Friday, 16th November 2018  

Vijayavani

ಕೋರ್​​ ಕಮಿಟಿ ಸ್ಥಾನಕ್ಕಾಗಿ ಬಿಜೆಪಿಯಲ್ಲಿ ಫೈಟ್- ಶೋಭಾಗೆ ಸ್ಥಾನ ನೀಡಲು ಹೆಗಡೆ ಜತೆ ಬಿಎಸ್​ವೈ ಪೈಪೋಟಿ        ಮೈಸೂರು ಪಾಲಿಕೆ ಮೇಯರ್​, ಉಪ ಮೇಯರ್​ ಸ್ಥಾನಕ್ಕಿಂದು ಚುನಾವಣೆ: ಮೇಯರ್​ ಗಾದಿಗಾಗಿ ದೋಸ್ತಿಗಳ ಫೈಟ್​        ಅಯ್ಯಪ್ಪನ ದರ್ಶನಕ್ಕಾಗಿ ಕೇರಳದ ಕೊಚ್ಚಿಗೆ ಬಂದಿಳಿದ ಹೋರಾಟಗಾರ್ತಿ ತೃಪ್ತಿ ದೇಸಾಯಿಗೆ ಪ್ರತಿಭಟನೆ ಬಿಸಿ        ಗಜ ಚಂಡಮಾರುತ ಅಬ್ಬರ: ತಮಿಳುನಾಡಿನ ಕರಾವಳಿವಳಿಯಲ್ಲಿ ಜನ ತತ್ತರ, ರಾಜ್ಯದ ದಕ್ಷಿಣ ಒಳನಾಡಿನಲ್ಲೂ ಮಳೆ ಸಾಧ್ಯತೆ        ಕಬ್ಬಿಗೆ ಸಮರ್ಪಕ ಬೆಲೆ ನೀಡುವಂತೆ ಆಗ್ರಹಿಸಿ ಮುಧೋಳದಲ್ಲಿ ರೈತರ ಬೃಹತ್​ ಹೋರಾಟ       
Breaking News

ಸಿದ್ದು ಸರ್ಕಾರ ಪ್ರಚಾರಕ್ಕಾಗಿ ಮಾಡಿದ ವೆಚ್ಚ 226 ಕೋಟಿ ರೂ.

