ಸಿದ್ದಾಪುರ ಗ್ರಾಪಂ ಸಭೆಗಳಿಗೆ ದಿನಾಂಕ ನಿಗದಿ

blank

ಸಿದ್ದಾಪುರ: ಸಿದ್ದಾಪುರ ಗ್ರಾಮ ಪಂಚಾಯಿತಿ ವಾರ್ಡ್ ಸಭೆಗಳಿಗೆ ದಿನಾಂಕ ನಿಗದಿ ಪಡಿಸಿರುವುದಾಗಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶಫೀಕ್ ತಿಳಿಸಿದ್ದಾರೆ.

ಒಟ್ಟು 7 ವಾರ್ಡ್‌ಗಳನ್ನು ಹೊಂದಿರುವ ಸಿದ್ದಾಪುರ ಗ್ರಾಮ ಪಂಚಾಯಿತಿಯ 2024-25ನೇ ಸಾಲಿನ ವಾರ್ಡ್ ಸಭೆಯ ದಿನಾಂಕ ವೇಳಾ ಪಟ್ಟಿ ಸಿದ್ಧಗೊಂಡಿದ್ದು, ಕರಡಿಗೋಡು 1ನೇ ವಾರ್ಡ್ ಸಭೆಯು ನ.11ರಂದು ಬೆಳಗ್ಗೆ 10.30ಕ್ಕೆ ಅವರೆಗುಂದ ಸಮುದಾಯ ಭವನದಲ್ಲಿ ನಡೆಯಲಿದೆ.ಅದೇ ದಿನ ಗುಹ್ಯ 1 ಮತ್ತು 2ನೇ ವಾರ್ಡ್ ಸಭೆಯು ಬಿ.ಜಿ.ಎಸ್.ಶಾಲಾ ಆವರಣದಲ್ಲಿ ಸಂಜೆ 4 ಮತ್ತು 5 ಗಂಟೆಗೆ ನಡೆಯಲಿದೆ.
ಸಿದ್ದಾಪುರ 1ನೇ ವಾರ್ಡ್ ಹಾಗೂ ಕರಡಿಗೋಡು 2, ಮತ್ತು 3ನೇ ವಾರ್ಡ್ ನ ಸಭೆಯು ನ.13ರಂದು ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ನಡೆಯಲಿದೆ. ಅದೇ ದಿನ ಸಂಜೆ 4 ಗಂಟೆಗೆ ಕರಡಿಗೋಡು ಶಾಲೆ ಆವರಣದಲ್ಲಿ 4ನೇ ವಾರ್ಡ್‌ನ ಸಭೆ ನಡೆಯಲಿದೆ.

ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವ ಮೂಲಕ ತಮ್ಮ ವಾರ್ಡ್‌ಗಳ ಅಭಿವೃದ್ಧಿ ಕಾರ್ಯಗಳ ಬಗ್ಗೆ ಮಾಹಿತಿ ನೀಡಿ ಸಭೆಯನ್ನು ಯಶಸ್ವಿಗೊಳಿಸುವಂತೆ ಗ್ರಾಮ ಪಂಚಾಯಿತಿ ಆಡಳಿತ ಮಂಡಳಿ ತಿಳಿಸಿದೆ.

 

 

 

Share This Article

ಈ ಕಾಯಿಲೆಯಿಂದ ಬಳಲುತ್ತಿರುವವರು ಸಿಹಿ ಗೆಣಸಿನಿಂದ ದೂರವಿರಿ; ಇಲ್ಲಿದೆ ಹೆಲ್ತಿ ಮಾಹಿತಿ | Health Tips

ಸಿಹಿ ಗೆಣಸು ಯಾರಿಗೆ ಇಷ್ಟವಿರುವುದಿಲ್ಲ ಹೇಳಿ. ರುಚಿಕರವಾದ ಸಿಹಿಗೆಣಸನ್ನು ಶೀತ ಋತುವಿನಲ್ಲಿ ಕಂಡುಬರುವ ಬೇರು ತರಕಾರಿ…

ಗಿಡಗಳನ್ನು ಹಸಿರಾಗಿಡಲು ಕಡಲೆಕಾಯಿ ಸಿಪ್ಪೆ ಪ್ರಯೋಜನಕಾರಿ; ಇಲ್ಲಿದೆ ಬಳಸುವ ವಿಧಾನ | Tips

ಚಳಿಗಾಲದಲ್ಲಿ ಸಸ್ಯಗಳಿಗೆ ಹೆಚ್ಚಿನ ಕಾಳಜಿ ಬೇಕು. ಏಕೆಂದರೆ ತಂಪಾದ ಗಾಳಿ ಮತ್ತು ಇಬ್ಬನಿಯಿಂದ ತೇವಾಂಶವು ಹೆಚ್ಚಾಗುವುದರಿಂದ…

Kurukshetra | ಕುರುಕ್ಷೇತ್ರ ಯುದ್ಧದ ಕೊನೆಯಲ್ಲಿ ರಣಭೂಮಿಗೆ ದ್ರೌಪದಿಯನ್ನು ಶ್ರೀಕೃಷ್ಣ ಕರೆತಂದಿದ್ದೇಕೆ; ಪರಮಾತ್ಮ ಹೇಳಿದ್ದೇನು?

ಕುರುಕ್ಷೇತ್ರ(Kurukshetra) ಯುದ್ಧದಲ್ಲಿ ಎಲ್ಲಾರೂ ಮರಣ ಹೊಂದಲು ಕಾರಣ ಪಾಂಡವರಲ್ಲ ದ್ರೌಪದಿಯ ಕಣ್ಣೀರು. ಕುರುಕ್ಷೇತ್ರ ಯುದ್ಧ ಮುಗಿದ…