More

    ರಾಹುಲ್ ಗಾಂಧಿ, ಸ್ವಾಮೀಜಿದ್ವಯರ ಸಮ್ಮುಖದಲ್ಲಿ ಸಿದ್ದರಾಮಯ್ಯಗೆ ಸಿಗಲೇ ಇಲ್ಲ ಭಾಷಣ ಅವಕಾಶ; ಕಾರಣವೇನು?

    ಬಾಗಲಕೋಟೆ: ಲಿಂಗಾಯತ ವಿರೋಧಿ ಹೇಳಿಕೆ ನೀಡಿದ್ದಾರೆ ಎನ್ನಲಾದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಇಂದು ರಾಹುಲ್ ಗಾಂಧಿ ಹಾಗೂ ಸ್ವಾಮೀಜಿದ್ವಯರ ಸಮ್ಮುಖದಲ್ಲಿ ಭಾಷಣ ಮಾಡಲು ಅವಕಾಶ ಸಿಗದಿರುವುದು ಹಲವರಲ್ಲಿ ಕುತೂಹಲ ಕೆರಳಿಸಿದೆ. ಮಾತ್ರವಲ್ಲ, ಇದೊಂದು ಬೆಳವಣಿಗೆ ಕೆಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.

    ಬಸವ ಜಯಂತಿಯ ದಿನವಾದ ಇದನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಕೂಡಲಸಂಗಮದಲ್ಲಿ ಪಾಲ್ಗೊಂಡಿದ್ದ ಕಾರ್ಯಕ್ರಮದಲ್ಲಿ ಸ್ವಾಮೀಜಿಯವರಿಬ್ಬರ ಜೊತೆಗೆ ಮಾಜಿ ಸಿಎಂ ಸಿದ್ದರಾಮಯ್ಯ ಕೂಡ ಪಾಲ್ಗೊಂಡಿದ್ದರು. ಆದರೆ ಆ ಮೂವರು ಭಾಷಣ ಮಾಡಿದ್ದರೂ ಸಿದ್ದರಾಮಯ್ಯ ಅವರಿಗೆ ಭಾಷಣ ಅವಕಾಶ ಸಿಗಲಿಲ್ಲ.

    ಇದನ್ನೂ ಓದಿ:  ಸಿನಿಮಾ ನಿರ್ದೇಶಕ-ನಿರ್ಮಾಪಕರಿಗೆ ಸಿಹಿಸುದ್ದಿ; ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಅರ್ಜಿ ಆಹ್ವಾನ

    ರಾಹುಲ್ ಗಾಂಧಿ ಹಾಗೂ ಸ್ವಾಮೀಜಿಗಳಿಬ್ಬರು ಮಾತನಾಡಿದರೂ ಜೊತೆಗೇ ವೇದಿಕೆ ಹಂಚಿಕೊಂಡಿದ್ದ ಸಿದ್ದರಾಮಯ್ಯ ಮಾತನಾಡಿರಲಿಲ್ಲ. ಸಮಯದ ಅಭಾವದಿಂದ ಅವರು ಮಾತನಾಡಲಿಲ್ಲವೋ ಅಥವಾ ಕಾಂಗ್ರೆಸ್​ನ ಬಣ ರಾಜಕೀಯ ಅವರಿಗೆ ಮಾತನಾಡಲು ಅವಕಾಶ ಕೊಡಲಿಲ್ಲವೋ ಎಂಬ ಮಾತುಗಳು ಕೇಳಿಬರಲಾರಂಭಿಸಿವೆ. ಲಿಂಗಾಯತ ಮುಖ್ಯಮಂತ್ರಿಗಳ ಬಗ್ಗೆ ಸಿದ್ದರಾಮಯ್ಯ ಹೇಳಿಕೆ ವಿವಾದ ಉಂಟು ಮಾಡಿದ್ದೂ ಇದಕ್ಕೆ ಕಾರಣ ಇದ್ದಿರಬಹುದೇ ಎಂಬ ಜಿಜ್ಞಾಸೆಯೂ ಮೂಡಿದೆ. ಒಂದುವೇಳೆ ಸಿದ್ದರಾಮಯ್ಯ ಮಾತನಾಡಿದ್ದರೆ ಸ್ವಾಮೀಜಿದ್ವಯರ ಸಮ್ಮುಖದಲ್ಲಿ ತಮ್ಮ ವಿವಾದಿತ ಹೇಳಿಕೆ ಸಂಬಂಧ ಸ್ಪಷ್ಟನೆ ಕೊಡುತ್ತಿದ್ದರೇನೋ ಎಂಬ ಅನಿಸಿಕೆಗಳು ವ್ಯಕ್ತವಾಗಿವೆ.

    ಸಿದ್ದರಾಮಯ್ಯ ಹೊತ್ತಿಸಿದ ಲಿಂಗಾಯತ ಕಿಡಿ: ಕೈ ನಾಯಕನ ವಿರುದ್ಧ ಕಮಲ ಪಡೆ ವಾಗ್ದಾಳಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts