More

  ಸೆಟ್ಟೇರಿತು ಸಿಂಹರೂಪಿಣಿ; ಶ್ರೀಮಾರಮ್ಮ ದೇವಿಯ ಕುರಿತಾದ ಭಕ್ತಿಪ್ರಧಾನ ಚಿತ್ರ

  ಬೆಂಗಳೂರು: ‘ಜೆಂಟಲ್‌ಮ್ಯಾನ್’, ‘ಕಬ್ಜ’, ‘ಮದಗಜ’ ಮತ್ತು ‘ಕೆಜಿಎಫ್’ ಚಿತ್ರಗಳಿಗೆ ಅಮ್ಮನ ಕುರಿತ ಹಾಡುಗಳನ್ನು ಬರೆದಿರವ ಕಿನ್ನಾಳ್ ರಾಜ್ ಚಿತ್ರಕಥೆ, ಸಂಭಾಷಣೆ, ಸಾಹಿತ್ಯ ಬರೆದು ನಿರ್ದೇಶನ ಮಾಡುತ್ತಿರುವ ಸಿನಿಮಾ ‘ಸಿಂಹರೂಪಿಣಿ’.

  ತುಳಸಿ ಹಬ್ಬದ ಶುಭ ದಿನದಂದು ಶ್ರೀಆದಿಶಕ್ತಿ ಮಾರಮ್ಮ ದೇವಾಲಯದಲ್ಲಿ ಚಿತ್ರದ ಮುಹೂರ್ತ ನಡೆಯಿತು. ಈ ಚಿತ್ರಕ್ಕೆ ಕೆ.ಎಂ ನಂಜುಡೇಶ್ವರ ಕಥೆ ಬರೆದು ನಿರ್ಮಿಸುತ್ತಿದ್ದಾರೆ. ಶ್ರೀಮಾರಮ್ಮ ದೇವಿಯ ಕುರಿತಾದ ಚಿತ್ರವಿದು. ರಾಕ್ಷಸರನ್ನು ಸಂಹಾರ ಮಾಡಲು ಪಾರ್ವತಿದೇವಿ ಏಳು ಅವತಾರಗಳಲ್ಲಿ ಭೂಮಿಗೆ ಬರುತ್ತಾರೆ. ಈ ಸಿನಿಮಾ ಮಾರಮ್ಮ ದೇವಿಯ ಕುರಿತಾಗಿದೆ ಎಂದು ಮಾಹಿತಿ ನೀಡುತ್ತದೆ ಚಿತ್ರತಂಡ. ತಾರಾಗಣದಲ್ಲಿ ಹರೀಶ್ ರಾಯ್, ಯಶ್ ಶೆಟ್ಟಿ, ದಿನೇಶ್ ಮಂಗಳೂರು, ಪುನೀತ್ ರುದ್ರನಾಗ್, ನೀನಾಸಂ ಅಶ್ವತ್ಥ, ಸುಮನ್, ತಮಿಳಿನ ದೀನಾ ಅಭಿನಯಿಸಲಿದ್ದಾರೆ.

  ಚಿತ್ರದಲ್ಲಿ ನಾಲ್ಕು ಗೀತೆಗಳಿದ್ದು, ಆಕಾಶ್‌ಪರ್ವ ಸಂಗೀತವಿರಲಿದೆ. ಉಳಿದಂತೆ ನಂದಕುಮಾರ್ ಛಾಯಾಗ್ರಹಣ, ವೆಂಕಿ.ಯು.ಡಿ.ವಿ ಸಂಕಲನವಿರಲಿದೆ. ಬೆಂಗಳೂರು, ದೊಡ್ಡಬಳ್ಳಾಪುರ ಹಾಗೂ ಕರ್ನಾಟಕದ ಪುಣ್ಯ ಕ್ಷೇತ್ರಗಳಲ್ಲಿ ಚಿತ್ರೀಕರಣ ನಡೆಯಲಿದ್ದು, ಅಂದುಕೊಂಡಂತೆ ಆದರೆ ಮುಂದಿನ ಯುಗಾದಿ ಹಬ್ಬಕ್ಕೆ ಸಿನಿಮಾ ರಿಲೀಸ್ ಮಾಡುವ ಯೋಚನೆ ಚಿತ್ರತಂಡದ್ದು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts