More

    ಟ್ಯಾಂಕರ್ ಮೊರೆಹೋದ ಅಧಿಕಾರಿಗಳು

    ರಮೇಶ ಹಾರ್ಸಿಮನೆ ಸಿದ್ದಾಪುರ
    ತಾಲೂಕಿನ 26 ಶಾಲೆಗಳಲ್ಲಿ ಶಾಲಾ ಆರಂಭದ ಮೊದಲ ದಿನವೇ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಿದೆ. ಬಿಸಿಯೂಟ ತಯಾರಿಕೆಗೂ ತೊಂದರೆ ಉಂಟಾಗಿದೆ.
    ತಾಲೂಕಿನ ಪ್ರಾಥಮಿಕ, ಪ್ರೌಢ ಹಾಗೂ ವಸತಿ ಶಾಲೆ ಸೇರಿ ಒಟ್ಟು 251 ಶಾಲೆಗಳಿದ್ದು, ಅದರಲ್ಲಿ 26 ಶಾಲೆಯಲ್ಲಿ ಕುಡಿಯುವ ನೀರಿಗೆ ಹಾಗೂ ಬಿಸಿಯೂಟ ತಯಾರಿಕೆಗೆ ತೊಂದರೆಯಾಗಿದೆ. ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮಂಡ್ಲಿಕೊಪ್ಪ ಹಾಗೂ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಹಳ್ಳಿಬೈಲ್ ಎರಡೂ ಶಾಲೆಯಲ್ಲಿನ ಬಾವಿಯಲ್ಲಿ ನೀರು ಬತ್ತಿದ್ದರಿಂದ ಶಾಲಾ ಆರಂಭದ ದಿನವೇ ಸಂಕಟ ಎದುರಿಸುವಂತಾಗಿದೆ.

    ಇಂಥ ಸ್ಥಿತಿ ಇದೇ ಮೊದಲು

    ಪ್ರತಿ ವರ್ಷ ಶಾಲೆ ಆರಂಭವಾಗುವ ಪೂರ್ವದಲ್ಲಿ ಮುಂಗಾರು ಮಳೆ ಆರಂಭವಾಗುವ ಮೊದಲೇ ನಾಲ್ಕೈದು ಸಲ ಮಳೆ ಬರುತ್ತಿತ್ತು. ಹೀಗಾಗಿ, ನೀರಿನ ಕೊರತೆ ಎದುರಾಗುತ್ತಿರಲಿಲ್ಲ. ಆದರೆ, ಈ ವರ್ಷ ಇದುವರೆಗೆ ತಾಲೂಕಿನ ಕೆಲವು ಭಾಗದಲ್ಲಿ ಒಂದೆರಡು ಸಣ್ಣ ಮಳೆ ಮಾತ್ರ ಬಿದ್ದಿದ್ದರಿಂದ ಇದೇ ಮೊದಲ ಬಾರಿಗೆ ಈ ಪರಿಯ ನೀರಿನ ಕೊರತೆ ಉಂಟಾಗಿದೆ.

    ಬಾಳೆ ಎಲೆ, ಹಾಳೆ ಪ್ಲೇಟ್ ಸೂಕ್ತ
    ಶಾಲೆಯಲ್ಲಿ ಕುಡಿಯುವ ನೀರಿಗೆ ಹಾಗೂ ಬಿಸಿಯೂಟ ತಯಾರಿಕೆಗೆ ನೀರಿನ ಕೊರತೆ ಎದುರಾಗಿದ್ದರಿಂದ ಈ ಸಮಸ್ಯೆಯನ್ನು ತಕ್ಕಮಟ್ಟಿಗೆ ಪರಿಹರಿಸಲು ಶಾಲಾ ಆಡಳಿತ ಮಂಡಳಿ, ಪಾಲಕರು, ಪೋಷಕರು, ದಾನಿಗಳು ಮಕ್ಕಳ ಬಿಸಿ ಊಟಕ್ಕೆ ತಟ್ಟೆ ಬದಲು ಬಾಳೆ ಎಲೆ ಅಥವಾ ಹಾಳೆ ಪ್ಲೇಟ್ ನೀಡಿದರೆ ಅನುಕೂಲವಾಗುತ್ತದೆ ಎನ್ನುವುದು ಶಿಕ್ಷಣ ಪ್ರೇಮಿಗಳು ಸಲಹೆ ನೀಡಿದ್ದಾರೆ.

    ನೀರಿನ ಕೊರತೆ ಇರುವ ಶಾಲೆಯವರು ಸಂಬಂಧಪಟ್ಟ ಗ್ರಾಪಂಗೆ ಮಾಹಿತಿ ನೀಡುವಂತೆ ಎಲ್ಲ ಶಾಲಾ ಮುಖ್ಯಾಧ್ಯಾಪಕರಿಗೆ ಸೂಚನೆ ನೀಡಲಾಗಿದೆ. ಟ್ಯಾಂಕರ್ ಮೂಲಕ ನೀರು ಪೂರೈಸುವಂತೆ ಗ್ರಾಮ ಪಂಚಾಯಿತಿಗಳಿಗೆ ಕೇಳಿಕೊಳ್ಳಲಾಗುತ್ತಿದೆ.
    ಸದಾನಂದ ಸ್ವಾಮಿ, ಬಿಇಒ ಸಿದ್ದಾಪುರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts