16 C
Bangalore
Saturday, December 7, 2019

ನೀವು ನರ್ಸರಿ ಮಾಡಲು ನಿರ್ಧರಿಸಿದ್ದೀರಾ? ಇಲ್ಲಿದೆ ನೋಡಿ ಮಣ್ಣು ತುಂಬಲು ಸರಳ ಸಾಧನ

Latest News

ಎಲ್ಲ ಸಮುದಾಯಗಳ ನಾಯಕ ಬಾಬಾಸಾಹೇಬ್

ಚಿಕ್ಕಬಳ್ಳಾಪುರ: ಪುತ್ಥಳಿಗೆ ಮಾಲಾರ್ಪಣೆ, ಉಪನ್ಯಾಸ ಸೇರಿ ವಿವಿಧ ಕಾರ್ಯಕ್ರಮಗಳೊಂದಿಗೆ ಭಾರತ ರತ್ನ, ಸಂವಿಧಾನ ಶಿಲ್ಪಿ ಡಾ ಬಿ.ಆರ್.ಅಂಬೇಡ್ಕರ್‌ರವರ ಪರಿನಿಬ್ಬಾಣ ದಿನ ಶುಕ್ರವಾರ ನಡೆಯಿತು....

ಮತಯಂತ್ರಕ್ಕೆ ಪೊಲೀಸ್ ಸರ್ಪಗಾವಲು

ಹಾವೇರಿ: ಜಿಲ್ಲೆಯ ರಾಣೆಬೆನ್ನೂರ ಹಾಗೂ ಹಿರೇಕೆರೂರ ವಿಧಾನಸಭಾ ಕ್ಷೇತ್ರಗಳ ಮತಯಂತ್ರಗಳನ್ನು ತಾಲೂಕಿನ ದೇವಗಿರಿಯಲ್ಲಿರುವ ಸರ್ಕಾರಿ ಇಂಜಿನಿಯರಿಂಗ್ ಕಾಲೇಜ್​ನ ಸ್ಟ್ರಾಂಗ್ ರೂಂನಲ್ಲಿ ಪೊಲೀಸ್ ಸರ್ಪ...

ಅಳಿದುಳಿದ ಉಳ್ಳಾಗಡ್ಡಿಗೂ ಡಿಮಾಂಡ್

ರಾಣೆಬೆನ್ನೂರ: ಕಳೆದ ಒಂದು ತಿಂಗಳ ಹಿಂದೆ ಸಂಪೂರ್ಣ ಬೆಲೆ ಕಳೆದುಕೊಂಡಿದ್ದ ಉಳ್ಳಾಗಡ್ಡಿ ಬೆಳೆಗೆ ಇದೀಗ ಭಾರಿ ಡಿಮಾಂಡ್ ಬಂದಿದೆ. ದರದಲ್ಲಿ ಕೂಡ ಭಾರಿ...

ಸಿಸಿಐನಿಂದ ಹತ್ತಿ ಖರೀದಿ ಶುರು

ಲಕ್ಷ್ಮೇಶ್ವರ: ಒಂದು ವಾರದಿಂದ ಮೋಡ ಕವಿದ ವಾತಾವರಣ ಮತ್ತು ತುಂತುರು ಮಳೆಯಿಂದಾಗಿ ಭಾರತೀಯ ಹತ್ತಿ ನಿಗಮ (ಸಿಸಿಐ)ದವರು ಬೆಂಬಲ ಬೆಲೆಯಡಿ ಹತ್ತಿ...

ಕೆಲಗೇರಿ ಕೆರೆ ಸಂರಕ್ಷಣೆಗೆ ಕ್ರಮ

ಧಾರವಾಡ: ನಗರದ ಇತಿಹಾಸ ಮತ್ತು ನೈಸರ್ಗಿಕ ಪರಂಪರೆ ಪ್ರತಿನಿಧಿಸುವ ಕೆಲಗೇರಿ ಮತ್ತು ಸಾಧನಕೇರಿ ಕೆರೆಗಳನ್ನು ಸಂರಕ್ಷಿಸಿ ಅಬಿವೃದ್ಧಿಪಡಿಸಲಾಗುತ್ತದೆ. ಕೆರೆಗಳ ಸೌಂದಯೀಕರಣಗೊಳಿಸಿ ಪ್ರವಾಸಿತಾಣಗಳಾಗಿ ರೂಪಿಸಲು...

