Thursday, 13th December 2018  

Vijayavani

ಕಬ್ಬು ದರ ಬಾಕಿ ನೀಡಲು ರೈತರ ಆಗ್ರಹ -ಸುವರ್ಣ ಸೌಧದಕ್ಕೆ ಮುತ್ತಿಗೆ ಯತ್ನ - ಪೊಲೀಸರೊಂದಿಗೆ ಅನ್ನದಾತರ ಜಟಾಪಟಿ        ರಾಜಸ್ಥಾನ ಸಿಎಂ ಆಗಿ ಗೆಹ್ಲೋಟ್ ಹೆಸರು ಫೈನಲ್ - ರಾಹುಲ್ ಆಪ್ತ ಸಚಿನ್ ಪೈಲಟ್​ಗೆ ಡಿಸಿಎಂ ಪಟ್ಟ - ಅಧಿಕೃತ ಘೋಷಣೆ ಬಾಕಿ        ಬಳ್ಳಾರಿಯ ಮೈಲಾರದಲ್ಲಿ ಗೊರವಯ್ಯನ ಗಲಾಟೆ - ಸಣ್ಣಪ್ಪ ಮಲ್ಲಪ್ಪನವರಿಗೆ ಗೊರವಯ್ಯನ ದೀಕ್ಷೆ ಕೊಟ್ಟಿದ್ದಕ್ಕೆ ವಿರೋಧ         ಟ್ರಿನಿಟಿ ಸರ್ಕಲ್​​ನಲ್ಲಿ ಮೆಟ್ರೋ ಪಿಲ್ಲರ್ ಬಿರುಕು - ಜೀವದ ಜತೆ ಚೆಲ್ಲಾಟ ಬೇಡ - ದಿಗ್ವಿಜಯ ನ್ಯೂಸ್ ಜತೆ ಎಕ್ಸ್​​ಪರ್ಟ್​​ಗಳ ಮಾತು        ತಿರುವನಂತಪುರದಲ್ಲಿ ಬಿಜೆಪಿ ಕಾರ್ಯಕರ್ತರ ಪ್ರತಿಭಟನೆ -ಹಿಂಸಾಚಾರಕ್ಕೆ ಯತ್ನ, ಪೊಲೀಸರಿಂದ ಲಾಠಿಚಾರ್ಜ್       
Breaking News

ಯತೀಂದ್ರ ಸಿದ್ದರಾಮಯ್ಯಗೆ ದಲಿತ ಮುಖಂಡರ ತರಾಟೆ

Tuesday, 10.04.2018, 3:22 PM       1 Comment

ಮೈಸೂರು: ಮೈಸೂರಿನ ವರುಣಾದಲ್ಲಿ ಚುನಾವಣೆಗೆ ಅಣಿಯಾಗಿರುವ ಸಿದ್ದರಾಮಯ್ಯ ಪುತ್ರ ಡಾ. ಯತೀಂದ್ರ ಅವರ ವಿರುದ್ಧ ಸ್ಥಳೀಯ ದಲಿತ ಮುಖಂಡರು ಅಸಮಾಧಾನ ಹೊರಹಾಕಿದ್ದು, ತಮ್ಮನ್ನು ನಿರ್ಲಕ್ಷಿಸಿದ್ದರ ವಿರುದ್ಧ ಏರು ದನಿಯಲ್ಲೇ ಪ್ರಶ್ನಿಸಿದ್ದಾರೆ.

ಮೈಸೂರಿನ ಹೋಟೆಲ್​ವೊಂದರಲ್ಲಿ ಮಂಗಳವಾರ ಕಾಂಗ್ರೆಸ್​ ದಲಿತ ಮುಖಂಡರ ಸಭೆ ಆಯೋಜಿಸಿತ್ತು. ಈ ವೇಳೆ ಕೆಲ ದಲಿತ ಮುಖಂಡರು ಯತೀಂದ್ರ ಅವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಚುನಾವಣೆ ಬಂದಾಗ ನಾವುಗಳು ನಿಮಗೆ ನೆನಪಿಗೆ ಬರುತ್ತೇವೆ‌. ನಮ್ಮ ಕೆಲಸ ಕಾರ್ಯವಿದ್ದಾಗ ಮನೆ ಮುಂದೆ ಬಂದರೂ ಕಾಣಿಸಿಕೊಳ್ಳುವುದಿಲ್ಲ. ವಿವಿಧ ನಿಗಮಗಳಿಂದ ಕೊಟ್ಟವರಿಗೆ ಸಾಲ ಕೊಡುತ್ತೀರೇ ವಿನಾ, ಎಷ್ಟು ಬಾರಿ ಅರ್ಜಿ ಹಾಕಿದರೂ ನಮ್ಮ ಮನವಿಯನ್ನು ತಿರಸ್ಕರಿಸುತ್ತೀರಿ. ದಲಿತರ ನಡುವೆ ತಾರತಮ್ಯ ಭಾವನೆ ಬಿತ್ತುತ್ತಿದ್ದೀರಿ ಎಂದು ಪ್ರಶ್ನೆಗಳ ಸುರಿಮಳೆಗೈದರು. ನಂತರ ಕೆಲ ಮುಖಂಡರು ಸಭೆಯಿಂದ ಹೊರ ನಡೆದರು.

ದಲಿತ ಮುಖಂಡರ ಈ ನಡೆಯಿಂದಾಗಿ ಸಿದ್ದರಾಮಯ್ಯ ಪುತ್ರ ಯತೀಂದ್ರ ಕಸಿವಿಸಿಗೊಂಡರು. (ದಿಗ್ವಿಜಯ ನ್ಯೂಸ್​)

One thought on “ಯತೀಂದ್ರ ಸಿದ್ದರಾಮಯ್ಯಗೆ ದಲಿತ ಮುಖಂಡರ ತರಾಟೆ

Leave a Reply

Your email address will not be published. Required fields are marked *

Back To Top