ಸಿದ್ಧಗಂಗಾ ಶ್ರೀಗೆ ಭಾರತರತ್ನಕ್ಕೆ ಶಿಫಾರಸು ಮಾಡುವಷ್ಟು ದೊಡ್ಡವನಲ್ಲ: ಮುರಳೀಧರ ರಾವ್‌

ತುಮಕೂರು: ಕಾಯಕಯೋಗಿ, ನಡೆದಾಡುವ ದೇವರು, ತ್ರಿವಿಧ ದಾಸೋಹಿ ಎಂದೇ ಹೆಸರಾಗಿರುವ ತುಮಕೂರಿನ ಸಿದ್ಧಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿಗಳು ಲಿಂಗೈಕ್ಯರಾಗಿದ್ದು, ಎಲ್ಲೆಡೆಯಿಂದ ಅವರಿಗೆ ಭಾರತರತ್ನ ನೀಡಬೇಕೆಂಬ ಒತ್ತಾಯಗಳು ಕೇಳಿಬರುತ್ತಿವೆ.

ಈ ಬೆನ್ನಲ್ಲೇ ಶ್ರೀಗಳಿಗೆ ಭಾರತರತ್ನ ನೀಡಿ ಎಂದು ಹೇಳುವಷ್ಟು ದೊಡ್ಡವನು ನಾನಲ್ಲ ಎಂದು ರಾಜ್ಯ ಬಿಜೆಪಿ ಉಸ್ತುವಾರಿ ಮುರಳೀಧರ ರಾವ್‌ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶ್ರೀಗಳು ನಮ್ಮ ನಡುವೆ ಇದ್ದ ನಡೆದಾಡುವ ದೇವರು. ಲಕ್ಷಾಂತರ ಜನರಿಗೆ ಅನ್ನದಾಸೋಹ, ಶಿಕ್ಷಣ ಕೊಟ್ಟವರು. ಸಿದ್ಧಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿಗಳು ನಮ್ಮ ನಡುವೆ ಇಲ್ಲವೆಂಬುದನ್ನು ನಂಬಲು ಆಗುತ್ತಿಲ್ಲ. ಶ್ರೀಗಳಿಗೆ ಭಾರತ ರತ್ನ ನೀಡುವಂತೆ ಶಿಫಾರಸು ಮಾಡುವಷ್ಟು ದೊಡ್ಡವನು ನಾನಲ್ಲ ಎಂದು ತಿಳಿಸಿದ್ದಾರೆ.

ಯೋಗಗುರು ಬಾಬಾ ರಾಮ್‌ದೇವ್‌ ಅಂತಿಮ ದರ್ಶನ

ಸಿದ್ಧಗಂಗಾ ಶ್ರೀಗಳು ಅಂತಿಮ ದರ್ಶನವನ್ನು ಯೋಗಗುರು ಬಾಬಾ ರಾಮ್‌ದೇವ್‌ ಅವರು ಪಡೆದರು. ಬಳಿಕ ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅವರಿಂದ ಮಾಹಿತಿ ಪಡೆದರು. (ದಿಗ್ವಿಜಯ ನ್ಯೂಸ್)

One Reply to “ಸಿದ್ಧಗಂಗಾ ಶ್ರೀಗೆ ಭಾರತರತ್ನಕ್ಕೆ ಶಿಫಾರಸು ಮಾಡುವಷ್ಟು ದೊಡ್ಡವನಲ್ಲ: ಮುರಳೀಧರ ರಾವ್‌”

  1. ಶಿಫಾರಸ್ಸು ಮಾಡಲಾಗದಿದ್ದರೆ ಬೇಡ – ಬೆಂಬಲಿಸಬಹುದಲ್ಲವೇ?

Comments are closed.