ಬೆಂಗಳೂರು: ಬಹುತೇಕ ಕ್ರೀಡಾಪಟುಗಳು ಲಾಕ್‌ಡೌನ್ ವೇಳೆ ವಿವಿಧ ಚಟುವಟಿಕೆಗಳ ಮೂಲಕ ಸುದ್ದಿಯಲ್ಲಿದ್ದಾರೆ. ಫಿಟ್ನೆಸ್, ಆನ್‌ಲೈನ್ ತರಬೇತಿ, ೇಸ್‌ಬುಕ್ ಹಾಗೂ ಇನ್‌ಸ್ಟಾಗ್ರಾಂ ಲೈವ್‌ಗಳ ಜತೆಗೆ ವಿವಿಧ ಸಿನಿಮಾ ಹಾಡು, ಡೈಲಾಗ್‌ಗಳಿಗೆ ಟಿಕ್‌ಟಾಕ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವ ಮೂಲಕ ಲಾಕ್‌ಡೌನ್ ಸಮಯವನ್ನು ಕಳೆಯುತ್ತಿದ್ದಾರೆ. ಹೈದರಾಬಾದ್‌ನ ಬ್ಯಾಡ್ಮಿಂಟನ್ ದಂಪತಿ ಸಿಕ್ಕಿ ರೆಡ್ಡಿ ಹಾಗೂ ಸುಮೀತ್ ರೆಡ್ಡಿ ಕನ್ನಡದ ಸಂಭಾಷಣೆಯೊಂದಿಗೆ ಟಿಕ್‌ಟಾಕ್ ಮಾಡುವ ಮೂಲಕ ಗಮನಸೆಳೆದಿದ್ದಾರೆ.
ಶಾಲೆಯೊಂದರಲ್ಲಿ ವಿದ್ಯಾರ್ಥಿಯೊಬ್ಬನನ್ನು ಮೇಷ್ಟ್ರು, ಅಮೆರಿಕದ ಅಧ್ಯಕ್ಷ ಯಾರು ಎಂದು ಕೇಳಿದಾಗ ಆತ ಪಕ್ಕದಲ್ಲಿ ಕುಳಿತಿದ್ದ ಮತ್ತೊಬ್ಬ ವಿದ್ಯಾರ್ಥಿಯನ್ನು ಕೇಳುತ್ತಾನೆ. ಈ ವೇಳೆ ಡೊನಾಲ್ಡ್ ಟ್ರಂಪ್ ಎಂದು ಸರಿಯಾದ ಉತ್ತರ ಹೇಳಿಕೊಟ್ಟರೂ, ಆತ ‘ಪೆಟ್ರೋಲ್ ಪಂಪ್ ಸರ್’ ಎಂದು ಉತ್ತರಿಸುವ ಸಂಭಾಷಣೆಗೆ ತೆಲುಗು ಭಾಷಿಗರಾದ ಸಿಕ್ಕಿ-ಸುಮೀತ್ ಜೋಡಿ ಬಾಯಾಡಿಸಿದೆ.
ಕನ್ನಡತಿ ಅಶ್ವಿನಿ ಡಬಲ್ಸ್ ಪಾರ್ಟ್‌ನರ್ ಸಿಕ್ಕಿ
ಕನ್ನಡತಿ ಅಶ್ವಿನಿ ಪೊನ್ನಪ್ಪ ಜತೆಗೂಡಿ ಮಹಿಳೆಯರ ಡಬಲ್ಸ್ ವಿಭಾಗದಲ್ಲಿ ಸ್ಪರ್ಧಿಸುತ್ತಿದ್ದಾರೆ. ಈಗಾಗಲೇ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿರುವ ಸಿಕ್ಕಿ-ಅಶ್ವಿನಿ ಪೊನ್ನಪ್ಪ ಜೋಡಿ ಪ್ರಶಸ್ತಿ ಜಯಿಸಿದೆ. ಸಿಕ್ಕಿ ಅವರ ಪತಿ ಸುಮಿತ್ ರೆಡ್ಡಿ ಕೂಡ ಪುರುಷರ ಡಬಲ್ಸ್ ವಿಭಾಗದಲ್ಲಿ ಮಿಂಚುತಿದ್ದಾರೆ. ಭಾರತೀಯ ಬ್ಯಾಡ್ಮಿಂಟನ್ ಕ್ಷೇತ್ರದ ಅಪರೂಪ ಜೋಡಿ ಎನಿಸಿಕೊಂಡಿರುವ ಸಿಕ್ಕಿ-ಸುಮೀತ್ ಲಾಕ್‌ಡೌನ್‌ನಲ್ಲಿ ಬೇಸರ ಕಳೆಯಲು ಫಿಟ್ನೆಸ್, ಅಡುಗೆ ತಯಾರಿ ಹಾಗೂ ಟಿಕ್‌ಟಾಕ್ ಮೂಲಕ ಜನರಿಗೆ ಹತ್ತಿರವಾಗುತ್ತಿದೆ.
ಇನ್‌ಸ್ಟಾಗ್ರಾಂನಲ್ಲಿ ಪ್ರತಿದಿನವೂ ಹೊಸ ಬಗೆಯ ಟಿಕ್‌ಟಾಕ್ ವಿಡಿಯೋ ಹರಿಬಿಡುವ ಮೂಲಕ ಬೆಸ್ಟ್ ಜೋಡಿ ಆಗಿ ಹೊರಹೊಮ್ಮುತ್ತಿದೆ. ಕುಟುಂಬ ಸದಸ್ಯರನ್ನು ಸೇರಿಸಿಕೊಂಡು ಟಿಕ್‌ಟಾಕ್ ಮಾಡುತ್ತಿದೆ. ಈ ತಾರಾ ಬ್ಯಾಡ್ಮಿಂಟನ್-ಟಿಕ್‌ಟಾಕ್ ಜೋಡಿಯ ಮುಂದಿನ ದಿನಗಳಲ್ಲಿ ಟಾಲಿವುಡ್‌ನಲ್ಲಿ ಕಾಣಿಸಿಕೊಳ್ಳುವ ತಯಾರಿಯಲ್ಲಿರುವಂತಿದೆ.
https://www.instagram.com/p/B_pexvPDil0/