ಸಿದ್ಧಗಂಗಾ ಶ್ರೀಗಳ ಹೆಲ್ತ್​ಬುಲೆಟಿನ್​ ಬಿಡುಗಡೆ: ಆರೋಗ್ಯ ಸ್ಥಿರವೆಂದ ಆಪ್ತ ವೈದ್ಯ

ತುಮಕೂರು: ಸಿದ್ಧಗಂಗಾ ಸ್ವಾಮೀಜಿಗಳ ಆರೋಗ್ಯ ಸ್ಥಿರವಾಗಿದೆ ಎಂದು ಶ್ರೀಗಳ ಆಪ್ತ ವೈದ್ಯ ಡಾ. ಪರಮೇಶ್ವರ್​ ತಿಳಿಸಿದ್ದಾರೆ.

ಹೆಲ್ತ್​ಬುಲೆಟಿನ್​ ಬಿಡುಗಡೆ ಮಾಡಿದ ಅವರು, ರಕ್ತಪರೀಕ್ಷೆ ವರದಿ ಬಂದಿದೆ. ಸೋಂಕಿನ ಅಂಶ ಕಡಿಮೆಯಾಗಿದೆ. ಅಲ್ಬಮಿನ್​ ಪ್ರಮಾಣ 3.6ರಷ್ಟು ಇದೆ ಎಂದು ಮಾಹಿತಿ ನೀಡಿದ್ದಾರೆ.

ಶ್ರೀಗಳ ದೇಹದಲ್ಲಿ ಪ್ರೊಟೀನ್​ ಉತ್ಪತ್ತಿಯಾಗಬೇಕು. ಹಾಗಾದರೆ ಶೀಘ್ರವೇ ಗುಣಮುಖರಾಗುತ್ತಾರೆ. ಆದರೆ ಪ್ರೊಟೀನ್​ ಉತ್ಪತ್ತಿಯಾಗುತ್ತಿಲ್ಲ. ಚಿಕಿತ್ಸೆಯನ್ನು ಯಥಾ ಪ್ರಕಾರ ಮುಂದುವರಿಸುತ್ತಿದ್ದೇವೆ ಎಂದಿದ್ದಾರೆ.