ಹಲವು ನಟಿಯರ ಜೀವನಧಾರಿತ ಸಿನಿಮಾಗಳನ್ನು ಈಗಾಗಲೇ ತೆರೆ ಮೇಲೆ ತರಲಾಗಿದೆ. ಈ ಹಿಂದೆ ನಟಿಯರಾದ ಸಾವಿತ್ರಿ, ಜಯಲಲಿತಾ ಸೇರಿ ಹಲವರ ಬದುಕಿನ ಸುತ್ತ ಕಥೆ ಹೆಣೆಯಲಾಗಿತ್ತು. ಇದೀಗ ಈ ಸಾಲಿಗೆ ಮತ್ತೊಬ್ಬ ನಟಿಯ ಬಯೋಪಿಕ್ ಸೇರ್ಪಡೆಯಾಗುತ್ತಿದೆ. ಅವರೇ ಸಿಲ್ಕ್ ಸ್ಮಿತಾ. ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಸೇರಿ ಸುಮಾರು 450ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದ ಸಿಲ್ಕ್ ಸ್ಮಿತಾ 1996ರಲ್ಲಿ ದುರಂತ ಅಂತ್ಯ ಕಂಡಿದ್ದರು. ಅವರ ಬದುಕಿನ ಸುತ್ತ ಹಲವು ವಿಷಯಗಳು ಸುಳಿದಾಡಿದ್ದವು. ಸೋಮವಾರ (ನ.2) ಸಿಲ್ಕ್ ಸ್ಮಿತಾರ 64ನೇ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಅವರ ಬಯೋಪಿಕ್ ಘೋಷಣೆಯಾಗಿದೆ. ‘ಸಿಲ್ಕ್ ಸ್ಮಿತಾ: ದ ಕ್ವೀನ್ ಆ್ ಸೌತ್’ ಎಂದು ಹೆಸರಿಡಲಾಗಿದೆ. ಅಷ್ಟಕ್ಕೂ ಸಿಲ್ಕ್ ಸ್ಮಿತಾ ಅವರ ಬಗ್ಗೆ ಬರುತ್ತಿರುವ ಸಿನಿಮಾ ಇದೇ ಮೊದಲೇನಲ್ಲ. 2011ರಲ್ಲಿ ವಿದ್ಯಾ ಬಾಲನ್ ನಟನೆಯ ‘ದ ಡರ್ಟಿ ಪಿಕ್ಚರ್’ ಕೂಡ ಸ್ಮಿತಾ ಬದುಕಿನ ಹಿನ್ನೆಲೆ ಇತ್ತು. ಆದರೆ, ಇಡೀ ಜೀವನವನ್ನು ಪ್ರಚುರಪಡಿಸಿರಲಿಲ್ಲ ಎಂದು ಕೇಳಿಬಂದಿತ್ತು. ಹಾಗಾಗಿ, ಈ ಹೊಸ ಸಿನಿಮಾವು ಸ್ಮಿತಾರ ಸಿನಿಮಾ ಬದುಕು, ಏಳು-ಬೀಳು ಹಾಗೂ ಇನ್ನಿತರ ವಿಚಾರಗಳ ಮೇಲೆ ಬೆಳಕು ಚೆಲ್ಲಲಿದೆ. ನಿರ್ದೇಶಕ ಜಯರಾಮ್ ಸಂಕರನ್ ಮೊದಲ ಬಾರಿಗೆ ಸ್ವತಂತ್ರವಾಗಿ ನಿರ್ದೇಶಕ ಕ್ಯಾಪ್ ಧರಿಸುತ್ತಿದ್ದಾರೆ. ನಟಿ ಚಂದ್ರಿಕಾ ರವಿ, ಸಿಲ್ಕ್ ಸ್ಮಿತಾ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಚಿತ್ರದ ಗ್ಲಿಂಪ್ಸ್ ವಿಡಿಯೋ ಬಿಡುಗಡೆ ಮಾಡಲಾಗಿದ್ದು, ಚಂದ್ರಿಕಾ ರವಿ, ಸಿಲ್ಕ್ ಸ್ಮಿತಾ ಗೆಟಪ್‌ನಲ್ಲಿ ಮಿಂಚಿದ್ದಾರೆ. ಪ್ಯಾನ್ ಇಂಡಿಯಾ ರೂಪದಲ್ಲಿ ಮೂಡಿಬರಲಿರುವ ಈ ಸಿನಿಮಾವು ಮುಂದಿನ ವರ್ಷದಿಂದ ಚಿತ್ರೀಕರಣ ಆರಂಭಿಸಲಿದೆ. -ಏಜೆನ್ಸೀಸ್
ಸಿಲ್ಕ್ ಸ್ಮಿತಾ ಬಯೋಪಿಕ್: ನಟಿಯ ಹುಟ್ಟುಹಬ್ಬಕ್ಕೆ ಜೀವನಾಧರಿತ ಸಿನಿಮಾ ಘೋಷಣೆ
ವೆಜ್ ಪ್ರಿಯರಿಗಾಗಿ ಸ್ಟ್ರೀಟ್ ಸ್ಟೈಲ್ ಮೊಮೊಸ್; ಮನೆಯಲ್ಲೆ ಮಾಡಲು ಇಲ್ಲಿದೆ ಸಿಂಪಲ್ ವಿಧಾನ Recipe
ಸ್ಟ್ರೀಟ್ ಫುಡ್ ಯಾರಿಗೆ ಇಷ್ಟ ಇರುವುದಿಲ್ಲ ಹೇಳಿ, ಸಂಜೆಯಾದರೆ ಸಾಕು ಸ್ಟ್ರೀಟ್ ಫುಡ್ ತಿನ್ನಬೇಕು ಎನ್ನಿಸುತ್ತದೆ.…
ಹೀಲ್ಸ್ ಧರಿಸುವುದು ಎಷ್ಟು ಅಪಾಯಕಾರಿ ಗೊತ್ತೆ?; ತಪ್ಪದೆ ಈ ಮಾಹಿತಿ ತಿಳಿದುಕೊಳ್ಳಿ | Health Tips
ಹೈಹೀಲ್ಸ್ ಬೂಟುಗಳನ್ನು ಧರಿಸುವುದು ಪರಿಪೂರ್ಣ ಭಂಗಿಯನ್ನು ನೀಡುತ್ತದೆ, ಎತ್ತರವಾಗಿ ಕಾಣುತ್ತದೆ ಮತ್ತು ಸ್ಟೈಲಿಶ್ ಆಗಿ ಕಾಣುತ್ತದೆ.…
ಶೀತದಲ್ಲಿಯೂ ಉತ್ತಮ ನಿದ್ರೆಗೆ ಈ ಟ್ರಿಕ್ಸ್ ಫಾಲೋ ಮಾಡಿ; ನಿಮಗಾಗಿ ಹೆಲ್ತಿ ಟಿಪ್ಸ್ | Health Tips
ಕೆಲವರಿಗೆ ಚಳಿಗಾಲದಲ್ಲಿ ಹೆಚ್ಚು ನಿದ್ದೆ ಬಂದರೆ ಇನ್ನು ಕೆಲವರು ಕಣ್ಣುಗಳಿಂದ ನಿದ್ದೆ ಕಳೆದುಕೊಳ್ಳುತ್ತಾರೆ. ನಿದ್ರೆಯ ಮಾದರಿಯಲ್ಲಿ…