ಕಾಳುಮೆಣಸು, ಅಡಕೆ, ಅಲಂಕಾರಿಕ ಹೂವಿನ ಗಿಡ ಇಂಥ ಬಹುಬೇಡಿಕೆಯುಳ್ಳ ಸಸಿಗಳ ನರ್ಸರಿ ಮಾಡಲು ನಿರ್ಧರಿಸಿದ್ದರೆ, ಸಾವಿರಾರು ಕವರ್​ಗಳಿಗೆ ಮಣ್ಣು ತುಂಬುವುದು ಹೇಗಪ್ಪ ಎಂದು ಚಿಂತಿಸುತ್ತಿರಬಹುದು. ಅಂಥವರಿಗೆಲ್ಲ ಈ ಮಣ್ಣು ತುಂಬುವ ಸರಳ ಸಾಧನ ಬಹಳ ಸಹಕಾರಿಯಾಗಬಹುದು. ಇದೊಂದು ನಿರುಪಯುಕ್ತ ಪರಿಕರಗಳನ್ನೇ ಉಪಯೋಗಿಸಿಕೊಂಡು ಸಿದ್ಧ ಮಾಡಿರುವ ಸರಳವಾದ ಉಪಕರಣ. ಕೃಷಿಭೂಮಿಯಲ್ಲಿ ಮೈಮುರಿದು ದುಡಿಯುವ ಉತ್ಸಾಹಿ ಕೃಷಿಕನ ಕಲ್ಪನೆಯಿಂದ ಸಿದ್ಧಗೊಂಡಿದೆ ಈ ಸಾಧನ. ಇದನ್ನು ಆವಿಷ್ಕರಿಸಿದವರು ಉತ್ತರ ಕನ್ನಡ ಜಿಲ್ಲೆ ಯಲ್ಲಾಪುರ ತಾಲೂಕಿನ ಕುಮ್ಮನಮನೆಯ ದಿನೇಶ ಶಾಂತಾರಾಮ ಹೆಗಡೆ.

ಸಿದ್ಧಗೊಂಡಿದ್ದು ಹೇಗೆ?: ಪ್ರಗತಿಪರ ಕೃಷಿಕರಾದ ದಿನೇಶ ಮತ್ತು ಸುಬ್ರಾಯ ಹೆಗಡೆ ಸಹೋದರರದ್ದು ಪ್ರಧಾನವಾಗಿ ಅಡಕೆ ಕೃಷಿ. ತೆಂಗು, ಭತ್ತದ ಕೃಷಿಯನ್ನು ಸಹ ಮಾಡುತ್ತಿದ್ದಾರೆ. ಅಲ್ಪಪ್ರಮಾಣದಲ್ಲಿ ಕಾಳುಮೆಣಸು, ಏಲಕ್ಕಿ ಬೆಳೆಗಳೂ ಇವೆ. ಈ ಸಹೋದರರು ತಮ್ಮ ತೋಟದಲ್ಲಿ ಇನ್ನಷ್ಟು ಕಾಳುಮೆಣಸಿನ ಕೃಷಿ ಮಾಡುವ ಉದ್ದೇಶದಿಂದ ನರ್ಸರಿ ಮಾಡಲು ನಿರ್ಧರಿಸಿದರು. ಹೊಸ್ಮನೆಯ ಕಾಳುಮೆಣಸಿನ ಬೆಳೆಗಾರರಾದ ಶ್ರೀಧರ ಅವರ ಮಾರ್ಗದರ್ಶನದಲ್ಲಿ ನರ್ಸರಿಗೆ ಬೇಕಾಗುವ ಪರಿಕರಗಳನ್ನು (ಮಣ್ಣು, ಮರಳು, ಗೊಬ್ಬರ, ಪ್ಲಾಸ್ಟಿಕ್ ಕವರ್) ಹೊಂದಿಸಿಕೊಂಡರು. ಆ ಸಮಯದಲ್ಲಿ ದಿನೇಶ ಅವರಿಗೆ ಪ್ಲಾಸ್ಟಿಕ್ ಕವರಿನಲ್ಲಿ ಮಣ್ಣು ತುಂಬುವುದೇ ದೊಡ್ಡ ಸಮಸ್ಯೆಯಾಗಿ ಕಾಡಿತ್ತು. ಅದಕ್ಕೊಂದು ಪರ್ಯಾಯ ವ್ಯವಸ್ಥೆ ಮಾಡಬೇಕೆಂದು ನಿರ್ಧರಿಸಿದರು. ಹಾಗೆ ಬಹಳ ವಿಚಾರಿಸಿ ಕಾರ್ಯರೂಪಕ್ಕೆ ಇಳಿಸಿದ್ದೇ ಈ ಸರಳ ಸಾಧನ.

