ಮೋದಿಯವರು ನಮ್ಮ ರಾಜ್ಯದ ಶಾಸಕರನ್ನು ಕೂಡಿಟ್ಟು ಕೋಣೆ ಕಾಯುವ ಚೌಕಿದಾರ: ಸಿದ್ದರಾಮಯ್ಯ ಟೀಕೆ

 

ಬೆಂಗಳೂರು: ಮುಂಬೈ, ದೆಹಲಿಯ ರೆಸಾರ್ಟ್​ಗಳನ್ನು ಸೇರಿಕೊಂಡಿರುವ ರಾಜ್ಯದ ಶಾಸಕರನ್ನು ಉದ್ದೇಶಿಸಿ, ಪ್ರಧಾನಿ ಮೋದಿಯವರನ್ನು ಟೀಕಿಸಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಟ್ವೀಟ್​ ಮಾಡಿದ್ದಾರೆ.

ನರೇಂದ್ರ ಮೋದಿಯವರನ್ನು ಟ್ಯಾಗ್​ ಮಾಡಿರುವ ಅವರು, ಚೌಕಿದಾರ್​ ಪ್ರಧಾನಿಯವರೇ ನೀವು ನಿಮ್ಮನ್ನು ದೇಶದ ಚೌಕಿದಾರ್​ ಎಂದು ಹೇಳಿಕೊಳ್ಳುತ್ತೀರಿ. ಆದರೆ ಈಗ ನಮ್ಮ ರಾಜ್ಯದ ಶಾಸಕರನ್ನು ಕೋಣೆಯಲ್ಲಿ ಕೂಡಿಹಾಕಿ ಕಾಯುವ ಕಾವಲುಗಾರನಾಗಿಬಿಟ್ಟಿರಲ್ಲ ಎಂದು ವ್ಯಂಗ್ಯವಾಡಿದ್ದಾರೆ.

ಹಾಗೇ ದೆಹಲಿಯಲ್ಲಿರುವ ನಮ್ಮ ರಾಜ್ಯದ ಶಾಸಕರು ಚೌಕೀದಾರ್​ ಬಂಧನದಿಂದ ಶೀಘ್ರವೇ ಬಿಡುಗಡೆಗೊಂಡು ಬರಲಿ. ಆತಂಕದಲ್ಲಿರುವ ಅವರ ಕುಟುಂಬಸ್ಥರನ್ನು ಸೇರಿಕೊಳ್ಳಲಿ ಎಂದು ಹಾರೈಸುತ್ತೇನೆ ಎಂದಿದ್ದಾರೆ.

ನಾವೇನೂ ಕೈಕಟ್ಟಿ ಕುಳಿತಿಲ್ಲ. ರಾಜಕೀಯ ಆಖಾಡದಲ್ಲಿ ನಾವೂ ಕುಸ್ತಿ ಆಡಿದವರು. ಪಟ್ಟುಗಳು ನಮಗೂ ಗೊತ್ತು ಎಂದು ಎಚ್ಚರಿಕೆ ನೀಡಿದ್ದಾರೆ.

2 Replies to “ಮೋದಿಯವರು ನಮ್ಮ ರಾಜ್ಯದ ಶಾಸಕರನ್ನು ಕೂಡಿಟ್ಟು ಕೋಣೆ ಕಾಯುವ ಚೌಕಿದಾರ: ಸಿದ್ದರಾಮಯ್ಯ ಟೀಕೆ”

  1. ಇಂತಹ ಏಕಮುಖ ಟೀಕೆಗಳು ಸರಿಯಲ್ಲ. ಎರಡು ಕೈ ಸೇರಿದರೆ ತಾನೇ ಚಪ್ಪಾಳೆ. ನಿಮ್ಮಲ್ಲಿರುವ ತಪ್ಪುಗಳನ್ನು ಮೊದಲು ಸರಿಪಡಿಸಿಕೊಳ್ಳಿ!

Comments are closed.