ಇದು ಸಮ್ಮಿಶ್ರ ಸರ್ಕಾರಗಳ ಕಾಲ ಎಂದರು ಮಾಜಿ ಸಿಎಂ ಸಿದ್ದರಾಮಯ್ಯ

ರಾಯಚೂರು: ಇದು ಸಮ್ಮಿಶ್ರ ಸರ್ಕಾರಗಳ ಕಾಲ. ಯಾವ ಪಕ್ಷಕ್ಕೂ ಪೂರ್ಣ ಬಹುಮತ ಬರುತ್ತಿಲ್ಲ. ಹೀಗಾಗಿ ಸಮಾನ ಮನಸ್ಕ ಪಕ್ಷಗಳು ಒಗ್ಗೂಡಿ ಸರ್ಕಾರ ರಚನೆ ಮಾಡುತ್ತಿವೆ. ಕೇಂದ್ರದಲ್ಲಿರುವುದು ಎನ್‌ಡಿಎ ಸರ್ಕಾರವೇ ಹೊರತು ಬಿಜೆಪಿ ಸರ್ಕಾರ ಎಂದು ಹೇಳಲು ಬರುವುದಿಲ್ಲ. ಮೈತ್ರಿ ಕೂಟ ರಚನೆಯಾಗಿದ್ದರೂ ಈಗಲೇ ಪ್ರಧಾನಿ ಅಭ್ಯರ್ಥಿ ಯಾರು ಎಂದು ಘೋಷಣೆ ಮಾಡಲು ಸಾಧ್ಯವಿಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಮೋದಿಗೆ ಮಾತ್ರ ಪ್ರಧಾನಿಯಾಗುವ ಯೋಗ್ಯತೆ ಇದೆಯಾ ? ವಿಪಕ್ಷದಲ್ಲಿ ನೂರಾರು ಜನರಿಗೆ ಪ್ರಧಾನಿಯಾಗುವ ಯೋಗ್ಯತೆಯಿದೆ. ರಾಹುಲ್ ಗಾಂಧಿಗೆ ಪ್ರಧಾನಿಯಾಗುವ ಯೋಗ್ಯತೆಯಿಲ್ಲವೇ ? ದೇವೇಗೌಡ, ಮಾಯಾವತಿ ಸೇರಿ ಮಹಾಘಟಬಂಧನದಲ್ಲಿ ಪ್ರಧಾನಿ ಯೋಗ್ಯತೆ ಉಳ್ಳವರು ಇದ್ದಾರೆ ಎಂದು ಇತ್ತೀಚಿನ ಅಮಿತ್ ಷಾ ಹೇಳಿಕೆಗೆ ಭಾನುವಾರ ತಿರುಗೇಟು ನೀಡಿದರು.

One Reply to “ಇದು ಸಮ್ಮಿಶ್ರ ಸರ್ಕಾರಗಳ ಕಾಲ ಎಂದರು ಮಾಜಿ ಸಿಎಂ ಸಿದ್ದರಾಮಯ್ಯ”

Comments are closed.