ಹೈದರಾಬಾದ್: ನಟ ಸಿದ್ಧಾರ್ಥ್ ಮತ್ತು ನಟಿ ಅದಿತಿ ಹೈದರಿ ರಾವ್ ಎರಡು ದಿನಗಳ ಹಿಂದಷ್ಟೇ ವಿವಾಹವಾದರು. ದೇವಸ್ಥಾನದಲ್ಲಿ ಕುಟುಂಬಸ್ಥರ ಸಮ್ಮುಖದಲ್ಲಿ ತುಂಬಾ ಸರಳವಾಗಿ ಮದುವೆ ಸಮಾರಂಭ ನಡೆಯಿತು. ಮದುವೆಯಾಗಿ 2 ದಿನಕ್ಕೆ ಹೆಂಡ್ತಿ ಬಗ್ಗೆ ಈ ಹಿಂದೆ ಮಾಡಿದ ಕಾಮೆಂಟ್ ವೈರಲ್ ಆಗಿದೆ..
ಸಿದ್ಧಾರ್ಥ್ ಮತ್ತು ಅದಿತಿ ತಮ್ಮ ಮದುವೆಗೆ ಕೆಲವು ದಿನಗಳ ಮೊದಲು ಸಂದರ್ಶನದಲ್ಲಿ ಕಾಣಿಸಿಕೊಂಡರು. ‘ಸತ್ಯ ಹೇಳು’ ಎನ್ನುವ ಸಂಚಿಕೆಯಲ್ಲಿ ಕೆಲವು ಆಶ್ಚರ್ಯಕರ ಮಾಹಿತಿಯನ್ನು ಬಹಿರಂಗಪಡಿಸಿದರು. ಅವರ ಸ್ನೇಹ ಎಷ್ಟು ಗಟ್ಟಿಯಾಗಿದೆ ಎಂಬುದನ್ನು ತೋರಿಸಿಕೊಟ್ಟರು.
ಅದಿತಿ ರಾವ್ ಹೈದರಿ ಬೆಳಿಗ್ಗೆ ಏನು ಮಾಡುತ್ತಾಳೆ ಎಂದು ಸಿದ್ಧಾರ್ಥ್‌ನನ್ನು ಕೇಳಿದಾಗ, ಅವಳು ನನ್ನ ಒಪ್ಪಿಗೆಯಿಲ್ಲದೆ ಎಬ್ಬಿಸುತ್ತಾಳೆ. ಸೂರ್ಯೋದಯ ಮೊದಲು ಏಳುವಂತೆ ಹೇಳುತ್ತಾಳೆ ಅದಿತಿ. ನನ್ನ ದಿನ ಪ್ರಾರಂಭವಾಗಿದೆ ಎಂದು ತಿಳಿದು ನಾನು ಇಷ್ಟವಿಲ್ಲದ ಕಣ್ಣೀನಲ್ಲಿ ಎಚ್ಚರಗೊಳ್ಳುತ್ತೇನೆ ಎಂದು ಸಿದ್ಧಾರ್ಥ್ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.
ಅದಿತಿ ರಾವ್ ಅವರು ಹೈದರಾಬಾದ್‌ನ ಪ್ರಸಿದ್ಧ ರಾಜಮನೆತನದಲ್ಲಿ ಜನಿಸಿದರು. ವನಪರ್ತಿ ರಾಜ ಸಾಮ್ರಾಜ್ಯದ ಕೊನೆಯ ದೊರೆ ಅದಿತಿ ರಾವ್ ಅವರ ತಾಯಿಯ ಅಜ್ಜ. ಅದಕ್ಕಾಗಿಯೇ ವನಪರ್ತಿಯ ಶ್ರೀರಂಗಾಪುರದ ಶ್ರೀ ರಂಗನಾಯಕಸ್ವಾಮಿ ದೇವಸ್ಥಾನದಲ್ಲಿ ಈ ಸ್ಟಾರ್ಗಳ ವಿವಾಹ ಸಮಾರಂಭ ನೆರವೇರಿತು ಎಂದು ವರದಿಯಾಗಿದೆ.
ಮಹಾ ಸಮುದ್ರಂ ಚಿತ್ರದಲ್ಲಿ ಸಿದ್ಧಾರ್ಥ್ ಮತ್ತು ಅದಿತಿ ಇಬ್ಬರೂ ಒಟ್ಟಿಗೆ ನಟಿಸಿದ್ದರು. ಆಗ ಏರ್ಪಟ್ಟ ಪರಿಚಯ ಸ್ವಲ್ಪ ಪ್ರೀತಿಗೆ ತಿರುಗಿತ್ತು. ಸಿದ್ಧಾರ್ಥ್ ತನ್ನ ನೆಚ್ಚಿನ ಸ್ಥಳದಲ್ಲಿ ಪ್ರಪೋಸ್ ಮಾಡಿರುವುದಾಗಿ ಅದಿತಿ ಇತ್ತೀಚಿನ ಸಂದರ್ಶನದಲ್ಲಿ ಹೇಳಿದ್ದಾರೆ. ಇತ್ತೀಚೆಗಷ್ಟೇ ವನಪರ್ತಿಯ ಶ್ರೀರಂಗನಾಯಕ ಸ್ವಾಮಿ ದೇವಸ್ಥಾನ ತಮ್ಮ ಕುಟುಂಬಕ್ಕೆ ತುಂಬಾ ವಿಶೇಷ.. ಅದಕ್ಕೇ ಅಲ್ಲಿಯೇ ನಿಶ್ಚಿತಾರ್ಥ ಮಾಡಿಕೊಂಡಿದ್ದೇವೆ.. ಮದುವೆಯೂ ಅಲ್ಲೇ ನಡೆಯಲಿದೆ ಎಂದಿದ್ದರು. ಸಿದ್ದಾರ್ಥ್ ಮತ್ತು ಅದಿತಿ ಅದೇ ದೇವಸ್ಥಾನದಲ್ಲಿ ಮದುವೆಯಾದರು.
2ನೇ ಮದ್ವೆಯಾಗಲು ವರ ಬೇಕು! ಸ್ವಂತ ಮನೆ, 30 ಲಕ್ಷ ಸಂಬಳ, ಅತ್ತೆ-ಮಾವ ಇರ್ಬಾದು ನನ್ನ ಅಪ್ಪ-ಅಮ್ಮ ಇರ್ತಾರೆ
ಸಿದ್ಧಾರ್ಥ್ Weds ಅದಿತಿ ; 400 ವರ್ಷಗಳ ಹಿಂದಿನ ಪುರಾತನ ದೇವಸ್ಥಾನದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಸ್ಟಾರ್ ಜೋಡಿ