ಮೌನ ಪ್ರತಿಭಟನಾ ಮೆರವಣಿಗೆ

ಮೈಸೂರ: ಅಂಗವಿಕಲರಿಗೆ ಪ್ರತ್ಯೇಕ ಕಾಲನಿ ನಿರ್ಮಾಣ ಹಾಗೂ ಹಕ್ಕುಗಳನ್ನು ಸಂರಕ್ಷಿಸುವಂತೆ ಒತ್ತಾಯಿಸಿ ವಿಕಲಚೇತನರ ಅಭ್ಯುದಯ ವೇದಿಕೆಯಿಂದ ಸೋಮವಾರ ತ್ರಿಚಕ್ರ ವಾಹನದಲ್ಲಿ ಮೌನ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು.

ನಗರದ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಬಳಿಯಿಂದ ಆರಂಭಿಸಿ ನಾನಾ ಭಾಗದಲ್ಲಿ ಸಂಚರಿಸಿ, ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿದರು. ಮುಡಾದಿಂದ ಪ್ರತ್ಯೇಕ ಕಾಲನಿ ನಿರ್ಮಿಸಿ ಜಿಲ್ಲಾಡಳಿತದಿಂದ ನಿವೇಶಗಳನ್ನು ಅರ್ಹ ಅಂಗವಿಕಲರಿಗೆ ನೀಡಬೇಕು. ಮೈಸೂರಿನಲ್ಲಿ ಅಂಗವಿಲಕರ ಸಬಲೀಕರಣ ಇಲಾಖೆ ವತಿಯಿಂದ ಪೆಟ್ಟಿಗೆ ಅಂಗಡಿಗಳನ್ನು ನೀಡುತ್ತಿದ್ದು, ಸ್ವಯಂ ಉದ್ಯೋಗ ನಡೆಸಲು ಮಹಾನಗರ ಪಾಲಿಕೆಯಿಂದ ಪರವಾನಗಿ ನೀಡಿ, ಯಾವುದೇ ತೊಂದರೆ ಕೊಡದಂತೆ ನಿರ್ದೇಶನ ನೀಡಬೇಕು ಎಂದು ಆಗ್ರಹಿಸಿದರು.

ಸಂಘದ ಅಧ್ಯಕ್ಷ ಪ್ರಭುಸ್ವಾಮಿ, ಸಂಚಾಲಕ ದೀಲೀಪ್, ಗೋಪಾಲಕೃಷ್ಣ, ಶಾಕುಂತಲಾ, ಜಗದೀಶ್ ಇತರರು ಹಾಜರಿದ್ದರು.