ಬಾದಾಮಿಯಲ್ಲಿ ಯಶ್‌-ಸುದೀಪ್‌ ಅಬ್ಬರದ ಪ್ರಚಾರ

ಬೆಂಗಳೂರು: ಮೇ 12ರಂದು ನಡೆಯಲಿರುವ ರಾಜ್ಯ ವಿಧಾನಸಭೆ ಚುನಾವಣೆ ಈಗಾಗಲೇ ಹಲವು ವಿಚಾರಗಳಿಂದ ಗಮನ ಸೆಳೆದಿದ್ದು, ಬಾದಾಮಿ ಕ್ಷೇತ್ರವು ಹೈವೋಲ್ಟೇಜ್‌ ಕ್ಷೇತ್ರವಾಗಿ ಪರಿಣಮಿಸಿದೆ. ಸ್ಟಾರ್‌ಗಳು ಅಖಾಡಕ್ಕಿಳಿದು ವಿವಿಧ ಅಭ್ಯರ್ಥಿಗಳ ಪರ ಪ್ರಚಾರ ನಡೆಸುತ್ತಿದ್ದಾರೆ.

ಮೇ 7ರಂದು ಬಾದಾಮಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪರ ನಟ ಸುದೀಪ್​ ಪ್ರಚಾರ ನಡೆಸುವ ಹಿನ್ನೆಲೆಯಲ್ಲಿ ‘ಗೋ ಬ್ಯಾಕ್ ಸುದೀಪ್​’ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಆಗ್ರಹ ಕೇಳಿಬಂದಿದೆ.

ಬಾದಾಮಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶ್ರೀರಾಮುಲು ಅವರ ಸಮುದಾಯದ ಯುವಕರಿಂದ ‘ಗೋ ಬ್ಯಾಕ್ ಸುದೀಪ್​’​ ಆಗ್ರಹ ಕೇಳಿಬರುತ್ತಿದೆ.
ಇನ್ನು ಬಿಜೆಪಿ ಅಭ್ಯರ್ಥಿ ಶ್ರೀರಾಮುಲು ಪರ ರಾಕಿಂಗ್ ಸ್ಟಾರ್ ಯಶ್ ಪ್ರಚಾರ ಕಾರ್ಯ ಕೈಗೊಳ್ಳಲಿದ್ದು, ಮೇ 7ರಂದು ಬಾದಾಮಿಯಲ್ಲಿ ಇಬ್ಬರು ನಾಯಕನಟರು ರೋಡ್ ಶೋ ನಡೆಸಲಿದ್ದಾರೆ.

ಬೆಳಗ್ಗೆ 11 ಗಂಟೆಗೆ ಸುದೀಪ್​, ಮಧ್ಯಾಹ್ನ 2 ಗಂಟೆಗೆ ಯಶ್ ರೋಡ್ ಶೋ ನಡೆಸಿ ಅಭ್ಯರ್ಥಿಗಳ ಪರ ಮತಯಾಚನೆ ನಡೆಸಲಿದ್ದಾರೆ.
ಇದಲ್ಲದೆ ನಾಳೆ ಯಾದಗಿರಿ ಜಿಲ್ಲೆಯಲ್ಲಿ ಸುರಪುರದ ಬಿಜೆಪಿ ಅಭ್ಯರ್ಥಿ ರಾಜುಗೌಡ ನಾಯಕ್​ ಪರ ನಟ ಕಿಚ್ಚ ಸುದೀಪ್​ ಪ್ರಚಾರ ನಡೆಸಲಿದ್ದಾರೆ ಎಂದು ನಟ ಸುದೀಪ್​ ಆಪ್ತರಿಂದ ‘ದಿಗ್ವಿಜಯ ನ್ಯೂಸ್’​ಗೆ ಮಾಹಿತಿ ಲಭ್ಯವಾಗಿದೆ. (ದಿಗ್ವಿಜಯ ನ್ಯೂಸ್)

Leave a Reply

Your email address will not be published. Required fields are marked *