ಸಿದ್ದರಾಮಯ್ಯ ಅವರನ್ನು ಅವರೇ ಸತ್ಯ ಹರಿಶ್ಚಂದ್ರ ಎಂದುಕೊಂಡಿದ್ದಾರೆ: ಜಗದೀಶ್​ ಶೆಟ್ಟರ್​ ವ್ಯಂಗ್ಯ

ಹುಬ್ಬಳ್ಳಿ: ಮಾಜಿ ಸಿಎಂ ಸಿದ್ದರಾಮಯ್ಯ, ಅವರನ್ನು ಅವರೇ ಸತ್ಯಹರಿಶ್ಚಂದ್ರ ಎಂದು ತಿಳಿದುಕೊಂಡಿದ್ದಾರೆ. ಕಾಂಗ್ರೆಸ್​​ನಲ್ಲಿ ನೂರೆಂಟು ಗುಂಪಿದೆ, ನಮ್ಮಲ್ಲಿ ಗುಂಪಿಲ್ಲ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್​.ಯಡಿಯೂರಪ್ಪ ನಮ್ಮ ನಾಯಕರು ಎಂದು ಮಾಜಿ ಸಿಎಂ ಜಗದೀಶ ಶೆಟ್ಟರ್ ಹೇಳಿದರು.

ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ರಾಜಕೀಯ ಚದುರಂಗದಾಟ ಆಡುತ್ತಿದ್ದಾರೆ. ಕಾಂಗ್ರೆಸ್, ಜೆಡಿಎಸ್​ ಮೈತ್ರಿ ಸರ್ಕಾರಕ್ಕೆ ಸಿದ್ದರಾಮಯ್ಯ ಅವರೇ ಟೈಂ ಬಾಂಬ್ ಇಟ್ಟಿದ್ದಾರೆ. ಅದು ಯಾವಾಗ ಸಿಡಿಯುತ್ತದೆ ಅವರಿಗೆ ಮಾತ್ರವೇ ಗೊತ್ತು. ಸಿದ್ದರಾಮಯ್ಯ ಮಾಡುತ್ತಿರುವ ಕುತಂತ್ರ ಎಲ್ಲರಿಗೂ ಗೊತ್ತಿದೆ ಎಂದು ಕಿಡಿಕಾರಿದರು.

ಈ ಜಗತ್ತಿನಲ್ಲಿರುವ ಎಲ್ಲರು ಕಳ್ಳರು, ಭ್ರಷ್ಟಾಚಾರಿಗಳು? ಸಿದ್ದರಾಮಯ್ಯ ತಾನು ಮಾತ್ರ ಸಾಚಾ ಎಂದು ಕೊಂಡಿದ್ದಾರೆ ಎಂದು ಜಗದೀಶ್​ ಶೆಟ್ಟರ್​ ವ್ಯಂಗ್ಯವಾಡಿದರು.

ದುರ್ಯೋಧನನ ಇನ್ನೊಂದು ಹೆಸರೇ ಸಿದ್ದರಾಮಯ್ಯ

ನಾನು ಎನ್ನುವ ಅಹಂಕಾರ ತುಂಬಿದ ವ್ಯಕ್ತಿ ಮತ್ತು ದುರ್ಯೋಧನನ ಇನ್ನೊಂದು ಹೆಸರೇ ಸಿದ್ದರಾಮಯ್ಯ. ಜೋಶಿ ಎಲ್ಲಿದ್ದೀಯಪ್ಪ ಎಂದು ಪ್ರಚಾರದ ವೇಳೆ ಸಿದ್ದರಾಮಯ್ಯ ನನ್ನನ್ನು ಕೇಳಿದ್ದಾರೆ. ಸೋಲಿನ ಭಯದಿಂದ ನನ್ನ ಬಗ್ಗೆ ಹೇಳಿದ್ದಾರೆ. ನಿಮ್ಮ ನಾಲಿಗೆ ನಿಮ್ಮ ಸಂಸ್ಕೃತಿ ತೋರಿಸುತ್ತದೆ ಎಂದು ಹುಬ್ಬಳ್ಳಿಯಲ್ಲಿ ಸಂಸದ ಪ್ರಹ್ಲಾದ್ ಜೋಶಿ ಕಿಡಿಕಾರಿದರು. (ದಿಗ್ವಿಜಯ ನ್ಯೂಸ್​)