ದುಬೈನಲ್ಲಿ ಸೈಮಾ ರಂಗು: ಕನ್ನಡದ ‘ಸಪ್ತ ಸಾಗರದಾಚೆ ಎಲ್ಲೋ…’ ಚಿತ್ರಕ್ಕೆ ಆರು, ‘ಕಾಟೇರ’ಗೆ ನಾಲ್ಕು ಪ್ರಶಸ್ತಿ

ದಕ್ಷಿಣ ಭಾರತ ಚಿತ್ರರಂಗದ ಪ್ರತಿಷ್ಠಿತ ಸೈಮಾ-2024 (ಸೌತ್ ಇಂಡಿಯಾ ಇಂಟರ್‌ನ್ಯಾಷನಲ್ ಮೂವೀ ಅವಾರ್ಡ್ಸ್) ಪ್ರಶಸ್ತಿ ಪ್ರದಾನ ಸಮಾರಂಭವು ಅರಬ್ಬರ ನಾಡು ದುಬೈನಲ್ಲಿ ಇತ್ತೀಚೆಗೆ ಅದ್ದೂರಿಯಾಗಿ ನೆರವೇರಿದೆ. ಕನ್ನಡ, ತಮಿಳು, ತೆಲುಗು ಹಾಗೂ ಮಲಯಾಳಂ ಭಾಷೆಯ ಚಿತ್ರಗಳನ್ನು ವಿವಿಧ ವಿಭಾಗಗಳಲ್ಲಿ ಆಯ್ಕೆ ಮಾಡಿ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಸಮಾರಂಭದಲ್ಲಿ ಬಾಲಿವುಡ್ ಸೇರಿ ದಕ್ಷಿಣ ಭಾರತ ವಿವಿಧ ಚಿತ್ರರಂಗದ ಬೋನಿ ಕಪೂರ್, ಅಲ್ಲು ಅರವಿಂದ್, ಕಬೀರ್ ಖಾನ್, ರವಿಶಂಕರ್, ರಾನಾ ದಗ್ಗುಬಾಟಿ, ಶ್ರುತಿ ಹಾಸನ್ ಸೇರಿ ಖ್ಯಾತ ನಟರು, ನಟಿಯರು ಭಾಗಿಯಾಗಿ ಸೈಮಾ ಮೆರುಗು ಹೆಚ್ಚಿಸಿದರು.

ದುಬೈನಲ್ಲಿ ಸೈಮಾ ರಂಗು: ಕನ್ನಡದ ‘ಸಪ್ತ ಸಾಗರದಾಚೆ ಎಲ್ಲೋ…’ ಚಿತ್ರಕ್ಕೆ ಆರು, ‘ಕಾಟೇರ’ಗೆ ನಾಲ್ಕು ಪ್ರಶಸ್ತಿ
ದುಬೈನಲ್ಲಿ ಸೈಮಾ ರಂಗು: ಕನ್ನಡದ ‘ಸಪ್ತ ಸಾಗರದಾಚೆ ಎಲ್ಲೋ…’ ಚಿತ್ರಕ್ಕೆ ಆರು, ‘ಕಾಟೇರ’ಗೆ ನಾಲ್ಕು ಪ್ರಶಸ್ತಿ 2

ಸ್ಯಾಂಡಲ್‌ವುಡ್‌ನಿಂದ ಯಾರೆಲ್ಲ ಭಾಗಿ: ಸೈಮಾ-2024ರ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಚಂದನವನ ನಟರಾದ ಡಾ.ಶಿವರಾಜಕುಮಾರ್, ಸುದೀಪ್, ವಿಜಯ್ ಕುಮಾರ್, ರಾಕ್‌ಲೈನ್ ವೆಂಕಟೇಶ್, ಧನಂಜಯ್, ರಕ್ಷಿತ್ ಶೆಟ್ಟಿ, ನಟಿಯರಾದ ರುಕ್ಮಿಣಿ ವಸಂತ್, ಸಾನ್ವಿ ಶ್ರೀವತ್ಸ ಸೇರಿ ಹಲವರು ಭಾಗಿಯಾಗಿದ್ದಾರೆ. -ಏಜೆನ್ಸೀಸ್

