ಶ್ರೀಗಳ ಕ್ರಿಯಾ ಸಮಾಧಿಗೆ ವಿಭೂತಿ

ಸಂತೋಷ ದೇಶಪಾಂಡೆ ಬಾಗಲಕೋಟೆ:ಆಧುನಿಕ ಬಸವಣ್ಣ, ತ್ರಿವಿಧ ದಾಸೋಹಿ, ನಡೆದಾಡುವ ದೇವರು ಸಿದ್ಧಗಂಗೆಯ ಡಾ. ಶಿವಕುಮಾರ ಸ್ವಾಮೀಜಿ ಕ್ರಿಯಾ ಸಮಾಧಿಗೆ ಬಸವನಾಡು ಬಾಗಲಕೋಟೆಯ ವಿಭೂತಿ ಬಳಸಲಾಗಿದೆ.

ನೂರು ವರ್ಷಗಳಿಂದ ವಿಭೂತಿ ತಯಾರಿಕೆಯಲ್ಲಿ ತೊಡ ಗಿಸಿಕೊಂಡಿರುವ ಬಾಗಲಕೋಟೆ ತಾಲೂಕಿನ ಮುಚಖಂಡಿ ಗ್ರಾಮದ ವೀರಯ್ಯ ಹಿರೇಮಠ ಕುಟುಂಬ ನಡೆದಾಡುವ ದೇವರ ಕ್ರಿಯಾ ಸಮಾಧಿಗೆ ವಿಭೂತಿ ನೀಡಿದ ಸಾರ್ಥಕ ಭಾವ ಹೊಂದಿದೆ. ತ್ರಿವಿಧ ದಾಸೋಹಿ ಸೇವೆಗೆ ಅವಕಾಶ ದೊರೆ ಯಿತಲ್ಲ ಎನ್ನುವ ಹೆಮ್ಮೆ ಕುಟುಂಬದಲ್ಲಿ ಮನೆ ಮಾಡಿದೆ.

ಸಿದ್ಧಗಂಗಾ ಶ್ರೀಗಳ ಆಜ್ಞೆ: ವೀರಯ್ಯ ಹಿರೇಮಠ ಅವರ ಕುಟುಂಬ 45 ವರ್ಷಗಳಿಂದ ಸಿದ್ಧಗಂಗಾ ಮಠಕ್ಕೆ ಶುದ್ಧ ಕ್ರಿಯಾ ಭಸ್ಮದಿಂದ ಸಿದ್ಧಪಡಿಸಿದ ವಿಭೂತಿ ನೀಡುತ್ತ ಬಂದಿದೆ. ಸಿದ್ಧಗಂಗಾ ಸ್ವಾಮೀಜಿಗಳು ಅನೇಕ ವರ್ಷಗಳಿಂದ ಇವರ ವಿಭೂತಿ ಪ್ರತಿನಿತ್ಯ ಹಚ್ಚಿಕೊಳ್ಳುತ್ತಿದ್ದರು. ಆರು ತಿಂಗಳ ಹಿಂದೆ ಶ್ರೀಗಳ ದರ್ಶನಕ್ಕಾಗಿ ವೀರಯ್ಯ ಅವರು ತೆರಳಿದ್ದಾಗ 10 ಸಾವಿರಗಳು ಬೇಕು. ಶುದ್ಧ ಭಸ್ಮದಿಂದ ಅವು ಸಿದ್ಧವಾಗಿರಬೇಕು ಎಂದು ಡಾ.ಶಿವಕುಮಾರ ಶ್ರೀಗಳು ಆಜ್ಞೆ ನೀಡಿದ್ದರಂತೆ. ಆರು ತಿಂಗಳಲ್ಲಿ ಮಾಡಿಕೊಡುವುದಾಗಿ ವಾಗ್ದಾನ ನೀಡಿದ್ದರು. ಅದರಂತೆ ಹಿರೇಮಠ ಕುಟುಂಬದ ಸದಸ್ಯರು ಆರು ತಿಂಗಳಿನಿಂದ ಬಿಡುವಿಲ್ಲದೆ ವಿಭೂತಿ ಗಟ್ಟಿ ನಿರ್ವಣದಲ್ಲಿ ತೊಡಗಿಸಿಕೊಂಡಿದ್ದರು.