ತಮ್ಮ ಕಲ್ಪನಾಶಕ್ತಿ, ಕೌಶಲದಿಂದ ಸಿದ್ಧಪಡಿಸಿದ ಈ ವಿನೂತನ ಬಗೆಯ ಸಾಧನಕ್ಕೆ ಸಾವಿರಾರು ರೂಪಾಯಿ ಹಣವನ್ನೇನು ಇವರು ವ್ಯಯ ಮಾಡಿಲ್ಲ. ಬೇಕಾಗುವ ಪರಿಕರಗಳನ್ನು ತರಲು ಮಾರುಕಟ್ಟೆಯ ಕದವನ್ನು ತಟ್ಟಲಿಲ್ಲ. ತಮ್ಮ ಮನೆಯಲ್ಲಿಯೇ ಇರುವ ವಸ್ತುಗಳನ್ನು ಉಪಯೋಗಿಸಿಕೊಂಡು ಮಣ್ಣು ತುಂಬಲು ಸಹಾಯವಾಗುವ ಪುಟ್ಟ ಸಾಧನವನ್ನು ಸಿದ್ಧಪಡಿಸಿದ್ದು ವಿಶೇಷ. ದೊಡ್ಡ ಪ್ಲಾಸ್ಟಿಕ್ ಚೀಲ (ಹಿಂಡಿ/ ಉಪ್ಪಿನ ಚೀಲವಾದರೂ ಆದೀತು), ಎರಡು ಪೈಪಿನ ತುಂಡು (ಮೊಳ ಉದ್ದವಿರಲಿ), ಬಲಿಷ್ಠವಾದ ಮೂರು ಗೂಟ, ಬಾಂಬು ಗಳದ ಪುಟ್ಟ ಸಲಾಕೆ, ಕಟ್ಟಲು ಬಳ್ಳಿ ಇವಿಷ್ಟು ಇದ್ದರೆ ಮಣ್ಣನ್ನು ತುಂಬಬಹುದಾದ ಸರಳವಾದ ಸಾಧನವನ್ನು ನೀವೂ ಸಹ ರೂಪಿಸಿಕೊಳ್ಳಬಹುದು.

ದೊಡ್ಡ ಪ್ಲಾಸ್ಟಿಕ್ ಚೀಲವನ್ನು ಅರ್ಧಕ್ಕೆ ಮಡಿಚಿಕೊಂಡು, ಚೀಲದ ತಳಭಾಗದ ಎರಡು ಮೂಲೆಗಳಿಗೆ ಪೈಪ್ ಹೋಗುವಷ್ಟೇ ರಂಧ್ರ ಮಾಡಿ, ಅದಕ್ಕೆ ಪೈಪ್ ಜೋಡಿಸಿದ್ದಾರೆ. ಪೈಪಿನ ತುಂಡು ಕಳಚಿ ಬೀಳದಂತೆ ಬಳ್ಳಿಯಿಂದ ಗಟ್ಟಿಯಾಗಿ ಕಟ್ಟಿದ್ದಾರೆ. ಮಣ್ಣನ್ನು ಬುಟ್ಟಿಯಿಂದ ಹೊಯ್ಯಲು ಅನುಕೂಲವಾಗುವಂತೆ ಚೀಲದ ಮೇಲ್ಭಾಗವನ್ನು ರೌಂಡ್ ಆಕಾರದಲ್ಲಿ ಸುತ್ತಿದ್ದಾರೆ (ಚಿತ್ರವನ್ನು ಗಮನಿಸಿ). ಆಮೇಲೆ ಮೂರು ಕಡೆಗಳಿಗೆ ಭದ್ರವಾಗಿ ಗೂಟವನ್ನು ನೆಲಕ್ಕೆ ಹುಗಿದು, ಆ ಗೂಟಕ್ಕೆ ಪೈಪನ್ನು ಜೋಡಿಸಿದ ಪ್ಲಾಸ್ಟಿಕ್ ಚೀಲವನ್ನು ಕಟ್ಟಿದ್ದಾರೆ. ಮೇಲಿನಿಂದ ಒಬ್ಬರು ಮಣ್ಣನ್ನು ಹಾಕಿದರೆ, ಕೆಳಗಡೆಗೆ ಎರಡು ಜನ ಪೈಪಿನಿಂದ ಬೀಳುವ ಮಣ್ಣಿಗೆ ಪುಟ್ಟ ಪ್ಲಾಸ್ಟಿಕ್ ಕವರ್​ಗಳನ್ನು ಹಿಡಿದು ಸುಲಭವಾಗಿ ಮಣ್ಣು ತುಂಬಿಕೊಳ್ಳಬಹುದು. ಈ ವಿಧಾನದಲ್ಲಿ ಮಣ್ಣನ್ನು ಬಹುಬೇಗ ತುಂಬಲು ಸಾಧ್ಯ. ಕನಿಷ್ಠ ನಾಲ್ಕು ಜನರಿದ್ದರೆ ಒಂದು ತಾಸಿನಲ್ಲಿ ಎಂಟು ನೂರು ಕವರ್​ಗಳಿಗೆ ಮಣ್ಣು ತುಂಬಬಹುದು ಎನ್ನುತ್ತಾರೆ ಕೃಷಿಕ ದಿನೇಶ.

