More

  ಸರ್ಕಾರದ ಕ್ರಮಕ್ಕೆ ಕೈ ಜೋಡಿಸಿ

  ಯಾದಗಿರಿ: ಮಾರಕ ಕರೊನಾ ವೈರಸ್ ತಡೆಗಟ್ಟಲು ಜನತೆ ಸರ್ಕಾರ ಕೈಗೊಂಡ ಕ್ರಮಗಳಿಗೆ ಸಹಕರಿಸುವಂತೆ ಶಾಸಕ ವೆಂಕಟರಡ್ಡಿ ಮುದ್ನಾಳ್ ಮನವಿ ಮಾಡಿದರು.

  ತಮ್ಮ ಜನ್ಮದಿನದ ನಿಮಿತ್ತ ಶನಿವಾರ ನಗರದ ಹೇಮರೆಡ್ಡಿ ಮಲ್ಲಮ್ಮ ಶಿಕ್ಷಣ ಸಂಸ್ಥೆ ಆವರಣದಲ್ಲಿ ವಿಕಾಸ ಅಕಾಡೆಮಿಯಿಂದ ಹಮ್ಮಿಕೊಂಡ ಉಚಿತ ಅನ್ನ ಸಂತರ್ಪಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಕರೊನಾ ವೈರಸ್ನಿಂದ ಗುಳೆ ಹೋದ ಜನತೆ ಮರಳಿ ತಮ್ಮೂರಿಗೆ ವಾಪಸ್ ಆಗುತ್ತಿದ್ದಾರೆ. ಅಂಥವರು ನಗರ ಪ್ರವೇಶಿದ್ದಲ್ಲಿ ಹಸಿವಿನಿಂದ ತೊಂದರೆ ಪಡುವ ಅವಶ್ಯಕತೆ ಇಲ್ಲ. ಅವರಿಗಾಗಿ ಬಿಸಿಯೂಟ ಹಾಗೂ ನೀರಿನ ವ್ಯವಸ್ಥೆ ಮಾಡಲಾಗಿದೆ ಎಂದರು.

  ಇಂದಿನಿಂದ ನಿರಂತರವಾಗಿ ಏ. 14ರ ವರೆಗೆ ಅನ್ನ ದಾಸೋಹ ನಡೆಯಲಿದೆ. ಕೂಲಿ ಕಾರ್ಮಿಕರಿಗೆ, ಗುಳೆ ಜನತೆಗೆ, ನಿರ್ಗತಿಕರಿಗೆ, ಕರ್ತವ್ಯದಲ್ಲಿ ತೊಡಗಿದ ಸಿಬ್ಬಂದಿಗಳಿಗೆ ಅವರಿರುವ ಸ್ಥಳದಲ್ಲೇ ಊಟದ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದರು.

  ಅಕಾಡೆಮಿ ಜಿಲ್ಲಾ ಸಂಚಾಲಕ ಶರಣಗೌಡ ಬಾಡಿಯಾಳ ಮಾತನಾಡಿ, ಸಂಚಾಲಕರಾದ ಡಾ.ಬಸವರಾಜ ಪಾಟೀಲ್ರ ನಿರ್ದೇಶನದಂತೆ ಉಚಿತ ಅನ್ನ ಸಂತರ್ಪಣಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಶಾಸಕ ಮುದ್ನಾಳ್ ಅವರ ಮಾರ್ಗದರ್ಶನದಲ್ಲಿ ಮುಂದಿನ 2 ವಾರಗಳ ಕಾಲ ನಗರದಾದ್ಯಂತ ಆಹಾರ ವಿತರಣೆಯಾಗಲಿದೆ ಎಂದು ಹೇಳಿದರು.

  ಪ್ರಮುಖರಾದ ಅಯ್ಯಣ್ಣ ಹುಂಡೆಕಾರ, ಸಿದ್ದಪ್ಪ ಹೊಟ್ಟಿ, ಭೀಮನಗೌಡ ಕ್ಯಾತನಾಳ, ಖಂಡಪ್ಪ ದಾಸನ್, ಸಿದ್ದಣಗೌಡ ಕಾಡಂನೂರ, ಬಸವರಾಜ ಚಿಕ್ಕಬೂದರು, ಶಿವು ಕೊಂಕಲ್, ರಮೇಶ ದೊಡ್ಮನಿ, ಚಂದ್ರರೆಡ್ಡಿ ಅಲ್ಲಿಪೂರ, ಸ್ವಾಮಿದೇವ ದಾಸನಕೇರಿ, ರುದ್ರಗೌಡ, ಅಂಬಯ್ಯ ಶಾಬಾದಿ, ಮಹಾದೇವಪ್ಪ ಯಲಸತ್ತಿ, ವಿಲಾಸ ಪಾಟೀಲ್​ ಇದ್ದರು.

  See also  PHOTO GALLERY| ಬರ್ತಡೇ ಗರ್ಲ್​ ಭಾವನಾ ರಾವ್​ ಹಾಟ್​ ಫೋಟೋಗಳು!​

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts