ಕಲಬುರಗಿ: ಕಲ್ಯಾಣ ಕರ್ನಾಟಕ ಉತ್ಸವ ಹಿನ್ನಲೆ, ಕಲಬುರಗಿ ನಗರಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಗಮಿಸಿದ ಹಿನ್ನಲೆ ಜಿಲ್ಲೆಯ ಕಬ್ಬು ಬೆಳೆಗಾರರು ಚಿಂಚೋಳಿಯ ಸಿದ್ದಸಿರಿ ಇಥೇನಾಲ್ ಕಾರ್ಖಾನೆ ಮರು ಪ್ರಾರಂಭಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ನೀಡಲು ಆಗಮಿಸುತ್ತಿದ್ದ ವೇಳೆ ಕಲಬುರಗಿಯಿಂದ 20ಕೀಮಿ ದೂರ ಹೆಬ್ಬಾಳ ಕ್ರಾಸ್ ಇರುವ ಬಳಿಯೇ ನೂರಾರು ರೈತರನ್ನು ಪೊಲೀಸರು ತಡೆದು ನಿಲ್ಲಿಸಿದ್ದಾರೆ.
ಇದರ ಜತೆಗೆ ಜಿಲ್ಲೆಯ ಮಹಾಗಾಂವ್ ಕ್ರಾಸ್, ಮಳಖೇಡ್, ಅಶೋಕ್ ನಗರ, ಈದ್ಗ ಕ್ರಾಸ್, ಕೊಡ್ಲಿ ಕ್ರಾಸ್, ಕಮಲಾಪುರ್ ಕಾಳಗಿ ಸೇರಿ ಅನೇಕ ಕಡೆಗೆ ರೈತರಿಗೆ ಪೊಲೀಸರು ತಡೆ ಒಡ್ಡಿದ್ದಾರೆ.
ಒಟ್ಟಾರೆ ನಗರಕ್ಕೆ ಪ್ರವೇಶಿಸುವ ಎಲ್ಲಾ ರಸ್ತೆಗಳನ್ನು ಪೊಲೀಸ್ ಬಿಡು ಬಿಟ್ಟಿದದ್ದು, ರೈತರ ಆಕ್ರೋಶಕ್ಕೆ ಕಾರಣವಾಗಿದೆ.