‘ಸಪ್ತ ಸಾಗರದಾಚೆ….’, ‘ಕಾಟೇರ’ನಿಗೆ ಬಹುಪಾಲು’:
ಪ್ರಶಸ್ತಿ ಸುತ್ತಿನ ವಿವಿಧ 19 ವಿಭಾಗಗಳಲ್ಲಿ ಹೇಮಂತ್ ರಾವ್- ರಕ್ಷಿತ್ ಶೆಟ್ಟಿ ಕಾಂಬಿನೇಷನ್‌ನ ‘ಸಪ್ತ ಸಾಗರದಾಚೆ ಎಲ್ಲೋ- ಸೈಡ್-ಎ’ ಸಿನಿಮಾಕ್ಕೆ ಆರು ಹಾಗೂ ತರುಣ್ ಸುಧೀರ್ ನಿರ್ದೇಶನದ ‘ಕಾಟೇರ’ಗೆ ನಾಲ್ಕು ಪ್ರಶಸ್ತಿಗಳನ್ನು ಪಡೆದುಕೊಂಡಿವೆ.

ಪ್ರಶಸ್ತಿ ಪಡೆದು ಚಿತ್ರಗಳ ವಿವರ:

  • ಸಿನಿಮಾ ರಂಗದಲ್ಲಿ ಅತ್ಯುತ್ತಮ ಸೇವೆ- ನಟ ಶಿವರಾಜ್ ಕುಮಾರ್
  • ಅತ್ಯುತ್ತಮ ಕನ್ನಡ ಸಿನಿಮಾ- ‘ಕಾಟೇರ’
  • ಅತ್ಯುತ್ತಮ ನಟ: ರಕ್ಷಿತ್ ಶೆಟ್ಟಿ (‘ಸಪ್ತ ಸಾಗರದಾಚೆ ಎಲ್ಲೋ- ಸೈಡ್ ಎ’)
  • ಅತ್ಯುತ್ತಮ ನಟ (ವಿಮರ್ಶೆ)- ಡಾಲಿ ಧನಂಜಯ್ (‘ಗುರುದೇವ ಹೊಯ್ಸಳ’)
    *ಅತ್ಯುತ್ತಮ ನಟಿ- ರುಕ್ಮಿಣಿ ವಸಂತ್ (‘ಸಪ್ತ ಸಾಗರದಾಚೆ ಎಲ್ಲೋ…’)
  • ಅತ್ಯುತ್ತಮ ನಟಿ (ವಿಮರ್ಶೆ)- ಚೈತ್ರಾ ಜೆ. ಆಚಾರ್ (‘ಸಪ್ತ ಸಾಗರದಾಚೆ…’)
    *ಅತ್ಯುತ್ತಮ ನಿರ್ದೇಶಕ- ಹೇಮಂತ್ ರಾವ್ (ಸಪ್ತ ಸಾಗರದಾಚೆ ಎಲ್ಲೋ)
  • ಅತ್ಯುತ್ತಮ ಖಳನಾಯಕ- ರಮೇಶ್ ಇಂದಿರಾ (‘ಸಪ್ತ ಸಾಗರದಾಚೆ ಎಲ್ಲೋ’)
  • ಅತ್ಯುತ್ತಮ ಗಾಯಕ- ಕಪಿಲ್ (‘ಸಪ್ತ ಸಾಗರದಾಚೆ ಎಲ್ಲೋ’)
    *ಅತ್ಯುತ್ತಮ ಪೋಷಕ ನಟ- ನವೀನ್ ಶಂಕರ್ (‘ಹೊಂದಿಸಿ ಬರೆಯಿರಿ’)
    *ಅತ್ಯುತ್ತಮ ಪೋಷಕ ನಟಿ- ಸಂಯುಕ್ತಾ ಹೊರನಾಡು (ಟೋಬಿ)
    *ಅತ್ಯುತ್ತಮ ಉದಯನ್ಮೋಖ ನಟಿ- ಆರಾಧನಾ (ಕಾಟೇರ)
    *ಅತ್ಯುತ್ತಮ ಉದಯನ್ಮೋಖ ನಟ- ಶಿಶಿರ್ ಬೈಕಾಡಿ (ಡೇರ್ ಡೆವಿಲ್ ಮುಸ್ತಾಾ)
    *ಅತ್ಯುತ್ತಮ ಉದಯೋನ್ಮುಖ ನಿರ್ದೇಶಕ- ನಿತಿನ್ ಕೃಷ್ಣಮೂರ್ತಿ (ಹಾಸ್ಟೆಲ್ ಹುಡುಗರು)
    *ಅತ್ಯುತ್ತಮ ಸಂಗೀತ ನಿರ್ದೇಶಕ- ವಿ ಹರಿಕೃಷ್ಣ (‘ಕಾಟೇರ’)
    *ಅತ್ಯುತ್ತಮ ಗಾಯಕಿ: ಮಂಗ್ಲಿ (‘ಕಾಟೇರ’)
    *ಅತ್ಯುತ್ತಮ ಸಿನಿಮಾಟೋಗ್ರಾರ್- ಶ್ವೇತ ಪ್ರಿಯ (‘ಕೈವ’)
    *ಅತ್ಯುತ್ತಮ ಸಾಹಿತ್ಯ- ಡಾಲಿ ಧನಂಜಯ್ (‘ಟಗರುಪಲ್ಯ’)
    *ಅತ್ಯುತ್ತಮ ಹಾಸ್ಯನಟ- ಅನಿರುದ್ಧ ಆಚಾರ್ (ಆಚಾರ್ ಆ್ಯಂಡ್ ಕೋ..’)
    *ಅತ್ಯುತ್ತಮ ಭರವಸೆಯ ನಟಿ- ವೃಷಾ ಪಾಟೀಲ್ (ಲವ್)
  • ಅತ್ಯುತ್ತಮ ಹೊಸ ನಿರ್ಮಾಣ ಸಂಸ್ಥೆ: ಅಭುವನಸ ಫಿಲಮ್ಸ್
  • ವರ್ಷದ ಅತ್ಯುತ್ತಮ ನಿರ್ಮಾಪಕ: ಪಿಬಿ ಸ್ಟುಡಿಯೋಸ್, ಅನ್ವಿತ್ ಸಿನಿಮಾಸ್’
Share This Article

