ಸಿದ್ಧಗಂಗಾ ಶ್ರೀ ಅಂತಿಮ ದರ್ಶನ: ಬೆಂಗಳೂರಿನಿಂದ ನಾಲ್ಕು ಡೆಮೋ ಟ್ರೈನ್‌ ವ್ಯವಸ್ಥೆ

ತುಮಕೂರು: ನಡೆದಾಡುವ ದೇವರು ಎಂದೇ ಖ್ಯಾತಿಯಾಗಿದ್ದ ಸಿದ್ಧಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿಗಳ ಅಂತಿಮ ದರ್ಶನಕ್ಕೆ ಭಕ್ತ ಸಾಗರವೇ ಹರಿದು ಬರುತ್ತಿದ್ದು, ರಾತ್ರಿಯಿಂದಲೂ ಸರತಿ ಸಾಲಿನಲ್ಲಿ ನಿಂತ ಭಕ್ತರು ಅಂತಿಮ ದರ್ಶನ ಪಡೆಯುತ್ತಿದ್ದಾರೆ.

ಶತಾಯುಷಿ ಡಾ.ಶಿವಕುಮಾರ ಸ್ವಾಮೀಜಿ(111)ಗಳ ಅಂತಿಮ ದರ್ಶನಕ್ಕೆ ತೆರಳುವವರಿಗಾಗಿ ಬೆಂಗಳೂರಿನಿಂದ ನಾಲ್ಕು ಡೆಮೋ ರೈಲುಗಳ ವ್ಯವಸ್ಥೆ ಮಾಡಲಾಗಿದೆ. ಬೆಂಗಳೂರಿನ ಯಶವಂತಪುರದಿಂದ ಹೊರಡಲಿವ ಡೆಮೋ ಟ್ರೈನ್‌ಗಳು, ಸಾವಿರಾರು ಭಕ್ತರನ್ನು ಅಂತಿಮ ದರ್ಶನಕ್ಕೆ ಕೊಂಡೊಯ್ಯಲಿವೆ.

ಈಗಾಗಲೇ ಬೆಳಗ್ಗೆ 6ಕ್ಕೆ ಯಶವಂತಪುರದಿಂದ ಹೊರಟ ರೈಲು 7:45ಕ್ಕೆ ತುಮಕೂರು ತಲುಪಿದೆ. ಬೆಳಗ್ಗೆ 9:50ಕ್ಕೆ ಹೊರಡುವ ಡೆಮೋ ಟ್ರೈನ್ 11:30ಕ್ಕೆ ತುಮಕೂರು ತಲುಪಲಿದೆ. ಮಧ್ಯಾಹ್ನ 2 ಗಂಟೆಗೆ ಹೊರಡಲಿರುವ ಟ್ರೈನ್ 3:50 ಕ್ಕೆ ತುಮಕೂರು ತಲುಪಲಿದೆ. ಅದೇ ರೀತಿ ಸಂಜೆ 7 ಗಂಟೆಗೆ ಹೊರಡಲಿರುವ ಟ್ರೈನ್ 8:30 ಕ್ಕೆ ತುಮಕೂರು ತಲುಪಲಿದೆ. (ದಿಗ್ವಿಜಯ ನ್ಯೂಸ್)

Leave a Reply

Your email address will not be published. Required fields are marked *