Jatra – ಡಿ.13 ರಂದು ಶ್ರೀಕ್ಷೇತ್ರ ಸಿದ್ದರದಲ್ಲಿ ನರಸಿಂಹ ಜಾತ್ರಾ ಮಹೋತ್ಸವ

Jatra
ಕಾರವಾರ:   ಡಿಸೆಂಬರ್ 13 ಶುಕ್ರವಾರ ಹಾಗೂ 14  ಶನಿವಾರ ದಂದು ತಾಲೂಕಿನ ಶ್ರೀ ಕ್ಷೇತ್ರ ಸಿದ್ದರದ  ಶ್ರೀ ನರಸಿಂಹ ದೇವರ ಜಾತ್ರಾ (Jatra) ಮಹೋತ್ಸವ ನಡೆಯಲಿದೆ ಎಂದು ಶ್ರೀ ನರಸಿಂಹ, ನಾರಾಯಣ ದೇವಸ್ಥಾನ‌ದ  ಆಡಳಿತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.
ವರ್ಷಂ ಪ್ರತಿಯಂತೆ ಈ ಬಾರಿಯ ಕ್ರೋಧಿ ನಾಮಸಂವತ್ಸರದ ದಕ್ಷಿಣಾಯಣ ಹೇಮಂತ ಋತುವಿನ ಮಾರ್ಗಶಿರ ಶುಕ್ಲಪಕ್ಷದ ದುವಾದಶಿಯಂದು ಅಂದರೆ ಡಿಸೆಂಬರ್ 12ರಂದು ಶ್ರೀ ನರಸಿಂಹ ದೇವರ ಜಾತ್ರೆ‌ Jatra ಹಿನ್ನೆಲೆಯಲ್ಲಿ   ಶ್ರೀ ಕ್ಷೇತ್ರ ಸಿದ್ದರದಲ್ಲಿ ಮಹಾ ಸಂಕಲ್ಪದೊಂದಿಗೆ ಅಂದು ಬೆಳಗ್ಗೆ  8 ಗಂಟೆಗೆ ‘ನರಸಿಂಹ ಧ್ವಜದ’ ಧಜಾರೋಹಣ,ಮಹಾಪೂಜೆ ನಡೆಯಲಿದೆ.
ಡಿಸೆಂಬರ್ 13 ಶುಕ್ರವಾರದಂದು ವಾರ್ಷಿಕ ಜಾತ್ರೆಯ ಪ್ರಯಕ್ತ ಬೆಳಿಗ್ಗೆ ಶ್ರೀ ನರಸಿಂಹ ದೇವರಿಗೆ ಹಾಗೂ ಪರಿವಾರ ದೇವತೆಗಳಿಗೆ ಅಭಂಜನಾದಿ ಸೇವೆ, ಬೆಳಗ್ಗೆ 9 ರಿಂದ 10.30 ರ ವರೆಗೆ  ಗಣಪತಿ ಪೂಜೆ, ಸಂಕಲ್ಪ, ಮಹಾ ಅಭಿಷೇಕ, ಅಲಂಕಾರ,ಮಧ್ಯಾಹ್ನ 12 ರಿಂದ ಪುಣ್ಯ ಮೂರ್ತಿಯ  ಪಾವನ ದರ್ಶನ. ಮಹಾಮಂಗಳಾರತಿ‌ ನಡೆಯಲಿದೆ.
