ಸಿದ್ಧಗಂಗಾ ಶ್ರೀಗಳ ಆರೋಗ್ಯದಲ್ಲಿ ಕೊಂಚ ಚೇತರಿಕೆ

ತುಮಕೂರು: ಸಿದ್ಧಗಂಗಾ ಶ್ರೀಗಳ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದೆ ಎಂದು ಶ್ರೀಗಳ ಆಪ್ತವೈದ್ಯ ಡಾ. ಪರಮೇಶ್​ ತಿಳಿಸಿದ್ದಾರೆ.

ಇಂದು ಬೆಳಗ್ಗೆ ಶ್ರೀಗಳ ಹೆಲ್ತ್ ​ಬುಲೆಟಿನ್​ ಬಿಡುಗಡೆ ಮಾಡಿದ ಅವರು, ಸ್ವಾಮೀಜಿ ಆರೋಗ್ಯದಲ್ಲಿ ಕೊಂಚಮಟ್ಟಿಗೆ ಚೇತರಿಕೆ ಕಂಡುಬಂದಿದೆ. ಸೋಂಕಿನ ಅಂಶ ಕಡಿಮೆಯಾಗಿದೆ, ಪ್ರೊಟೀನ್​ ಕೊರತೆಯುಂಟಾಗಿದೆ. ಶ್ರೀಗಳು ಸ್ವಶಕ್ತಿಯಿಂದ ಉಸಿರಾಡುತ್ತಿಲ್ಲ. ಎರಡು ಗಂಟೆ ಉಸಿರಾಡುವಷ್ಟರಲ್ಲಿ ಸುಸ್ತಾಗುತ್ತಿದ್ದಾರೆ. ಆಕ್ಸಿಜನ್​ ಕೊಟ್ಟ ಬಳಿಕ ಸಹಜ ಸ್ಥಿತಿಗೆ ಮರಳುತ್ತಾರೆ ಎಂದು ಹೇಳಿದ್ದಾರೆ.

ಸಿದ್ಧಗಂಗಾ ಶ್ರೀಗಳಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಾದರೆ ಅವರು ಶೀಘ್ರವೇ ಗುಣಮುಖರಾಗುತ್ತಾರೆ. ಅಲ್ಬುಮಿನ್​, ರಕ್ತಕಣಗಳು ಅವರ ದೇಹದಲ್ಲಿ ಉತ್ಪತ್ತಿಯಾಗಬೇಕು. ನಾವೇ ಅವರ ದೇಹಕ್ಕೆ ಅದನ್ನು ಪೂರೈಸಿದರೆ ಬೇರೆ ರೀತಿ ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ ಎಂದು ಮಾಹಿತಿ ನೀಡಿದ್ದಾರೆ.