ಮಂಡ್ಯದಲ್ಲಿ ನಿಖಿಲ್‌ ಕುಮಾರಸ್ವಾಮಿ ಸೋಲಿಗೆ ಕಾರಣ ಬಿಚ್ಚಿಟ್ಟ ಮಾಜಿ ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಎರಡು ಮೂರು ದಿನಗಳಲ್ಲಿ ಅಭ್ಯರ್ಥಿ ಪಟ್ಟಿ ಅಂತಿಮ ಮಾಡುತ್ತೇವೆ. ಚುನಾವಣೆಗೆ ರೆಡಿಯಾಗಿದ್ದೇವೆ. 15 ಕ್ಷೇತ್ರಗಳಲ್ಲಿ ಗೆಲ್ಲುತ್ತೇವೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದರು.

ಸ್ವಾಭಿಮಾನ ಸಮಾವೇಶದಲ್ಲಿ ಮಾತನಾಡಿದ ಅವರು, ನಾವು ಇಷ್ಟು ಬೇಗ ಚುನಾವಣೆ ಬರುತ್ತದೆ ಎಂದು ಅಂದುಕೊಂಡಿರಲಿಲ್ಲ. ನಿರೀಕ್ಷೆ ಇತ್ತು ಆದರೆ ಅಕ್ಟೋಬರ್‌ನಲ್ಲೇ ಆಗುತ್ತೆ ಎಂದು ಅಂದುಕೊಂಡಿರಲಿಲ್ಲ. ನಾವು ತಯಾರಾಗಿದ್ದೇವೆ. ಚುನಾವಣೆಯನ್ನು ಎದುರಿಸುತ್ತೇವೆ. ಮೈತ್ರಿ ಕುರಿತು ಹೈಕಮಾಂಡ್ ತೀರ್ಮಾನ ಮಾಡುತ್ತದೆ. ಹೈಕಮಾಂಡ್ ಮುಂದೆ ನಮ್ಮ ಅಭಿಪ್ರಾಯ ಹೇಳುತ್ತೇವೆ ಎಂದು ಹೇಳಿದರು.

ಕಾಂಗ್ರೆಸ್‌ ಮೊದಲ ಶತ್ರು ಎಂಬ ಎಚ್‌ ಡಿ ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿ, ಕಾಂಗ್ರೆಸ್ ಬೆಂಬಲದಿಂದ ಸಿಎಂ ಆಗಿದ್ದರಲ್ಲ ಎಚ್ಡಿಕೆ. ಅದಕ್ಕಾಗಿ ಎಚ್ಡಿಕೆ ಹಾಗೆ ಹೇಳಿರಬೇಕು. ಜನರ ಸ್ವಾಭಿಮಾನದ ಮೇಲೆ ಪೆಟ್ಟು ಕೊಟ್ಟರೆ ಅದನ್ನು ಸಹಿಸಿಕೊಳ್ಳಲ್ಲ. ಜನ ಸ್ವಾಭಿಮಾನಕ್ಕೆ ಮತ ಕೊಡ್ತಾರೆ ಹೊರತು, ಹಣಕ್ಕೆ ಅಲ್ಲ. ಮಂಡ್ಯದಲ್ಲಿ ಏನಾಯಿತು. ಸ್ವಾಭಿಮಾನಕ್ಕಾಗಿ ಮಂಡ್ಯದ ಜನ ಮತ ಕೊಡಲಿಲ್ಲವೇ? ಸುಮಲತಾ ಬಳಿ ದುಡ್ಡು ಇತ್ತಾ? ಎಂಟಿಬಿ ತಿಳಿದಿಕೊ ಜನ ಉತ್ತರ ಕೊಡುತ್ತಾರೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಮಗ ನಿಖಿಲ್ ಕುಮಾರಸ್ವಾಮಿ ಸೋಲಿಗೆ ಸ್ಪಷ್ಟನೆ ನೀಡಿದರು.

