ಸಿದ್ಧಗಂಗಾ ಶ್ರೀಗಳು ನೊಬೆಲ್ ಪ್ರಶಸ್ತಿಗೆ ಅರ್ಹರು ಎಂದ ಕುಂವೀ

ಬಳ್ಳಾರಿ: ಸಿದ್ಧಗಂಗಾ ಡಾ.ಶ್ರೀ ಶಿವಕುಮಾರ್ ಸ್ವಾಮೀಜಿಯವರು ನೊಬೆಲ್ ಪ್ರಶಸ್ತಿಗೆ ಅರ್ಹರು ಎಂದು ಸಾಹಿತಿ ಕುಂ.ವೀರಭದ್ರಪ್ಪ ಹೇಳಿದರು.

ಕೊಟ್ಟೂರಿನಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದರು. ಶ್ರೀಗಳು ಭಾರತರತ್ನ ಪ್ರಶಸ್ತಿ ಮೀರಿ ಸಾಧನೆ ಮಾಡಿದ್ದಾರೆ. ಶ್ರೀಗಳಿಗೆ ಭಾರತ ರತ್ನ ನೀಡುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸುವುದರಲ್ಲಿ ಯಾವುದೇ ಅರ್ಥವಿಲ್ಲ. ಶ್ರೀಮಠದಲ್ಲಿ ಅಕ್ಷರ ಜ್ಞಾನ ಹೊಂದಿದ ಶಿಷ್ಯವೃಂದ ಶ್ರೀಗಳನ್ನು ಸದಾ ಸ್ಮರಿಸುವ ಮೂಲಕ ಶ್ರೀಗಳನ್ನು ಜೀವಂತವಾಗಿಟ್ಟಿದ್ದಾರೆ ಎಂದು ಬಣ್ಣಿಸಿದರು.