಿತರಿಸಿ ವಿಜಯೋತ್ಸವ ಆಚರಿಸಿದರು.
ಲೋಕಸಭೆಯ ಫಲಿತಾಂಶ ಹೊರಬೀಳುತ್ತಲೇ ವೃತ್ತದಲ್ಲಿ ಸೇರಿದ ಬಿಜೆಪಿ ಮಂಡಲ ಪದಾಧಿಕಾರಿಗಳು ಪಟಾಕಿ ಸಿಡಿಸಿ, ಮೋದಿ ಗೆಲುವಿಗೆ ಸಂತಸ ವ್ಯಕ್ತಪಡಿಸಿದರು.
ನಂತರ ಪಟ್ಟಣದ ವಿವಿಧ ವೃತ್ತಗಳಲ್ಲಿ ಪಟಾಕಿ ಸಿಡಿಸಿ, ಗುಲಾಲು ಎರಚಿ ಸಂಭ್ರಮಿಸಿದರು. ಬಸವರಾಜ ಸಜ್ಜನ, ಪ್ರವೀಣ ಕಂಟಿಗೊಂಡ, ಚಂದ್ರಶೇಖರ ಅಮಲಿಹಾಳ, ಮಲ್ಲು ಪಡಶೆಟ್ಟಿ, ಪ್ರಕಾಶ ನಂದಿಕೋಲ, ಸಂದೀಪ ಚೌರ, ಅಶೋಕ ನಾರಾಯಣಪುರ, ಶಿವಾನಂದ ಆಲಮೇಲ, ಬಸಲಿಂಗಪ್ಪ ಬಿರಾದಾರ, ಶ್ರೀಧರ ಮಲ್ಲೇದ, ಶ್ರೀಕಾಂತ ಪಾಟೀಲ, ಸೋಮು ಕೊಪ್ಪಾ, ರವಿ ಲಾಳಸಂಗಿ, ಸೈಫನ್ ನದಾಫ್, ಸಿದ್ದು ಕುನಳ್ಳಿ, ಪ್ರಶಾಂತ ಬಿರಾದಾರ ಮತ್ತಿತರರಿದ್ದರು.

Leave a Reply

Your email address will not be published. Required fields are marked *