ಅಂದು ಮಧ್ಯಾಹ್ನ 3 ಗಂಟೆಗೆ ಉತ್ಸವ ಮೂರ್ತಿಯ ಆಗಮನ, 3.30 ರಿಂದ ಪೂಜಾ ಕಾರ್ಯ,  ಸಂಜೆ 4 ಗಂಟೆಗೆ  ಶ್ರೀ ನರಸಿಂಹ ದೇವರಿಗೆ ವನಭೋಜನ, ಹಾಗೂ ಗ್ರಾಮ ಸಂಕೀರ್ತನೆಗೆ ತೆರಳಲು ಕೋರಿಕೆ ಸಲ್ಲಿಸಿ ಪಲ್ಲಕ್ಕಿಯಲ್ಲಿ ದೇವರ ಸ್ಥಾಪನೆ ನಡೆಯಲಿದೆ.
ಮಧ್ಯಾಹ್ನ 4.15 ಕ್ಕೆ ಶ್ರೀ ದೇವರು ವನಕ್ಕೆ ಪಲ್ಲಕ್ಕಿಯಲ್ಲಿ ಆಗಮನ, ಸಂಜೆ 4.45ಕ್ಕೆ ವನದ ಗದ್ದುಗೆಯಲ್ಲಿ ಶ್ರೀ ನರಸಿಂಹ ಸ್ವಾಮಿಯ ಉತ್ಸವ ಮೂರ್ತಿಯ ಸ್ಥಾಪನೆ. ಪೂಜೆ ಮಹಾ ನೈವೆಧ್ಯ ಸಮರ್ಪಣೆ, ಸಾರ್ವಜನಿಕರ ದರ್ಶನ ಹಾಗೂ ಸೇವಾರ್ಪಣೆ. ಸಂಜೆ 5.30 ಕ್ಕೆ ಮಹಾಪೂಜೆ, ಕ್ಷೇತ್ರಪಾಲ ಬಲಿ,  ಚೌಡೇಶ್ವರಿ ಅಮ್ಮನವರಿಗೆ ಉಡಿಗೌರವ ಸಮರ್ಪಣೆ ಇತ್ಯಾದಿ ದಾರ್ಮಿಕಕಾರ್ಯ ನಡೆಯಲಿದೆ.
ಸಂಜೆ 5.45ಕ್ಕೆ ವನಬೋಜನ( ಪ್ರಸಾದ ಬೋಜನ) ಸಂಜೆ 6.15ಕ್ಕೆ ಶ್ರೀ ದೇವರಿಗೆ ನೆಲ್ಲಿಕಾಯಿ ಹಾಗೂ ನೆಲ್ಲಿ ಸೊಪ್ಪಿನ ಅಲಂಕಾರ  ಹಾಗೂ ಮಹಾಪೂಜೆ. ಗ್ರಾಮ ಪ್ರಾರ್ಥನೆ ಸಂಜೆ 6.45ಕ್ಕೆ ಶ್ರೀ ನರಸಿಂಹ ದೇವರು  ಪಲ್ಲಕ್ಕಿಯಲ್ಲಿ ವಿರಾಜಮಾನನಾಗಿ ಸಿದ್ದರ ಗ್ರಾಮದ ಪರಿಕ್ರಮಣ ನಡೆಯಲಿದೆ.
ರಾತ್ರಿ 10.45ಕ್ಕೆ ಮರಳಿ ದೇವಸ್ಥಾನದ ಆವರಣಕ್ಕೆ ಪಲ್ಲಕ್ಕಿ ಉತ್ಸವ ಆಗಮನ. ಆಲಯ ಸಂಕೀರ್ಣದ ಪ್ರದಕ್ಷಿಣೆ ಇಡಗಾಯಿ ಸರ್ಮಪಣೆಯ ನಂತರ ಪಲ್ಲಕ್ಕಿ ಕಟ್ಟೆಯಲ್ಲಿ ವಿರಾಜಮಾನರಾಗುವ ಶ್ರೀ ದೇವರು ರಾತ್ರಿ 11.30 ರವರೆಗೆ ದೇವಾಲಯದಲ್ಲಿ ಶೋಡಷೋಪಚಾರ ಪೂಜೆ, ಪುರಾಣ ಪಠಣ, ಮಹಾಪೂಜೆ ನಡೆಯಲಿದೆ.