ಎಚ್. ಎಂ. ರೇವಣ್ಣ ಸೀನಿಯರ್. ಆದರೆ ಎಂಟಿಬಿ ನಾಗರಾಜುಗೆ ಮಾತು ಕೊಟ್ಟಿದ್ದೆ ಎನ್ನುವ ಕಾರಣಕ್ಕೆ ಸಚಿವ ಮಾಡಿದೆ. ಆದರೆ ನಮಗೆ ದ್ರೋಹ ಮಾಡಿದ. ಬೆಂಗಳೂರು ಗ್ರಾಮಾಂತರಕ್ಕೆ ಅವರು ಯಾವ ಅಧಿಕಾರಿ ಹೇಳುತ್ತಾರೋ ಅದಕ್ಕೆ ಅವರನ್ನು ಹಾಕಿಸಿಕೊಟ್ಟೆ. ಇಷ್ಟೆಲ್ಲ ಅನುಭವಿಸಿ ನಮಗೆ ಮೂರು ನಾಮ ಹಾಕಿ ಹೋದರಲ್ಲ. ಸ್ವಾಭಿಮಾನ ಮಾರಿಕೊಂಡ್ರಾ ನಾಗರಾಜ್? ಸೋಮವಾರ ಇವರ ಹಣೆ ಬರಹ ಗೊತ್ತಾಗುತ್ತದೆ. ಎಂಟಿಬಿ ನಾಗರಾಜ್ ಅಲ್ಲ ಕುಟುಂಬದಿಂದ ಯಾರೇ ನಿಲ್ಲಲಿ. ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸ್ತೀವಿ ಎಂದು ಸಂಕಲ್ಪ ಮಾಡಿ ಎಂದು ತಿಳಿಸಿದರು.

ದಿನಾ ಪೂರ್ತಿ ಸರ್ಕಸ್ ಮಾಡಿದಕ್ಕೆ ಒಪ್ಪಿಕೊಂಡ. ನಾನು, ಡಿಕೆಶಿ, ಕುಮಾರಸ್ವಾಮಿ, ಕೃಷ್ಣಬೈರೇಗೌಡ ಮುಂದೆ ಕಾಂಗ್ರೆಸ್‌ನಲ್ಲಿ ಇರುತ್ತೇನೆ ಎಂದು ಹೇಳಿದ. ಮಾಧ್ಯಮಗಳ ಮುಂದೆ ಸುಧಾಕರ್ ಹೇಳಿದ ರೀತಿ ಮಾಡ್ತೀನಿ ಎಂದ. ಇವರಿಗೆ ಮಾನ ಮರ್ಯಾದೆ ಇದ್ದರೆ ಈ ರೀತಿ ನಡೆದುಕೊಳ್ತಾರಾ? ನಂಬಿಕೆ ದ್ರೋಹ ಮಾಡಿದವರಿಗೆ ಮತ್ತೆ ಗೆಲ್ಲಿಸಿಕಳಿಸಬೇಕಾ. ಎದೆ ಬಗೆದರೆ ಸಿದ್ದರಾಮಯ್ಯ ಇದಾರೆ ಅಂತಿದ್ದ. ಹೀಗಾಗಿ ನಾಗರಾಜ್ ಹೋಗುತ್ತಾರೆ ಎಂದು ಹೇಳಿದರು ಕೆಲವರು ನಂಬಲಿಲ್ಲ. ಸುಧಾಕರ್ ರಾಜೀನಾಮೆ ವಾಪಸ್ ತಗೋ ಅಂದ್ರೆ ತಗೋತೀನಿ ಅಂದ ಎಂದು ಎಂಟಿಬಿ ನಾಗರಾಜ್‌ ವಿರುದ್ಧ ಏಕವಚನದಲ್ಲೇ ವಾಗ್ದಾಳಿ ನಡೆಸಿದರು. (ದಿಗ್ವಿಜಯ ನ್ಯೂಸ್)

Leave a Reply

Your email address will not be published. Required fields are marked *