ಹೊಸಕೋಟೆ: ಸಿದ್ಧಗಂಗಾ ಮಠ ಅನ್ನ ಹಾಗೂ ಅಕ್ಷರ ದಾಸೋಹ ಪ್ರಪಂಚಕ್ಕೆ ಮಾದರಿಯಾಗಿದೆ ಎಂದು ವೀರಶೈವ ಲಿಂಗಾಯತ ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಡಿ.ಎಸ್ ರಾಜ್‌ಕುಮಾರ್ ತಿಳಿಸಿದರು.
ನಗರದ ಹಳೇ ಬಸ್ ನಿಲ್ದಾಣದ ಬಸವೇಶ್ವರ ವೃತ್ತದಲ್ಲಿ ಸೋಮವಾರ ಆಯೋಜಿಸಿದ್ದ ಶ್ರೀ ಶಿವಕುಮಾರ ಸ್ವಾಮೀಜಿಗಳ ಪ್ರಥಮ ವರ್ಷದ ಪುಣ್ಯಸ್ಮರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮಾನವ ಧರ್ಮ ಒಂದೇ ಎಂಬ ಬಸವಣ್ಣನವರ ಸಂದೇಶವನ್ನು ಪ್ರಪಂಚಕ್ಕೆ ಮನವರಿಕೆ ಮಾಡಿಕೊಟ್ಟ ಸ್ವಾಮೀಜಿಗಳ ಆದರ್ಶವನ್ನು ಪ್ರತಿಯೊಬ್ಬರೂ ಪಾಲಿಸಬೇಕು ಎಂದರು.
ಸೇವಾ ಸಮಾಜದ ಅಧ್ಯಕ್ಷ ಶಿವಕುಮಾರ್ ಮಾತನಾಡಿ, ಬಸವಣ್ಣನವರು ನೀಡಿದ ಮಾನವ ಧರ್ಮದ ಸಂದೇಶದಿಂದ ಸಮಾಜದ ಶಾಂತಿ, ನೆಮ್ಮದಿ ಜತೆಗೆ ಅಭಿವೃದ್ಧಿ ಸಾಧ್ಯ ಎಂಬುದನ್ನು ಸ್ವಾಮೀಜಿ ತೋರಿಸಿಕೊಟ್ಟಿದ್ದಾರೆ ಎಂದರು.
ಮಠದಲ್ಲಿ ವಿದ್ಯಾಭ್ಯಾಸ ಮಾಡಿದ ಲಕ್ಷಾಂತರ ವಿದ್ಯಾರ್ಥಿಗಳು ದೇಶ, ವಿದೇಶಗಳಲ್ಲಿ ಉನ್ನತ ಹುದ್ದೆ ಹಾಗೂ ಅಧಿಕಾರದಲ್ಲಿದ್ದಾರೆ. ಆದರೆ ಇಂದಿಗೂ ಅವರಲ್ಲಿ ಮಠದ ಬಗ್ಗೆ ಸೇವಾ ಮನೋಭಾವ ಇದೆ ಎಂದು ವೀರಶೈವ ಲಿಂಗಾಯತ ಯುವ ವೇದಿಕೆ ಉಪಾಧ್ಯಕ್ಷ ನಂಜೇಗೌಡ ತಿಳಿಸಿದರು.
ಶ್ರೀ ಶಿವಕುಮಾರ ಸ್ವಾಮೀಜಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಅನ್ನ ಸಂತರ್ಪಣೆ ಮಾಡಲಾಯಿತು.
ಸೇವಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಪರಮೇಶ್, ಮುಖಂಡರಾದ ಎಚ್.ಎಸ್. ಮಲ್ಲೇಶ್, ರುದ್ರಾರಾಧ್ಯ, ಸಿ.ಪಿ ನವೀನ್, ಎಚ್.ಬಿ ನಾಗರಾಜ್, ಮಲ್ಲಿಕಾರ್ಜುನ್, ಎಸ್.ಎಲ್.ವಿ ಚಂದ್ರು, ಮಂಜುನಾಥ್, ಬಸವರಾಜಪ್ಪ, ಮೈತ್ರಿದೇವಿ, ವಿಜಯ್‌ಕುಮಾರ್, ರವಿ, ದಯಾನಂದ್, ಸುರೇಶ್ ಬಾಬು, ಜಮಿನಿ ಸತೀಶ್ ಇತರರು ಇದ್ದರು.