-ಗಣಪತಿ ಹಾಸ್ಪುರ

Stay connected

278,739FansLike
581FollowersFollow
620,000SubscribersSubscribe

ವಿಡಿಯೋ ನ್ಯೂಸ್

VIDEO| ಎಕ್ಸ್​ಪ್ರೆಸ್​ ರೈಲಿಗೆ ಸಿಲುಕುತ್ತಿದ್ದ ವ್ಯಕ್ತಿಯ ಜೀವ ಉಳಿಸಿದ ಯೋಧ:...

ಥಾಣೆ: ರೈಲ್ವೆ ರಕ್ಷಣಾ ಪಡೆಯ ಯೋಧರೊಬ್ಬರು ಎಕ್ಸ್​ಪ್ರೆಸ್​ ರೈಲಿಗೆ ಸಿಲುಕುತ್ತಿದ್ದ ವ್ಯಕ್ತಿಯೊಬ್ಬನನ್ನು ರಕ್ಷಣೆ ಮಾಡುವ ಮೂಲಕ ಸಮಯಪ್ರಜ್ಞೆ ಮರೆದಿರುವ ಘಟನೆ ಮಹಾರಾಷ್ಟ್ರದ ಥಾಣೆ ರೈಲ್ವೆ ನಿಲ್ದಾಣದಲ್ಲಿ ಬುಧವಾರ ನಡೆದಿದ್ದು, ಇದಕ್ಕೆ...

VIDEO| ನನ್ನನ್ನು ಯಾರೂ ಮುಟ್ಟಲಾರರು; ಸ್ವಯಂಘೋಷಿತ ದೇವಮಾನವ ನಿತ್ಯಾನಂದ ಹೇಳಿಕೆ

ನವದೆಹಲಿ: "ನನ್ನನ್ನು ಯಾರೂ ಮುಟ್ಟಲಾರರು, ನಿಮಗೊಂದು ಸತ್ಯ ಹೇಳುತ್ತೇನೆ. ನಾನೂ ಪರಮ ಶಿವ, ಅರ್ಥವಾಯ್ತ...?" ಎಂದು ಅತ್ಯಾಚಾರದ ಆರೋಪಿ ನಿತ್ಯಾನಂದ ವಿಡಿಯೋಂದರಲ್ಲಿ ಹೇಳಿದ್ದಾನೆ. ಯಾವ ಕೋರ್ಟ್​ ಕೂಡ ನನ್ನ ಬಗ್ಗೆ ತೀರ್ಪು ನೀಡಲಾರದು. ಯಾರೂ...

VIDEO| ಮದುವೆ ಸಮಾರಂಭದಲ್ಲಿ ಡ್ಯಾನ್ಸ್​ ನಿಲ್ಲಿಸುತ್ತಿದ್ದಂತೆ ಯುವತಿ ಮೇಲೆ ಫೈರಿಂಗ್​:...

