ಉಸಿರಾಟಕ್ಕೆ ಕಷ್ಟಪಡುತ್ತಿರುವ ಸಿದ್ಧಗಂಗಾ ಶ್ರೀಗಳು

ತುಮಕೂರು: ಸಿದ್ಧಗಂಗಾ ಸ್ವಾಮೀಜಿಗಳಿಗೆ ಮಠದಲ್ಲಿಯೇ ಚಿಕಿತ್ಸೆ ಮುಂದುವರಿದಿದೆ. ಉಸಿರಾಟಕ್ಕೆ ಶ್ರೀಗಳು ಕಷ್ಟಪಡುತ್ತಿದ್ದು ಕೃತಕ ಉಸಿರಾಟ ವ್ಯವಸ್ಥೆ ಮಾಡಲಾಗಿದೆ.

ಬಿಜಿಎಸ್​ ಹಾಗೂ ರೇಲಾ ಆಸ್ಪತ್ರೆಗಳ ವೈದ್ಯರು ಶ್ರೀಗಳಿಗೆ ಚಿಕಿತ್ಸೆ ನೀಡುತ್ತಿದ್ದು ತೀವ್ರ ನಿಗಾ ವಹಿಸಿದ್ದಾರೆ. ಇಂದು ಬೆಳಗ್ಗೆ 10 ಗಂಟೆಗೆ ಸ್ವಾಮೀಜಿಗಳ ಹೆಲ್ತ್​ ಬುಲೆಟಿನ್ ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.

ವಿವಿಧ ಗಣ್ಯರು ಮಠಕ್ಕೆ ಆಗಮಿಸುತ್ತಿದ್ದಾರೆ. ಡಿಸಿಎಂ ಪರಮೇಶ್ವರ್​, ಬಿ.ಎಸ್​.ಯಡಿಯೂರಪ್ಪ ಸೇರಿ ಹಲವರು ಇಂದು ಕೂಡ ಭೇಟಿ ನೀಡಲಿದ್ದು ಮಠದ ಸುತ್ರ ಬಿಗಿ ಭದ್ರತೆ ಒದಗಿಸಲಾಗಿದೆ.