ಸವಣೂರ: ಸ್ಪಷ್ಟ ಹಾಗೂ ಜನಪರ ಆಡಳಿತವನ್ನು ರಾಜ್ಯದಲ್ಲಿ ಆಳ್ವಿಕೆ ಮಾಡಿದ ಧೀಮಂತ ನಾಯಕ ಇದ್ದರೆ ಅದು ಮುಖ್ಯಮಂತ್ರಿ ಸಿದ್ದರಾಮಯ್ಯ ಎಂದು ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ ಹೇಳಿದರು.
ತಾಲೂಕಿನ ಮಂತ್ರೋಡಿ ಗ್ರಾಮದ ಶ್ರೀ ಮೈಲಾರಲಿಂಗೇಶ್ವರ ಶಿಭಾರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಯಾಸಿರ ಅಹ್ಮದಖಾನ್ ಪಠಾಣ ಪರ ಗುರುವಾರ ಏರ್ಪಡಿಸಿದ್ದ ಪ್ರಚಾರ ಸಭೆ ಉದ್ದೇಶಿಸಿ ಅವರು ಮಾತನಾಡಿದರು.
ಬಡವರು ಒಂದು ಹೊತ್ತಿನ ಊಟಕ್ಕೂ ಗತಿ ಇಲ್ಲದೇ ಭಿಕ್ಷೆ ಬೇಡಿ ತಿನ್ನುವುದನ್ನು ಅರಿತುಕೊಂಡು ಇನ್ಮುಂದೆ ಯಾರೂ ಹಸಿವಿನಿಂದ ಬಳಲಬಾರದು ಎಂದು 10 ಕೆಜಿ ಅಕ್ಕಿಯನ್ನು ಉಚಿತವಾಗಿ ನೀಡುವ ಮೂಲಕ ದೇಶದಲ್ಲೇ ಮಾದರಿಯಾಗಿದ್ದಾರೆ. ಈ ಭಾರಿ ಪಂಚ ಗ್ಯಾರಂಟಿ ಯೋಜನೆಗಳನ್ನು ಕೇವಲ ಒಂದೇ ವರ್ಷದಲ್ಲಿ ಜಾರಿ ಮಾಡಿ ಕಾಂಗ್ರೆಸ್ ಸರ್ಕಾರ ನುಡಿದಂತೆ ನಡೆದುಕೊಂಡಿದೆ ಎಂದರು.
ಬ್ಯಾಡಗಿ ಶಾಸಕ ಬಸವರಾಜ ಶಿವಣ್ಣನವರ, ಪ್ರಮುಖರಾದ ವಿನೋದ ಅಸೂಟಿ, ದೀಪ್ತಿ, ಲಕ್ಷ್ತ್ರ್ಮರಾವ ಚಿಂಗಳೆ, ಚಿಕ್ಕಣ ಹಾದಿಮನಿ, ಬಸಲಿಂಗಪ್ಪ ಬಸಲಗುಂದಿ, ಯಲ್ಲಪ್ಪ ಆಡಿನವರ, ದೂಳಪ್ಪ ಕುರಿಗಾರ, ಅಬ್ದುಲ್ಸತ್ತಾರ ಅರಳೇಶ್ವರ, ಗುಡ್ಡಪ್ಪ ಜಲದಿ, ಇತರರು ಇದ್ದರು.