Jatra ಅಂಗವಾಗಿ ನಾಟಕ

ನಂತರ ಜಾಗರಣೆಯ ಹಿನ್ನೆಲೆಯಲ್ಲಿ ಶ್ರೀ ನರಸಿಂಹ ನಾರಾಯಣ ನಾಟ್ಯ ಮಂಡಳಿ ಸಿದ್ದರ ಇವರಿಂದ ಮನೋಜ ವೈ. ಶಡ್ಗುಲ್ಕರ್ ರಚಿಸಿದ  ‘ಕೋಣ ವಾರ್ತಾ ಕೋಣ ಬೋಗ್ತಾ’ ಕೊಂಕಣಿ ಸಾಮಾಜಿಕ ಹಾಸ್ಯ ನಾಟಕ  ಪ್ರದರ್ಶನ ಜರುಗಲಿದೆ.
ಮರುದಿನ ಡಿ. 14 ಶನಿವಾರ ‘ಧಹಿಕಾಲ’ಮಹೋತ್ಸವ ನಡೆಯಲಿದೆ. ಈ ಹಿನ್ನೆಯಲ್ಲಿ ಸಮಸ್ತ ಜನರು, ಭಕ್ತರು, ಆಸ್ತಿಕರು ಶ್ರೀ ಕ್ಷೇತ್ರ ಸಿದ್ದರದ ಶ್ರೀ ನರಸಿಂಹ ದೇವರ ಜಾತ್ರಾ ಮಹೋತ್ಸದಲ್ಲಿ ಭಾಗವಹಿಸಲು ಆಡಳಿತ ಮಂಡಳಿಯ ದತ್ತಾತ್ರಯ ಗಾವಂಕರ  ಕೋರಿದ್ದಾರೆ
Share This Article

ಮನೆಯಲ್ಲಿಯೇ ಮಾಡಿ ರುಚಿಕರ ಹಾಗಲಕಾಯಿ ಉಪ್ಪಿನಕಾಯಿ; ಇಲ್ಲಿದೆ ತಯಾರಿಸುವ ವಿಧಾನ | Recipe

ಉಪ್ಪಿನಕಾಯಿ ಆಹಾರದ ರುಚಿಯನ್ನು ದ್ವಿಗುಣಗೊಳಿಸುತ್ತದೆ. ಆಹಾರದ ರುಚಿಯ ಜತೆಗೆ ಆರೋಗ್ಯಕವೂ ಆಗಿರುವ ಉಪ್ಪಿನಕಾಯಿ ಮಾಡಿದರೆ ಎಲ್ಲರೂ…

ಸಕ್ಕರೆ ಅಥವಾ ಬೆಲ್ಲ ಯಾವುದು ಉತ್ತಮ ಆರೋಗ್ಯಕ್ಕೆ ಒಳ್ಳೆಯದು; ಇಲ್ಲಿದೆ ಹೆಲ್ತಿ ಮಾಹಿತಿ | Health Tips

ತೂಕವನ್ನು ಇಳಿಸಲು ಅಥವಾ ಆರೋಗ್ಯಕರ ಆಹಾರವನ್ನು ಸೇವಿಸುವ ವಿಷಯಕ್ಕೆ ಬಂದಾಗ ಆಹಾರದಿಂದ ಸಕ್ಕರೆಯನ್ನು ತೆಗೆದುಹಾಕುವುದು ಅಥವಾ…

ತೂಕ ಇಳಿಕೆ ನಿಂಬೆರಸ ಅತ್ಯುತ್ತಮ ಮನೆಮದ್ದು ಎಂಬುದು ಗೊತ್ತೆ; ಇಲ್ಲಿದೆ ಬಳಸುವ ಸರಿಯಾದ ವಿಧಾನ | Health Tips

ಪ್ರಸ್ತುತ ದಿನಗಳಲ್ಲಿ ಬದಲಾಗುತ್ತಿರುವ ಜೀವನಶೈಲಿ ಮತ್ತು ಕಳಪೆ ಆಹಾರ ಪದ್ಧತಿಯಿಂದಾಗಿ ಬೊಜ್ಜು ಸಾಮಾನ್ಯ ಸಮಸ್ಯೆಯಾಗಿದೆ. ಇದರಿಂದಾಗಿ…