Thursday, 31.05.2018, 3:39 AM       No Comments

ಬೆಳಗಾವಿ: ಸರ್ಕಾರದ ವಿವಿಧ ಯೋಜನೆಗಳನ್ನು ಜನರಿಗೆ ಮುಟ್ಟಿಸುವ ನಿಟ್ಟಿನಲ್ಲಿ 5 ವರ್ಷಗಳ ಅವಧಿಯಲ್ಲಿ ಜಾಹೀರಾತುಗಳಿಗಾಗಿ ಮಾಡಿರುವ 226 ಕೋಟಿ ರೂ. ವೆಚ್ಚದಲ್ಲಿ ಕೋಟ್ಯಂತರ ರೂ. ದುರುಪಯೋಗವಾಗಿದ್ದು, ಉನ್ನತ ಮಟ್ಟದ ತನಿಖೆ ನಡೆಸುವಂತೆ ಆಗ್ರಹಿಸಿ ಬುಧವಾರ ಜಿಲ್ಲಾಧಿಕಾರಿ ಮೂಲಕ ಆರ್‌ಟಿಐ ಕಾರ್ಯಕರ್ತ ಭೀಮಪ್ಪ ಗಡಾದ ಮುಖ್ಯ ಕಾರ್ಯದರ್ಶಿಗೆ ಮನವಿ ಸಲ್ಲಿಸಿದರು.
ಹಿಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರವು ಮುದ್ರಣ ಹಾಗೂ ವಿದ್ಯುನ್ಮಾನ ಮಾಧ್ಯಮಗಳಿಗೆ ಜಾಹೀರಾತು ನೀಡುವ ಸಂದರ್ಭದಲ್ಲಿ ಕಮಿಷನ್ ರೂಪದಲ್ಲಿ ಮಧ್ಯವರ್ತಿಗಳಿಗೆ ಕೋಟ್ಯಂತರ ರೂ. ಸಂದಾಯವಾಗಿದೆ. ಇದರಲ್ಲಿ ರಾಜ್ಯ ಮತ್ತು ಜಿಲ್ಲಾ ಮಟ್ಟದ ವಾರ್ತಾ ಇಲಾಖೆ ಅಧಿಕಾರಿಗಳು ದೊಡ್ಡ ಪ್ರಮಾಣದಲ್ಲಿ ಭ್ರಷ್ಟಾಚಾರ ನಡೆಸಿದ್ದಾರೆ ಎಂದು ದೂರಿದರು.
ರಾಜ್ಯದಲ್ಲಿ ಆಡಳಿತ ನಡೆಸಿರುವ ಎಲ್ಲ ಸರ್ಕಾರಗಳು ವಾರ್ತಾ ಇಲಾಖೆ ಮೂಲಕವೇ ಮಾಧ್ಯಮಗಳಿಗೆ ಜಾಹೀರಾತು ಹಣ ಸಂದಾಯ ಮಾಡುತ್ತಿದ್ದವು. ಆದರೆ, ಸಿದ್ದರಾಮಯ್ಯ ಸರ್ಕಾರವು ಮಾರ್ಕೆಟಿಂಗ್ ಕನ್ಸ್‌ಲ್ಟಂಟ್ ಮತ್ತು ಏಜೆನ್ಸಿ ಸಂಸ್ಥೆ ಮೂಲಕ ನೂರಾರು ಕೋಟಿ ರೂ. ಜಾಹೀರಾತು ನೀಡಿದೆ. ಇದರಲ್ಲಿ ಮೇಲ್ನೋಟಕ್ಕೆ ಅಕ್ರಮ ನಡೆದಿದ್ದು, ಈ ಕೂಡಲೇ ಉನ್ನತ ಮಟ್ಟದ ವಿಶೇಷ ತನಿಖಾ ತಂಡದ ಮೂಲಕ ತನಿಖೆ ನಡೆಸಲು ಮುಖ್ಯ ಕಾರ್ಯದರ್ಶಿ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಸರ್ಕಾರಿ ಯೋಜನೆಗಳ ಪ್ರಚಾರದ ಹೆಸರಿನಲ್ಲಿ ಸಿದ್ದರಾಮಯ್ಯ ಸರ್ಕಾರವು 4 ವರ್ಷದಲ್ಲಿ 78 ಕೋಟಿ ರೂ. ಖರ್ಚು ಮಾಡಿದರೆ 2017-18ನೇ ಸಾಲಿನ ಒಂದೇ ವರ್ಷದ ಅವಧಿಯಲ್ಲಿ ಬರೋಬ್ಬರಿ 148 ಕೋಟಿ ರೂ. ಖರ್ಚು ಮಾಡಿದೆ. ಇದರಲ್ಲಿ ಶೇ. 40ರಷ್ಟು ಹಣವನ್ನು ಖಾಸಗಿ ಮಾರ್ಕೆಟಿಂಗ್ ಕನ್ಸ್‌ಲ್ಟಂಟ್ ಮತ್ತು ಏಜೆನ್ಸಿ ಸಂಸ್ಥೆ ಗೆ ಬಿಡುಗಡೆ ಮಾಡಿದೆ. ಇದೊಂದು ವ್ಯವಸ್ಥಿತವಾಗಿ ನಡೆದಿರುವ ಅಕ್ರಮ ವ್ಯವಹಾರವಾಗಿದೆ. ಇದರಲ್ಲಿ ಮುಖ್ಯಮಂತ್ರಿ ಕಚೇರಿ ಸಿಬ್ಬಂದಿ ಸೇರಿ ಕೆಲ ಪ್ರಭಾವಿಗಳು ಭಾಗಿಯಾಗಿರುವುದು ಮೇಲ್ನೋಟಕ್ಕೆ ಸ್ಪಷ್ಟವಾಗಿ ಕಂಡು ಬಂದಿದ್ದು, ನ್ಯಾಯಾಂಗ ತನಿಖೆಗೆ ಶಿಫಾರಸು ಮಾಡುವುದು ಸೂಕ್ತ ಎಂದು ವಿನಂತಿಸಿದ್ದಾರೆ.

ಎಲ್ಲ ಇಲಾಖೆಗಳಲ್ಲಿ ಅಕ್ರಮ

ಸರ್ಕಾರದ ಎಲ್ಲ ಇಲಾಖೆಗಳು ತಮ್ಮ ಯೋಜನೆಗಳ ಪ್ರಚಾರ ಉದ್ದೇಶದಿಂದ ಜಾಹೀರಾತುಗಳಿಗೆ ಮಾಡಿರುವ ವೆಚ್ಚದಲ್ಲಿ ಶೇ.40 ರಷ್ಟು ಹಣವನ್ನು ಮಾರ್ಕೆಟಿಂಗ್ ಕನ್ಸ್‌ಲ್ಟಂಟ್ ಮತ್ತು ಏಜೆನ್ಸಿ ಸಂಸ್ಥೆ ಮೂಲಕ ಸಂದಾಯ ಮಾಡಿವೆ. ವಾರ್ತಾ ಇಲಾಖೆಯಿಂದ ಶೇ. 60ರಷ್ಟು ಮಾತ್ರ ಹಣ ಬಿಡುಗಡೆ ಮಾಡಲಾಗಿದೆ ಎಂದು ಭೀಮಪ್ಪ ಗಡಾದ ಹೇಳಿದ್ದಾರೆ.

ಸಿದ್ದು ಸರ್ಕಾರ 5 ವರ್ಷದಲ್ಲಿ ಜಾಹೀರಾತುಗಳಿಗೆ ಖರ್ಚು ಮಾಡಿದ ಹಣ
ವರ್ಷ ವೆಚ್ಚವಾದ ಹಣ (ಕೋಟಿ ರೂ.)
2013     13.46
2014     14.68
2015     22.00
2016     34.00
2017     142
ಒಟ್ಟು      226.14

Leave a Reply

Your email address will not be published. Required fields are marked *

Back To Top