ಕಾರವಾರ: ಸಿದ್ದಾಪುರದಲ್ಲಿ ಒಂಟಿ ಮಹಿಳೆಯನ್ನು ಕೊಂದು (Murder ) ಆಕೆಯ ಬಳಿ ಇದ್ದ ಹಣ, ಒಡವೆಗಳನ್ನು ಕಳ್ಳತನ ಮಾಡಿದ ಭೂಪ ಆ ಹಣದಲ್ಲಿ ಊರಿಗೆ ಬಾಡೂಟ ಹಾಕಿಸಿದ್ದ ಎಂಬ ವಿಷಯ ಬಹಿರಂಗವಾಗಿದೆ. ಮತ್ತು ಅದೇ ಕಾರಣಕ್ಕೆ ಅವರು ಪೊಲೀಸರ ಅತಿಥಿಯೂ ಆಗಿದ್ದಾನೆ.
ಸಿದ್ದಾಪುರದ ಸೊರಬ ರಸ್ತೆಯ ಬಸವನಗಲ್ಲಿಯಲ್ಲಿ ಡಿಸೆಂಬರ್ 23 ರಂದು ಒಂಟಿ ಮಹಿಳೆಯ ಕೊಲೆ ನಡೆದಿತ್ತು. ಶಾಂತ ಪಟ್ಟಣದ ಜನರ ಮನದಲ್ಲಿ ತಲ್ಲಣ ಮೂಡಿತ್ತು. ಮನೆಯ ಹಂಚು ತೆಗೆದು ಒಳ ನುಗ್ಗಿದ ಕಳ್ಳ ವಿನಾಯಕ ಸೌಹಾರ್ದ ಕ್ರೆಡಿಟ್ ಸೊಸೈಟಿಯ ಪಿಗ್ಮಿ ಕಲೆಕ್ಟರ್ ಗೀತಾ ಹುಂಡೆಕರ್ ಎಂಬ ಮಹಿಳೆಯನ್ನು ಕತ್ತು ಹಿಸುಕಿ ಕೊಲೆ ಮಾಡಿ, ಆಕೆಯ ಬಳಿ ಇದ್ದ ಪಿಗ್ಮಿ ಸಂಗ್ರಹಿಸಿದ ಹಣ, ಬಂಗಾರ ದೋಚಿ ಪರಾರಿಯಾಗಿದ್ದರು. ಪ್ರಕರಣದ ಆರೋಪಿ, ಕೊಂಡ್ಲಿ ಗ್ರಾಮದ ಅಭಿಜಿತ್ ಗಣಪತಿ ಮಡಿವಾಳ ಎಂಬಾತನನ್ನು ಬಂಧಿಸಲಾಗಿದೆ ಎಂದು ಎಸ್‌ಪಿ ಎಂ.ನಾರಾಯಣ ಶುಕ್ರವಾರ ಸುದ್ದಿಗೋಷ್ಠಿ ನಡೆಸಿ, ಪ್ರಕರಣದ ವಿವರ ನೀಡಿದ್ದಾರೆ.
ಘಟನೆ ನಡೆದಾಗ ಯಾವುದೇ ಸುಳಿವು ಸಿಕ್ಕಿರಲಿಲ್ಲ. ಹೆಚ್ಚುವರಿ ಎಸ್‌ಪಿ ಜಗದೀಶ ನಾಯ್ಕ, ಶಿರಸಿ ಡಿವೈಎಸ್‌ಪಿ ಗಣೇಶ ಕೆ.ಎಲ್, ಸಿದ್ದಾಪುರ ಠಾಣೆಯ ಇನ್ಸ್‌ಪೆಕ್ಟರ್ ಜಿ.ಬಿ.ಸೀತಾರಾಂ, ಪಿಎಸ್‌ಐ ಅನಿಲ ಬಿ.ಎಂ., ಗೀತಾ ಸಿರ್ಸಿಕರ್, ಎಎಸ್‌ಐ ರಮೇಶ ಗೌಡ, ಸಂಗೀತಾ ಕಾನಡೆ, ಸಿಬ್ಬಂದಿ ಸುಭಾಷ ನಾಯ್ಕ, ಸಂತೋಷ ತಳವಾರ, ರಾಮ ಕುದ್ರಗಿ, ರಮೇಶ ಕೂಡಲ್, ರಾಜು ಎಂ.ರಾಘವೇಂದ್ರ ನಾಯ್ಕ, ದೇವರಾಜ ನಾಯ್ಕ, ರೋಹಿತ್, ಕುಮಾರ ಜೀವ, ಉದಯ ಗುನಗಾ ಮೋಹನ ಗಾವಡಿ, ಸಂತೋಷ ಮಲ್ಲೂರು, ಪ್ರಶಾಂತ ಸಿಡಿಆರ್ ಸೆಲ್‌ನ ಉದಯ ಗುನಗಾ Murder case ತನಿಖಾ ಕಾರ್ಯ ನಡೆಸಿದ್ದರು.
Murder Case ರೋಚಕ ಕಾರ್ಯಾಚರಣೆ
ಸಿದ್ದಾಪುರದಲ್ಲಿ ಕಳೆದ 10 ವರ್ಷಗಳಲ್ಲಿ ನಡೆದ ಎಲ್ಲ ಕಳ್ಳತನ ಪ್ರಕರಣಗಳನ್ನು ಮತ್ತು ಹೆಂಚು ತೆಗೆದು ಮನೆಯೋಳಗೆ ಇಳಿದು ಕಳ್ಳತನ ಮಾಡಿದವರ್ಯಾರು ಎಂದು ಕಳ್ಳತನ ಪ್ರಕರಣಗಳನ್ನು ಹುಡುಕಲಾಯಿತು. ಆಗ ಕೊಂಡ್ಲಿಯ ಅಭಿಜಿತ್‌ನ ಹೆಸರು ಕಂಡುಬಂದಿತ್ತು. ಆತ 2015 ರಿಂದ 2022 ರ ನಡುವೆ ಸಿದ್ದಾಪುರದಲ್ಲಿ ಒಟ್ಟು ನಾಲ್ಕು ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿದ್ದ. ಎರಡು ಪ್ರಕರಣಗಳಲ್ಲಿ ಆತನಿಗೆ ಶಿಕ್ಷೆಯೂ ಆಗಿತ್ತು. ಹೈಕೋರ್ಟ್‌ನಿಂದ ಶಿಕ್ಷೆಗೆ ತಡೆಯಾಜ್ಞೆ ತಂದು ಹೊರಗೆ ಓಡಾಡಿಕೊಂಡಿದ್ದ ಎಂಬ ವಿಷಯ ತಿಳಿಯಿತು.
ಆತನ ಬಗ್ಗೆ ಊರಿಗೆ ಹೋಗಿ ವಿಚಾರಿಸಿದಾಗ ಬೀಟ್ ಸಿಬ್ಬಂದಿ ರಮೇಶ ಕೂಡಲ್ ಅವರಿಗೆ ಮಹತ್ವದ ಮಾಹಿತಿ ಸಿಕ್ಕಿತ್ತು. ತನಿಗೆ ಯಾವುದೇ ಆದಾಯದ ಮೂಲ ಇರಲಿಲ್ಲ. ಆದರೆ, ಇತ್ತೀಚಗೆ ಗ್ರಾಮದಲ್ಲಿ ನಡೆದ ಕಾರ್ತಿಕ ಹಬ್ಬದಲ್ಲಿ ಊರಿನವರಿಗೆಲ್ಲ ಭರ್ಜರಿ ಬಾಡೂಟ ಹಾಕಿದ್ದ. ಆ ಸುದ್ದಿ ಗೋತ್ತಾಗಿ ಬೀಟ್ ಪೊಲೀಸ್ ಅವರನ್ನು ಕರೆತಂದು ವಿಚಾರಣೆ ನಡೆಸಿದಾಗ ಗೆಳೆಯನಿಂದ ಸಾಲ ಪಡೆದಿರುವುದಾಗಿ ದಿಕ್ಕು ತಪ್ಪಿಸಿದ. ನಂತರ ಸಾಲ ಕೊಟ್ಟಗೆಳೆಯನ್ನು ವಿಚಾರ ಮಾಡಿದಾಗ ಆತ ಸುಳ್ಳು ಹೇಳುತ್ತಿರುವುದು ಖಚಿತವಾಗಿತ್ತು.
ತಕ್ಷಣ ಆತನನ್ನು ಬಂಧಿಸಿ ಇನ್ನಷ್ಟು ವಿಚಾರಣೆ ನಡೆಸಲಾಗಿ ಕದ್ದ ಹಣದಲ್ಲಿ 19, 280 ರೂ. ಖರ್ಚು ಮಾಡಿ ಬಾಡೂಟ ಹಾಕಿಸಿದ್ದನ್ನು ಬಾಯಿ ಬಿಟ್ಟಿದ್ದ. ದೋಚಿದ ಬಂಗಾರದಲ್ಲಿ ಎರಡು ಕಿವಿಯೋಲೆಗಳನ್ನು ಮುತ್ತೂಟ್ ಪೈನಾನ್ಸ್‌ನಲ್ಲಿಟ್ಟು 28 ಸಾವಿರ ರೂ. ಸಾಲ ಪಡೆದಿದ್ದ ಎನ್ನಲಾಗಿದೆ. ಎರಡು ಬಳೆಗಳನ್ನು ಮನೆಯಲ್ಲಿಯೇ ಬಚ್ಚಿಟ್ಟಿದ್ದ ಎಂದು ಎಸ್‌ಪಿ ಎಂ. ನಾರಾಯಣ ವಿವರಿಸಿದರು.
ಮಹಿಳೆ ಪಿಗ್ಮಿ ಸಂಗ್ರಹ ಮಾಡಿ ಹಣವನ್ನು ಮನೆಗೆ ತರುತ್ತಾಳೆ ಎಂಬುದು ಅದೇ ಊರಿನವನಾದ ಆತನಿಗೆ ಗೊತ್ತಿತ್ತು. ಈದರಿಂದ ಆಕೆ ಮನೆಗೆ ಮರಳುವುದಕ್ಕೂ ಮುಂಚೆ ಮನೆಯ ಹಿಂದಿನಿಂದ ತೆರಳಿ ಹಂಚು ತೆಗೆದು ಒಳಗೆ ನುಸುಳಿಕೊಂಡಿದ್ದ ನಂತರ ಆಕೆ ಬಂದಾಗ ಕತ್ತು ಹಿಚುಕಿ ಕೊಲೆ ಮಾಡಿ, ಹಣ, ಒಡವೆ ದೋಚಿ ಹಿಂದಿನ ಬಾಗಿಲಿನಿಂದ ಪರಾರಿಯಾಗಿದ್ದ. ಬೆಳಗ್ಗೆ ಎದ್ದು ಮತ್ತೆ ಎಲ್ಲರ ಜತೆ ಬಂದು ನಿಂತು ಕೊಲೆಯನ್ನು ನೋಡಿದ್ದ. ಅಲ್ಲದೇ, ಶ್ವಾನದಳ ಕೊಂಡ್ಲಿಯವರೆಗೆ ಹೋಗಿದ್ದನ್ನು ನೋಡಿ ಆತ ಬೇರೆಡೆ ಪರಾರಿಯಾಗಿದ್ದ ಎಂದು ಎಸ್‌ಪಿ ವಿವರಿಸಿದರು.
ಬಂಧಿತ ಬ್ಯಾಂಕ್‌ನಲ್ಲಿ ಇಟ್ಟಿದ್ದ ಒಡವೆ ಹಾಗೂ ಇತರ ಸ್ವತ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ಸವಾಲಿನ ಕೊಲೆ (Murder) ಪ್ರಕರಣವನ್ನು ಭೇದಿಸಿದ ಪೊಲೀಸ್ ತಂಡಕ್ಕೆ 25 ಸಾವಿರ ಬಹುಮಾನ ಘೋಷಿಸಲಾಗಿದೆ ಎಂದು ಎಸ್‌ಪಿ ಎಂ ನಾರಾಯಣ ತಿಳಿಸಿದ್ದಾರೆ.
ಇದನ್ನೂ ಓದಿ: https://www.vijayavani.net/bike-fire-at-amadallihttps://www.vijayavani.net/bike-fire-at-amadalli