Bathing : ನೀರಿನಲ್ಲಿ ಇವುಗಳನ್ನು ಬೆರೆಸಿ ಸ್ನಾನ ಮಾಡಿದ್ರೆ ಸಾಕು ಅದೃಷ್ಟ ಖುಲಾಯಿಸುತ್ತದೆ…

ಬೆಂಗಳೂರು: ಪ್ರತಿದಿನ ಸ್ನಾನ ( Bathing ) ಮಾಡುವ ಅಭ್ಯಾಸವನ್ನು ಸಾಮಾನ್ಯವಾಗಿ ಎಲ್ಲರೂ ರೂಢಿಸಿಕೊಂಡಿರುತ್ತಾರೆ. ನೀವು…

ದೀಪಾವಳಿಗೆ ಮನೆ ಸ್ವಚ್ಛ ಮಾಡ್ತಾ ಇದ್ದೀರಾ? ಮನೆಯಲ್ಲಿ cockroach ಇದ್ರೆ ಹೀಗೆ ಮಾಡಿ…

ಬೆಂಗಳೂರು: ಅನೇಕ ಜನರು ತಮ್ಮ ಮನೆಯಲ್ಲಿ ಜಿರಳೆಗಳ ( cockroach )  ಸಮಸ್ಯೆಯನ್ನು ಎದುರಿಸುತ್ತಾರೆ. ಅವುಗಳನ್ನು…

Crab Sukka : ಭಾನುವಾರದ ಬಾಡೂಟಕ್ಕೆ ಮಾಡಿ ರುಚಿಯಾದ ಏಡಿ ಸುಕ್ಕ..

ಬೆಂಗಳೂರು: ವಾರದ ಕೊನೆಯಲ್ಲಿ ಮಧ್ಯಾಹ್ನದ ಸಮಯಕ್ಕೆ ರುಚಿಯಾದ ಅಡುಗೆ ಏನಾದರು ಮಾಡುವ ಪ್ಲಾನ್ (Plan)​ ಹಾಕಿಕೊಂಡಿದ್ದೀರಾ?ಆದಿತ್ಯವಾರದಂದು…