Monday, 19th November 2018  

Vijayavani

ರಾಜಧಾನಿಯಲ್ಲಿ ಹಸಿರು ಕ್ರಾಂತಿ-ಸಿಎಂ ಎಚ್​ಡಿಕೆ, ಡಿಸಿಎಂ ಪರಮೇಶ್ವರ್​ಗೆ ಡೆಡ್​​ಲೈನ್-ಕೂಡಲೇ ಸ್ಥಳಕ್ಕೆ ಬರುವಂತೆ ರೈತರ ಪಟ್ಟು        ಸೈಟ್ ಕೇಳ್ತಿಲ್ಲ, BMW ಕಾರೂ ಕೇಳ್ತಿಲ್ಲ-ನಾವು ಕೇಳ್ತಿರೋದು ಬೆಳೆದ ಬೆಲೆಗೆ ಬೆಲೆಯಷ್ಟೇ-ಸಚಿವ ಕಾಶಂಪೂರ್​​ಗೆ ಮನವಿ ಸಲ್ಲಿಕೆ        ರೈತರು, ಹೆಣ್ಮಕ್ಕಳ ವಿಚಾರದಲ್ಲಿ ಗೌರವ ಇದೆ-ನನ್ನ ಹೇಳಿಕೆಯಲ್ಲಿ ಯಾವುದೇ ದುರುದ್ದೇಶ ಇಲ್ಲ-ಸಿಎಂ ಹೇಳಿಕೆ ಬಿಡುಗಡೆ        ಸಿಎಂ ಕೂಡಲೇ ಕ್ಷಮೆ ಕೇಳಬೇಕು-ನಾಳಿನ ಕೋರ್​​​ ಕಮಿಟಿ ಸಭೆಯಲ್ಲಿ ಹೋರಾಟದ ನಿರ್ಧಾರ-ಸರ್ಕಾರದ ವಿರುದ್ಧ ಗುಡುಗಿದ ಬಿಜೆಪಿ        ₹3,300 ಕೋಟಿ, 132 ಕಿ.ಮೀ. ದೂರ-ಗುರಗಾಂವ್​​ನಲ್ಲಿ ಎಕ್ಸ್​​ಪ್ರೆಸ್​​ ಹೈವೇ ಲೋಕಾರ್ಪಣೆಗೊಳಿಸಿದ ಪ್ರಧಾನಿ        ರೈಲು ಬರುವ ವೇಳೆ ಹಳಿ ಮಧ್ಯೆ ಮಲಗಿದ ಭೂಪ-ಪ್ರಾಣದ ಹಂಗು ತೊರೆದು ಹುಚ್ಚು ಸಾಹಸ-ಹೈದ್ರಾಬಾದ್​ನಲ್ಲೊಂದು ಮಿರ‍್ಯಾಕಲ್       
Breaking News

ಶ್ರೀಗಳ ಆರೋಪದಲ್ಲಿ ಹುರುಳಿಲ್ಲ

Wednesday, 11.07.2018, 5:58 AM       No Comments

ಬಾದಾಮಿ: ಕೆಲ ಜಂಗಮರ ಕೈಯಲ್ಲಿ ಶಿವಯೋಗಮಂದಿರ ಎಂದು ಆರೋಪಿಸಿರುವ ಸಿದ್ಧಗಿರಿ ಕನೇರಿಮಠದ ಶ್ರೀ ಕಾಡಸಿದ್ಧೇಶ್ವರ ಸ್ವಾಮೀಜಿ ಹೇಳಿಕೆ ಸಂಕುಚಿತ ಮನೋಭಾವನೆಯನ್ನು ಎತ್ತಿ ತೋರಿಸುತ್ತದೆ ಎಂದು ಮದ್ವೀರಶೈವ ಶಿವಯೋಗಮಂದಿರ ಸಂಸ್ಥೆ ಅಧ್ಯಕ್ಷ ಡಾ. ಸಂಗನಬಸವ ಶ್ರೀಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಶ್ರೀಗಳು ಶಿವಯೋಗಮಂದಿರದ ಇತಿಹಾಸವನ್ನು ಸರಿಯಾಗಿ ತಿಳಿದುಕೊಳ್ಳದೆ ಹೀಗೆ ಮಾತನಾಡುತ್ತಿರುವುದು ದುರ್ದೈವದ ಸಂಗತಿ. ಹಿಂದಿನ ಕಾಲದ ಪಂಡಿತರು ರಚಿಸಿದ ಶಿವಯೋಗಮಂದಿರ ಬೈಲಾ ಪ್ರಕಾರ ಟ್ರಸ್ಟ್ ಕಮಿಟಿಯಲ್ಲಿ 14 ಜನ ಸ್ವಾಮಿಗಳು, 7 ಜನ ಭಕ್ತರು ಇರಬೇಕೆಂಬ ನಿಯಮವಿದೆ. ಇಂದಿಗೂ ನಿಯಮವನ್ನು ಪಾಲನೆ ಮಾಡಲಾಗುತ್ತಿದೆ. ಭಕ್ತ ವರ್ಗದ ಸ್ವಾಮಿಗಳಾದ ಇಳಕಲ್ಲ ಶ್ರೀಮಠದ ಗುರುಮಹಾಂತ ಶ್ರೀಗಳು ಹಾಗೂ ಬಬಲೇಶ್ವರ ಮಠದ ಡಾ. ಮಹಾದೇವ ಶಿವಾಚಾರ್ಯ ಸ್ವಾಮಿಗಳು ಟ್ರಸ್ಟ್​ನಲ್ಲಿದ್ದಾರೆ. ಹೀಗಿರುವಾಗ ಕೆಲವು ಜಂಗಮರ ಕೈಯಲ್ಲಿ ಶಿವಯೋಗಮಂದಿರ ಎನ್ನುವ ಆರೋಪ ನಿರಾಧಾರವಾದುದು ಎಂದು ತಿಳಿಸಿದ್ದಾರೆ.

