ಪುರಸಭೆ ಅಧಿಕಾರಿಗಳ ನಿರ್ಲಕ್ಷೃ ಖಂಡಿಸಿ ಪ್ರತಿಭಟನೆ

ಸಿಂದಗಿ: ನಗರ ಸುಧಾರಣೆ ವೇದಿಕೆ ಕಾರ್ಯಕರ್ತರು, ನಗರದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳದ ಸ್ಥಳೀಯ ಪುರಸಭೆ ಅಧಿಕಾರಿಗಳ ದಿವ್ಯ ನಿರ್ಲಕ್ಷೃ ಖಂಡಿಸಿ ಶನಿವಾರ ಪ್ರತಿಭಟನೆ ನಡೆಸಿ, ಮುಖ್ಯಾಧಿಕಾರಿ ಸಯ್ಯೀದ್ ಅಹ್ಮದ್ ದಖನಿ ಅವರಿಗೆ ಮನವಿ ಸಲ್ಲಿಸಿದರು.
ವೇದಿಕೆ ಅಧ್ಯಕ್ಷ ಅಶೋಕ ಅಲ್ಲಾಪೂರ, ಶ್ರೀಶೈಲ ಯಳಮೇಲಿ, ರಾಜು ಭಾಸಗಿ, ಸಾಯಬಣ್ಣ ದೇವರಮನಿ, ಚೇತನ ಗುತ್ತೇದಾರ, ಸುನಂದ ಯಂಪೂರೆ, ಅಶೋಕ ನೆಗಿನಾಳ ಮಾತನಾಡಿ, ಸಮಸ್ಯೆ ಎಂದು ಬರುವ ಸಾರ್ವಜನಿಕರಿಗೆ ಸ್ಥಳೀಯ ಪುರಸಭೆ ಅಧಿಕಾರಿಗಳು ಸರಿಯಾಗಿ ಸ್ಪಂದಿಸುತ್ತಿಲ್ಲ. ಬರೀ ನೆಪ ಹೇಳಿಕೊಂಡು ಕಾಲಹರಣ ಮಾಡುತ್ತ ಸಾರ್ವಜನಿಕರನ್ನು ದಿನವೂ ಪೀಡಿಸುತ್ತಿದ್ದಾರೆೆ ಎಂದು ಆರೋಪಿಸಿದರು.
ಪಟ್ಟಣದ 12ನೇ ವಾರ್ಡ್‌ನ ಮಹಿಳಾ ನಿವಾಸಿ ಬೌರಮ್ಮ ಕರ್ಪೂರಮಠ ಮಾತನಾಡಿ, ನಾಲ್ಕು ತಿಂಗಳಿಂದಲೂ ಕುಡಿಯುವ ನೀರು ಪೂರೈಸಿಲ್ಲ. ಬೀದಿ ದೀಪಗಳಿಲ್ಲದೆ ಕತ್ತಲೆಯಲ್ಲೇ ಜೀವನ ಸಾಗಿಸಬೇಕಿದೆ. ಕತ್ತಲಾದರೆ ಸಾಕು ಕಿಡಿಗೇಡಿಗಳು ಮನೆ ಕಿಟಕಿ, ಬಾಗಿಲುಗಳಿಗೆ ಕಲ್ಲು ಹೊಡೆದು ಲುಕ್ಸಾನ್ ಮಾಡುತ್ತಿದ್ದರೂ ಕಂಬಗಳಿಗೆ ಬಲ್ಬ್ ಹಾಕಿಲ್ಲ. ಸಮಸ್ಯೆ ಹೇಳಿದರೂ ಅಧಿಕಾರಿಗಳು ಕಿವಿಗೊಡುತ್ತಿಲ್ಲ ಎಂದು ದೂರಿದರು.
ನಗರದ ಬಹುತೇಕ ಚರಂಡಿಗಳು ತುಂಬಿ ಕೊಳಚೆ ನೀರು ರಸ್ತೆಯಲ್ಲಿ ಹರಿದಾಡುತ್ತಿದೆ. ವ್ಯವಸ್ಥೆ ಸರಪಡಿಸಬೇಕಿರುವ ಪುರಸಭೆ ಅಧಿಕಾರಿ ಮತ್ತು ಸಿಬ್ಬಂದಿ ಕಣ್ಣು ಹಾಯಿಸುತ್ತಲೇ ಇಲ್ಲ. ರಸ್ತೆ ಬದಿ ಮೌಂಸ ಮಾರಾಟ ಎಗ್ಗಿಲ್ಲದೆ ನಡೆಯುತ್ತಿದೆ. ಕೆರೆ ನೀರು ತುಂಬಿಲ್ಲ. ಜ್ಞಾನದ ಕೊರತೆ ಇದ್ದರೆ ನಸುವೇಗೆ ಬನ್ನಿ. ಸಾರ್ವಜನಿಕ ಕೆಲಸ ಮಾಡಲು ನಿಮಗೆ ಭಯವೇಕೆ? ಯಾವ ಕೆಲಸಗಳನ್ನು ಹೇಗೆ ಮಾಡಿರುವಿರಿ ಎಂಬುದನ್ನು ಡೈರಿ ನಿರ್ವಹಣೆ ಮೂಲಕ ಜನರಿಗೆ ತಿಳಿಸಿ ಎಂದು ಸಲಹೆ ನೀಡಿದರು.
ನಗರದ ವಿವಿಧ ಸ್ಥಳಗಳಲ್ಲಿನ ವಿವಿಧ ಸಮಸ್ಯೆಗಳನ್ನು ಪುರಸಭೆ ಅಧಿಕಾರಿಗಳ ಗಮನಕ್ಕೆ ತಂದು, ಪಟ್ಟಣದ 12ನೇ ವಾರ್ಡ್‌ನ ಕುಡಿಯುವ ನೀರಿನ ಸಮಸ್ಯೆ 6ನೇ ವಾರ್ಡ್‌ನಲ್ಲಿ ನಡೆದ ಕಳಪೆ ಸಿಸಿ ರಸ್ತೆ ಕಾಮಗಾರಿ ಪರಿಶೀಲಿ, ಸಂಬಂಧಿಸಿದ ಗುತ್ತಿಗೆದಾರನಿಗೆ ಬಿಲ್ ನೀಡದಂತೆ ಎಚ್ಚರಿಕೆ ನೀಡಿದರಲ್ಲದೆ, ಒಂದು ವಾರದಲ್ಲಿ ಬೇಡಿಕೆಗಳು ಈಡೇರದಿದ್ದಲ್ಲಿ ಆಗಸ್ಟ್ ಕೊನೆಯಲ್ಲಿ ಧರಣಿ ಸತ್ಯಾಗ್ರಹ ಆರಂಭಿಸುವುದಾಗಿ ಎಚ್ಚರಿಕೆ ನೀಡಿದರು.
ಅವಧೂತ ಜೋಶಿ, ಶಿವಾನಂದ ತಾವರಖೇಡ, ಶಾಂತು ರಾಣಾಗೋಳ, ಚಾಂದಸಾಬ ಗಣಿಹಾರ, ರವಿ ಲಾಳಸಂಗಿ, ಮಲ್ಲು ಪೂಜಾರಿ, ರವಿ ಕಟಕೆ, ಕೆ.ಎಸ್. ಕಡಣಿ, ಬಸು ಅತನೂರ, ಎಂ.ಬಿ. ನಾವಿ, ಸಂತೋಷ ನಂದಿಕೋಲ್ ಸೇರಿ 12ನೇ ವಾರ್ಡ್‌ನ 25ಕ್ಕೂ ಹೆಚ್ಚು ಮಹಿಳೆಯರು ಪಾಲ್ಗೊಂಡಿದ್ದರು.
ಪ್ರತಿಭಟನಾಕಾರರಿಂದ ಮನವಿ ಸ್ವೀಕರಿಸಿದ ಮುಖ್ಯಾಧಿಕಾರಿ ಸಯ್ಯೀದ್ ಅಹ್ಮದ್ ದಖನಿ, ಬೇಡಿಕೆಗಳಿಗೆ ಶೀಘ್ರವಾಗಿ ಸ್ಪಂದಿಸುವುದಾಗಿ ಭರವಸೆ ನೀಡಿದ್ದರಿಂದ ಪ್ರತಿಭಟನಾಕಾರರು ಪ್ರತಿಭಟನೆ ಹಿಂಪಡೆದರು.

Leave a Reply

Your email address will not be published. Required fields are marked *