ಲಖನೌ: ಮದುವೆ ಸಂಭ್ರಮದಲ್ಲಿ ಡ್ಯಾನ್ಸ್​ ಮಾಡುವುದನ್ನು ನಿಲ್ಲಿಸುತ್ತಿದ್ದಂತೆ ನೃತ್ಯಗಾರ್ತಿಯ ಮುಖಕ್ಕೆ ಫೈರಿಂಗ್​ ಮಾಡಿರುವ ಘಟನೆ ಉತ್ತರ ಪ್ರದೇಶದ ಚಿತ್ರಕೂಟದಲ್ಲಿ ಕಳೆದ ವಾರ ನಡೆದಿರುವುದಾಗಿ ವರದಿಯಾಗಿದೆ. ಘಟನೆಯಲ್ಲಿ ಗಾಯಗೊಂಡ ಯುವತಿಯನ್ನು ಕಾನ್ಪುರ ಆಸ್ಪತ್ರೆಗೆ...

VIDEO: ಎನ್​ಕೌಂಟರ್ ನಡೆಸಿದ ಪೊಲೀಸರನ್ನು ಹೆಗಲ ಮೇಲೆ ಹೊತ್ತು ಸಂಭ್ರಮಿಸಿದ...

ಹೈದರಾಬಾದ್​​: ಪಶುವೈದ್ಯೆ ದಿಶಾ ಅತ್ಯಾಚಾರ ಮತ್ತು ಕೊಲೆ ಆರೋಪಿಗಳನ್ನು ಎನ್​ಕೌಂಟರ್​​ನಲ್ಲಿ ಹತ್ಯೆಗೈದ ಪೊಲೀಸರನ್ನು ಹೈದರಾಬಾದ್​​ ಜನತೆ ಹೆಗಲ ಮೇಲೆ ಹೊತ್ತು ಜಯಘೊಷ ಕೂಗಿ ಸಂಭ್ರಮಿಸಿದ್ದಾರೆ. ಶುಕ್ರವಾರ ಬೆಳಗ್ಗೆ ಆರೋಪಿಗಳ ಎನ್​ಕೌಂಟರ್​ ಸುದ್ಧಿ...

ಉಪಚುನಾವಣೆ ಮತದಾನ ಅಂತ್ಯ: ಮತಗಟ್ಟೆ ಸಮೀಕ್ಷೆಯಲ್ಲಿ ಬಿಜೆಪಿಯದ್ದೇ ಮೇಲುಗೈ

ಬೆಂಗಳೂರು: ರಾಜ್ಯದ 15 ಕ್ಷೇತ್ರಗಳ ಉಪಚುನಾವಣೆಯ ಮತದಾನ ಪ್ರಕ್ರಿಯೆ ಗುರುವಾರ ಸಂಜೆ 6 ಗಂಟೆಗೆ ಪೂರ್ಣಗೊಂಡಿತು. ಸಣ್ಣಪುಟ್ಟ ಗಲಾಟೆಗಳು ಹಾಗೂ ಅಲ್ಲಲ್ಲಿ ಕೆಲ ಇವಿಎಂಗಳ ದೋಷ ಹೊರತುಪಡಿಸಿದರೆ ಉಪಚುನಾವಣೆಯ ಮತದಾನ...

VIDEO| ವಿಕೆಟ್​ ಕಿತ್ತ ಖುಷಿಯಲ್ಲಿ ಕರವಸ್ತ್ರವನ್ನು ಕಡ್ಡಿಯನ್ನಾಗಿಸಿ ಸಂಭ್ರಮ: ಬೌಲರ್​ನ...

ನವದೆಹಲಿ: ಯಾವುದೇ ಆಟವಾಗಿರಲಿ ಆಟಗಾರರಿಗೆ ತಮ್ಮ ಸಂಭ್ರಮದ ಕ್ಷಣ ಸ್ಮರಣೀಯವಾಗಿರುತ್ತದೆ. ಹಲವರು ವಿಭಿನ್ನ ರೀತಿಯಲ್ಲಿ ಸಂಭ್ರಮಿಸುವ ಪ್ರಯತ್ನವನ್ನು ಮೈದಾನದಲ್ಲಿ ಮಾಡುತ್ತಿರುತ್ತಾರೆ. ಇದೀಗ ದಕ್ಷಿಣ ಆಫ್ರಿಕಾ ಬೌಲರ್​ ಒಬ್ಬರು ವಿಕೆಟ್​ ಪಡೆದ...