ಚನ್ನಗಿರಿ: ಸಹಕಾರ ಸಂಘ ಬೆಳೆಯಲು ಎಲ್ಲರ ಸಹಕಾರ ಮುಖ್ಯ. ಸಂಘದಿಂದ ನಮಗೆ ಏನು ಸಿಗುತ್ತದೆ ಎನ್ನುವ ಬದಲಿಗೆ ನಾವು ಸಂಘಕ್ಕೆ ಏನು ಕೊಡುಗೆ ನೀಡಲು ಸಾಧ್ಯ ಎಂದು ತಿಳಿದಾಗ ಮಾತ್ರ ಸಂಘ ಉಳಿಯುತ್ತದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಲ್. ಜಯಪ್ಪ ತಿಳಿಸಿದರು.

ತಾಲೂಕಿನ ವಿಠಲ ರುಕುಮಾಯಿ ಕಲ್ಯಾಣ ಮಂದಿರದಲ್ಲಿ ಶನಿವಾರ ಆಯೋಜಿಸಿದ್ದ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಪತ್ತಿನ ಸಹಕಾರ ಸಂಘದ ರಜತ ಮಹೋತ್ಸವ ಉದ್ಘಾಟಿಸಿ ಮಾತನಾಡಿದರು.
ಸಂಘಗಳನ್ನು ಕಟ್ಟಿ ನಡೆಸಿಕೊಂಡು ಹೋಗುವುದು ಸುಲಭದ ಮಾತಲ್ಲ. ಪ್ರತಿ ಯೊಬ್ಬರ ಮನಸ್ಸುಗಳು ಒಂದಾಗಿರಬೇಕು. ಪ್ರಾರಂಭದಲ್ಲಿದ್ದ ಮನಸ್ಸುಗಳು ಕೊನೆಯವರೆಗೂ ಒಂದೇ ತೆರನಾಗಿರಬೇಕು ಎಂದರು.
5 ಲಕ್ಷ ಮೂಲ ಬಂಡವಾಳದೊಂದಿಗೆ ಪ್ರಾರಂಭವಾಗಿ ಇಂದು 5 ಕೋಟಿ ರೂ. ವ್ಯವಹಾರವನ್ನು ನಡೆಸಿಕೊಂಡು ಬರುತ್ತಿದೆ ಎಂದು ತಿಳಿಸಿದರು.
ಪ್ರಾಥಮಿಕ ಶಾಲಾ ಶಿಕ್ಷಕರ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಕೆ.ಎಚ್. ರಂಗನಾಥ್, ಉಪಾಧ್ಯಕ್ಷ ಎಚ್. ಆನಂದಪ್ಪ, ಮಹ್ಮದ್ ಶಾಹೀರ್ ಹುಸೇನ್, ಗೌರವ ಅಧ್ಯಕ್ಷ ಎಲ್. ಜಯಪ್ಪ, ಆಡಳಿತ ಮಂಡಳಿ ನಿರ್ದೇಶಕರಾದ ಡಿ.ಎ. ರಾಜಪ್ಪ, ಪಿ.ಟಿ. ಬೆನಕಪ್ಪ, ಕೆ.ಎನ್. ಜಗದೀಶ್, ಎಚ್.ಒ. ಶಿವಮೂರ್ತಿ, ಟಿ.ಕೆ. ರೇವಣ್ಣ, ಡಿ.ಎಂ. ಬಸವರಾಜ್, ಬಿ. ರುದ್ರೇಶ್, ಎಸ್.ಬಿ. ರುದ್ರೇಶ್, ಕೆ. ಪ್ರಮೋದ್, ಸುಮಾ, ಡಿ. ರತ್ನಮ್ಮ, ಡಿ.ಸಿ. ಜಗದೀಶ್ ಇದ್ದರು.