ಬೈಲಾ ರಚಿಸುವ ಕಾಲದಲ್ಲಿ ಆಗಿನ ಸಮಾಜದ ಪರಂಪರೆಯ ಪ್ರಕಾರ ಜಂಗಮ ವರ್ಗದವರನ್ನು ಸ್ವಾಮಿಗಳನ್ನಾಗಿ ಮಾಡಬೇಕೆಂದು ಅಭಿಪ್ರಾಯ ಇದ್ದಿದ್ದರಿಂದ ಸಂಸ್ಥೆಯಲ್ಲಿ ಜಂಗಮರ ಪ್ರವೇಶಕ್ಕೆ ಪ್ರಾಧಾನ್ಯತೆ ಕೊಡಲಾಗಿದೆ. ಸಂಸ್ಥೆ ಸ್ಥಾಪನೆ ವೇಳೆ ಪ್ರವೇಶ ಹೊಂದಿದ 7 ವಟುಗಳಲ್ಲಿ ನವಲಗುಂದದ ಸ್ವಾಮಿಗಳು ಭಕ್ತ ವರ್ಗದವರಾಗಿದ್ದರು. ಆಗಿನ ಕಾಲಕ್ಕೆ ಜಂಗಮೇತರರು ಸ್ವಾಮಿಗಳಾಗಲು ಅಪೇಕ್ಷೆ ಪಡುತ್ತಿರಲಿಲ್ಲ. ಪಾಲಕರೂ ತಮ್ಮ ಮಕ್ಕಳನ್ನು ಶಿವಯೋಗಮಂದಿರ ಸಂಸ್ಥೆಯಲ್ಲಿ ಮಠಾಧಿಪತಿಗಳನ್ನಾಗಿಸಲು ಕಳುಹಿಸುತ್ತಿರಲಿಲ್ಲ. ಹೀಗಾಗಿ ಜಂಗಮೇತರರಿಗೆ ಸಂಸ್ಥೆಯಲ್ಲಿ ಅವಕಾಶವಿಲ್ಲವೆಂದು ಹೇಳುವುದು ಸರಿಯಲ್ಲ ಎಂದು ಪ್ರತ್ಯುತ್ತರ ನೀಡಿದ್ದಾರೆ.

ವಟು-ಸಾಧಕರಿಗೆ ತರಬೇತಿ ನೀಡಿ ಸಮರ್ಥ ಸ್ವಾಮಿಗಳನ್ನು ಸೃಷ್ಟಿಸುವುದು ಸಂಸ್ಥೆಯ ಪ್ರಮುಖ ಉದ್ದೇಶ. ಸದ್ಭಕ್ತರು ತಮ್ಮ ಮಠಕ್ಕೆ ಸ್ವಾಮಿಗಳು ಬೇಕೆಂದು ಮನವಿ ಸಲ್ಲಿಸಿದಾಗ ಭಕ್ತರ ಜತೆ ರ್ಚಚಿಸಿ ಅವರ ಮಠಕ್ಕೆ ಸ್ವಾಮಿಗಳನ್ನು ಕಳುಹಿಸಿಕೊಡಲಾಗುತ್ತಿದೆ. ಮಠದ ಬಗ್ಗೆ ಸರಿಯಾಗಿ ತಿಳಿದುಕೊಳ್ಳದೆ ಮಾಧ್ಯಮಕ್ಕೆ ಹೇಳಿಕೆ ನೀಡುವುದು ಕನೇರಿಮಠದ ಶ್ರೀಗಳಿಗೆ ಶೋಭೆ ತರುವುದಿಲ್ಲ ಎಂದು ಶ್ರೀಗಳು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

Back To Top