More

    ಸಿದ್ಧಗಂಗಾ ಶ್ರೀಗಳ ಹೆಸರಿನಲ್ಲಿ ವೃತ್ತ ನಿರ್ಮಾಣಕ್ಕೆ ಆದ್ಯತೆ ನೀಡುವೆ ಎಂದ ಶಾಸಕ ಪರಣ್ಣ ಮುನವಳ್ಳಿ

    ಗಂಗಾವತಿ: ರೈತ ಪರ ಕಾಳಜಿಯ ಸಿದ್ಧಗಂಗಾಶ್ರೀಗಳ ಶಿಕ್ಷಣದ ನಿಸ್ವಾರ್ಥ ಸೇವೆಯಿಂದ ಜಗತ್ತೇ ನಾಡನ್ನು ನೋಡುವಂತಾಗಿದೆ ಎಂದು ಶಾಸಕ ಪರಣ್ಣ ಮುನವಳ್ಳಿ ಹೇಳಿದರು.

    ನಗರದ ಪಬ್ಲಿಕ್ ಕ್ಲಬ್ ಆವರಣದಲ್ಲಿ ಸಿದ್ಧಗಂಗಾ ಮಠದ ಹಳೇ ವಿದ್ಯಾರ್ಥಿಗಳ ಒಕ್ಕೂಟ ಮಂಗಳವಾರ ಆಯೋಜಿಸಿದ್ದ ಶ್ರೀ ಸಿದ್ಧಗಂಗಾಶ್ರೀಗಳ ಪ್ರಥಮ ಪುಣ್ಯಸ್ಮರಣೆ, ನುಡಿನಮನ ಮತ್ತು ಜಮುರಾ ತಂಡ ನಾಟಕ ಪ್ರದರ್ಶನ ಉದ್ಘಾಟಿಸಿ ಮಾತನಾಡಿದರು. ಜಾತಿ, ಪಂಥವಿಲ್ಲದೆ ಶ್ರೀಮಠದಲ್ಲಿ 15ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಿದ್ದು, ಅಭ್ಯಸಿಸಿದ ಬಹುತೇಕರು ಉನ್ನತ ಹುದ್ದೆಯಲ್ಲಿದ್ದಾರೆ. ನಿತ್ಯ ಲಿಂಗ ಪೂಜೆ ನಿರತರಾಗಿದ್ದ ಶ್ರೀಗಳ ದೂರದೃಷ್ಟಿಯಿಂದ ಶಿಕ್ಷಣ ಕ್ಷೇತ್ರ ಶ್ರೀಮಂತವಾಗಿದೆ. ಹಳೇ ವಿದ್ಯಾರ್ಥಿಗಳ ಮನವಿಯಂತೆ ನಗರದಲ್ಲಿ ಶ್ರೀಗಳ ಹೆಸರಿನಲ್ಲಿ ವೃತ್ತ ನಿರ್ಮಾಣಕ್ಕೆ ಆದ್ಯತೆ ನೀಡಲಾಗುವುದು ಎಂದರು.

    ಶ್ರೀಗಳ ಬದುಕು, ಶಿಕ್ಷಣ ಸೇವೆ, ರೈತ ಪರ ಕಾಳಜಿ ಮತ್ತು ಸಮಾಜಮುಖಿ ಚಟುವಟಿಕೆಗಳ ಕುರಿತು ಸಿದ್ಧಗಂಗಾಮಠದ ಉಪನ್ಯಾಸಕ ಡಾ.ಸಿ.ಎಸ್.ನಿರಂಜನ ಉಪನ್ಯಾಸ ನೀಡಿದರು. ನಂತರ ಜಮುರಾ ತಂಡ ಪ್ರದರ್ಶಿಸಿದ ಮಹಾಬೆಳಗು ನಾಟಕ ಗಮನಸೆಳೆಯತು. ಹೆಬ್ಬಾಳ ಬೃಹನ್ಮಠದ ನಾಗಭೂಷಣ ಶಿವಾಚಾರ್ಯರು ಸಾನ್ನಿಧ್ಯ ವಹಿಸಿದ್ದರು. ಕೊಟ್ಟೂರೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಪ್ರಭಾಕರ ಹೊಸ್ಕೇರಾ, ಪಬ್ಲಿಕ್ ಕ್ಲಬ್ ಅಧ್ಯಕ್ಷ ಮಹಾಬಳೇಶ ಹಾಸಿನಾಳ್, ಹಳೇ ವಿದ್ಯಾರ್ಥಿಗಳ ಒಕ್ಕೂಟದ ಸಿಂಗನಾಳ ಸುರೇಶ, ಎ.ಕೆ.ಮಹೇಶ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts