ಸಿದ್ಧಗಂಗಾ ಶ್ರೀ ಗಂಭೀರ: ಈ ವರೆಗಿನ ಬೆಳವಣಿಗೆಗಳ ಸಂಪೂರ್ಣ ಮಾಹಿತಿ

ತುಮಕೂರು: ಸಿದ್ಧಗಂಗಾ ಶ್ರೀಗಳ ಆರೋಗ್ಯ ಗಂಭೀರವಾಗಿದೆ ಎಂಬ ವಿಚಾರ ರಾಜ್ಯದಲ್ಲಿ ಎಲ್ಲ ವರ್ಗದ, ಎಲ್ಲ ಕ್ಷೇತ್ರ ಜನರ ಮನಸುಗಳನ್ನು ಕಲಕಿದೆ. ಎಲ್ಲರನ್ನೂ ಆತಂಕಕ್ಕೆ ದೂಡಿದೆ.

ಶ್ರೀಗಳ ಆರೋಗ್ಯ, ಮಠದ ಸುತ್ತ ಮತ್ತು ರಾಜ್ಯದಲ್ಲಿ ಈ ವರೆಗೆ ಹಲವು ಬೆಳವಣಿಗೆಗಳಾಗಿವೆ. ಅದರ ಸಂಪೂರ್ಣ ಮಾಹಿತಿ ಇಲ್ಲಿದೆ.

ಸದ್ಯ ಶ್ರೀಗಳ ಆರೋಗ್ಯದಲ್ಲಿ ಈವರೆಗೆ ಯಾವುದೇ ಚೇತರಿಕೆ ಕಂಡಿಲ್ಲ ಎಂದು ಅವರ ಆರೈಕೆ ಮಾಡುತ್ತಿರುವ ಡಾ. ಪರಮೇಶ್​ ತಿಳಿಸಿದ್ದಾರೆ. ಅಲ್ಲದೆ, ಹೆಚ್ಚಿನ ನೆರವಿಗಾಗಿ ಬೆಂಗಳೂರಿನ ಬಿಜೆಪಿಎಸ್​ನ ಎಲ್ಲ ಬಗೆಯ ನುರಿತ ವೈದ್ಯರನ್ನೂ ಕರೆಸುತ್ತಿರುವುದಾಗಿ ಅವರು ತಿಳಿಸಿದ್ದಾರೆ.

ಪರಿಸ್ಥಿತಿ ಅರಿತು ಇಂದು ಬೆಳಗ್ಗೆಯೇ ಮಠಕ್ಕೆ ತೆರಳಿರುವ ಯಡಿಯೂರಪ್ಪ ಅವರು ಇಂದಿನ ದಿನ ಪೂರ ಅಲ್ಲಿಯೇ ಉಳಿಯಲು ನಿರ್ಧರಿಸಿದ್ದು, ಕಿರಿಯ ಶ್ರೀಗಳೂ ಸೇರಿದಂತೆ, ಸ್ವಾಮೀಜಿಗಳೊಂದಿಗೆ ಸಭೆ ನಡೆಸುತ್ತಿದ್ದಾರೆ.

ಮೈಸೂರಿನಲ್ಲಿರುವ ಮುಖ್ಯಮಂತ್ರಿ ಎಚ್​.ಡಿ. ಕುಮಾರಸ್ವಾಮಿ ಅವರು ಹೆಲಿಕಾಪ್ಟರ್​ ಮೂಲಕ ಮಠದತ್ತ ತೆರಳುತ್ತಿದ್ದಾರೆ. ಇನ್ನು ಕೆಲವೇ ಕ್ಷಣದಲ್ಲಿ ಅವರು ಮಠಕ್ಕೆ ತಲುಪಲಿದ್ದು, ವೈದ್ಯರು, ಕಿರಿಯ ಶ್ರೀಗಳು, ಅಧಿಕಾರಿಗಳೊಂದಿಗೆ ಸಭೆ ನಡೆಸುವ ಸಾಧ್ಯತೆಗಳಿವೆ.

ಈಗಲ್ಟನ್​ನಲ್ಲಿ ಬೀಡು ಬಿಟ್ಟಿದ್ದ ಕಾಂಗ್ರೆಸ್​ನ ಎಲ್ಲ ಮುಖಂಡರೂ ಮಠದತ್ತ ತೆರಳುತ್ತಿದ್ದಾರೆ. ಈಗಾಗಲೇ ಡಿಸಿಎಂ ಪರಮೇಶ್ವರ್​, ಗೃಹ ಸಚಿವ ಎಂ.ಬಿ ಪಾಟೀಲ್​ ಮಠದಲ್ಲೆ ಇದ್ದಾರೆ.