ಆಧುನಿಕತೆಯಿಂದ ಸಾಹಿತ್ಯ ಕ್ಷೇತ್ರ ಕ್ಷೀಣ

ಬೈಲಹೊಂಗಲ: ಆಧುನಿಕತೆಯಿಂದ ಸಾಹಿತ್ಯ ಕ್ಷೇತ್ರವು ಅತ್ಯಂತ ಕ್ಷೀಣವಾಗುತ್ತಿದ್ದು, ನಮ್ಮ ಸಂಸ್ಕೃತಿ, ಸಂಸ್ಕಾರ ಕೂಡ ಕಡೆಗಣನೆಯಾಗುತ್ತಿದೆ. ಇದರ ಉಳಿವಿಗಾಗಿ ಪ್ರತಿಯೊಬ್ಬರೂ ಪ್ರೇರಣೆ ನೀಡಿದಾಗ ಮಾತ್ರ ಮತ್ತೇ ಸಾಹಿತ್ಯ ವಲಯ ಪ್ರಚಲಿತವಾಗಲಿದೆ ಎಂದು ಶಾಖಾ ಮೂರುಸಾವಿರ ಮಠದ ಪ್ರಭುನೀಲಕಂಠ ಸ್ವಾಮೀಜಿ ಹೇಳಿದರು.

ಪಟ್ಟಣದ ಗಣಾಚಾರಿ ಶಿಕ್ಷಣ ಸಂಸ್ಥೆಯ ಅಕ್ಕಮಹಾದೇವಿ ಪದವಿ ಕಾಲೇಜ್ ಸಭಾಂಗಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ತಾಲೂಕು ಚುಟುಕು ಸಾಹಿತ್ಯ ಪರಿಷತ್ ನೂತನ ಘಟಕ, ಶ್ರೀ ಮಹಾಲಕ್ಷ್ಮೀ ಆಹಾರ ಮತ್ತು ತಂಪು ಪಾನೀಯ ಸಂಸ್ಕರಣಾ ಘಟಕ ಉದ್ಘಾಟನೆ ಮತ್ತು ಯಕ್ಕುಂಡಿಯ ಉಪನ್ಯಾಸಕ ಶ್ರೀಶೈಲ ಹೆಬ್ಬಳ್ಳಿ ಅವರು ರಚಿಸಿದ ‘ವಿರಚಿತ ಘಜಲ’ ಕೃತಿಗಳನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದರು.

ಶ್ರೀ ಭಗಳಂಬಾ ದೇವಸ್ಥಾನದ ಧರ್ಮಾಧಿಕಾರಿ ಡಾ.ವೀರಯ್ಯಸ್ವಾಮಿ ಹಿರೇಮಠ ಅವರು ನೇತೃತ್ವ ವಹಿಸಿ ಮಾತನಾಡಿದರು. ಚಿತ್ರನಟ ಶಿವರಂಜನ ಬೋಳಣ್ಣವರ, ಚುಸಾಪ ಜಿಲ್ಲಾಧ್ಯಕ್ಷ ಎಲ್.ಎಸ್.ಶಾಸ್ತ್ರಿ, ಚುಸಾಪ ಜಿಲ್ಲಾ ಕಾರ್ಯಾಧ್ಯಕ್ಷ ಡಾ.ಸಿ.ಕೆ.ಜೋರಾಪುರ, ಕಸಾಪ ಜಿಲ್ಲಾಧ್ಯಕ್ಷೆ ಮಂಗಲಾ ಮೆಟಗುಡ್ಡ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಸವರಾಜ ಗಾರ್ಗಿ, ನೂತನ ತಾಲೂಕು ಅಧ್ಯಕ್ಷ ಶಂಕರ ಸಾಗರ, ಕರಾಪ್ರಾ ಶಾಲಾ ಶಿಕ್ಷಕರ ಸಂಘದ ಉಪಾಧ್ಯಕ್ಷ ಎಸ್.ಡಿ.ಗಂಗಣ್ಣವರ, ತಾಲೂಕು ಉಪಾಧ್ಯಕ್ಷ ಹೇಮಾ ಕುಲಕರ್ಣಿ,

ಸರ್ಕಾರಿ ನೌಕರರ ಸಂಘದ ತಾಲೂಕಾಧ್ಯಕ್ಷ ಶಿವಾನಂದ ಕುಡಸೋಮಣ್ಣವರ, ಚುಟುಕು ಸಂಘಟನೆಯ ಗೌರವಾಧ್ಯಕ್ಷ ಮಹಾಂತೇಶ ರೇಶ್ಮಿ, ಪುರಸಭೆ ಮಾಜಿ ಅಧ್ಯಕ್ಷ ಬಸವರಾಜ ಜನ್ಮಟ್ಟಿ, ಪ್ರಾಚಾರ್ಯ ಡಾ.ಸಿ.ಬಿ.ಗಣಾಚಾರಿ, ಕಸಾಪ ತಾಲೂಕಾಧ್ಯಕ್ಷ ಎನ್.ಆರ್.ಠಕ್ಕಾಯಿ, ಸಾಹಿತಿ ಶಿವಪ್ರಸಾದ ಹುಲೆಪ್ಪನವರಮಠ, ಶಿಕ್ಷಕ ಚಂದ್ರಶೇಖರ ಭಜಂತ್ರಿ, ಪ್ರವೀಣ ಕುಲಕರ್ಣಿ, ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಹಾರುಗೊಪ್ಪ, ಉಪಾಧ್ಯಕ್ಷ ಸಿದ್ದು ನೇಸರಗಿ, ಶಿಕ್ಷಕಿ ಎಂ.ಆರ್.ಪಾಟೀಲ ಇತರರು ಇದ್ದರು.

ಬೈಲಹೊಂಗಲದಲ್ಲಿ ತಾಲೂಕು ಚುಟುಕು ಸಾಹಿತ್ಯ ಪರಿಷತ್‌ನ ನೂತನ ಘಟಕವನ್ನು ಪ್ರಭುನೀಲಕಂಠ ಸ್ವಾಮೀಜಿ ಉದ್ಘಾಟಿಸಿದರು. ಡಾ.ವೀರಯ್ಯಸ್ವಾಮಿ ಹಿರೇಮಠ, ಶ್ರೀಶೈಲ ಹೆಬ್ಬಳ್ಳಿ ಇತರರು ಇದ್ದರು.

Share This Article

ಒಂದು ತಿಂಗಳು ಬೇಳೆಕಾಳುಗಳನ್ನು ತಿನ್ನೋದು ಬಿಟ್ಟರೆ ಏನಾಗುತ್ತೆ ಗೊತ್ತಾ? ಇಲ್ಲಿದೆ ಉಪಯುಕ್ತ ಮಾಹಿತಿ….

ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…

ಪೋಷಕರೇ ಹುಷಾರ್‌! ಅಪ್ಪಿತಪ್ಪಿಯೂ ಮಕ್ಕಳ ಮುಂದೆ ಪೋಷಕರು ಈ ಕೆಲಸಗಳನ್ನು ಮಾಡಬೇಡಿ

 ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…

ನಿಮ್ಮ ಅಂಗೈನಲ್ಲಿ ಮೀನಿನ ಚಿಹ್ನೆ ಇದ್ರೆ ಏನಾಗುತ್ತೆ ಗೊತ್ತಾ? ಇಲ್ಲಿದೆ ನೋಡಿ ಅಚ್ಚರಿಯ ಸಂಗತಿ…

ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…