ಲಿಂಗೈಕ್ಯರಾಗುತ್ತಿದ್ದಂತೆ ದೂರವಾಣಿ ಕರೆ: 10 ಸಾವಿರ ವಿಭೂತಿ ಗಟ್ಟಿಗಳು ಸಿದ್ಧ್ದಾಗಿ ವಾರ ಕಳೆದಿತ್ತು. ಮನೆಯಲ್ಲಿ ಕಾರ್ಯಕ್ರಮವಿದ್ದ ಕಾರಣ ಬುಧವಾರ ಅಥವಾ ಗುರುವಾರ ಸಿದ್ಧಗಂಗಾ ಮಠಕ್ಕೆ ತೆರಳಿ ವಿಭೂತಿಗಳನ್ನು ತಲುಪಿಸಿ ಶ್ರೀಗಳ ದರ್ಶನ ಪಡೆದುಕೊಂಡು ಬರಬೇಕು ಎಂಬ ಆಲೋಚನೆಯಲ್ಲಿ ವೀರಯ್ಯ ಹಿರೇಮಠ ಇದ್ದರು. ಸೋಮವಾರ ಬೆಳಗ್ಗೆ 11.30 ಗಂಟೆಗೆ ಸ್ವಾಮೀಜಿ ಲಿಂಗೈಕ್ಯರಾಗಿದ್ದಾರೆ. ತಕ್ಷಣಕ್ಕೆ ತಾವು ವಿಭೂತಿಗಳೊಂದಿಗೆ ಮಠಕ್ಕೆ ಬನ್ನಿ ಎಂದು ಶ್ರೀಮಠದಿಂದ ದೂರವಾಣಿ ಕರೆ ಬಂದಿದೆ.

ಶ್ರೀಗಳ ಅಗಲಿಕೆ ವಿಷಯ ಕೇಳಿ ವಿಚಲಿತರಾದ ವೀರಯ್ಯ ಅವರು ಕಣ್ಣೀರು ಹಾಕುತ್ತಲೆ ವಾಹನದಲ್ಲಿ 2 ಸಾವಿರ ಕ್ರಿಯಾ ಗಟ್ಟಿ ಹಾಗೂ 8 ಸಾವಿರ ಸಾದಾ ಭಸ್ಮದಿಂದ ತಯಾರಿಸಿದ ವಿಭೂತಿ ತೆಗೆದುಕೊಂಡು ಮಠಕ್ಕೆ ಹೋಗಿದ್ದಾರೆ. ಶಿವಕುಮಾರ ಶ್ರೀಗಳ ಕ್ರಿಯಾ ಸಮಾಧಿಗೆ ಈ ವಿಭೂತಿ ಬಳಸಲಾಗಿದೆ. ಈ ವಿಭೂತಿಗೆ ಹಣ ಪಡೆಯದಿರಲು ಹಿರೇಮಠ ಕುಟುಂಬ ನಿರ್ಧಾರ ಮಾಡಿದೆ.

108 ವರ್ಷಗಳ ಕಾಯಕ:ಗೋಮಾತೆ ಸೆಗಣಿಯಿಂದ ಶಿವಯೋಗ ಮಂದಿರದಲ್ಲಿ ಮೊದಲ ಬಾರಿಗೆ ವಿಭೂತಿ ತಯಾರಿಸುವುದನ್ನು ಗುರು ಕುಮಾರೇಶ್ವರ ನೇತೃತ್ವದಲ್ಲಿ ವೀರಯ್ಯ ಹಿರೇಮಠ ಅವರ ಅಜ್ಜ (ತಾತಾ) ಲಿಂ. ಮಹಾಲಿಂಗಯ್ಯ ಹಿರೇಮಠ ಕಲಿತುಕೊಂಡರು. 108 ವರ್ಷಗಳಿಂದ ಹಿರೇಮಠ ಕುಟುಂಬ ವಿಭೂತಿ ತಯಾರಿಕೆಯಲ್ಲಿ ನಿರತವಾಗಿದೆ.

ಸಿದ್ಧಗಂಗಾ ಮಠದ ಶ್ರೀಗಳು ಸಾಕ್ಷಾತ್ ದೇವರಿದ್ದಂತೆ. ಅವರ ಆಶೀರ್ವಾದ ಪಡೆದುಕೊಳ್ಳಲು, ಸೇವೆ ಮಾಡಲು ಪುಣ್ಯ ಮಾಡಿರಬೇಕು. ಸ್ವಾಮೀಜಿಗಳ ಸಮಾಧಿಗೆ ನಮ್ಮ ಕ್ರಿಯಾ ಭಸ್ಮದ ವಿಭೂತಿ ಬಳಸಿರುವುದು ನಮಗೆ ಹೆಮ್ಮೆ. ಇದಕ್ಕೆ ಬೆಲೆ ಕಟ್ಟಲಾಗದು. ಇದು ದೇವರ ಸೇವೆಗೆ ಸಿಕ್ಕ ಭಾಗ್ಯ. ಶ್ರೀಗಳು ಲಿಂಗೈಕ್ಯರಾಗುವುದಕ್ಕಿಂತ ಮುಂಚೆಯೇ ಅವರಿಗೆ ತಲುಪಿಸಬೇಕಾಗಿತ್ತು. ಕೊನೆಯಲ್ಲಿ ಅವರ ಸೇವೆ ಮಾಡಿದ್ದು ಸಾರ್ಥವೆನಿಸಿದೆ.

| ವೀರಯ್ಯ ಹಿರೇಮಠ ವೀರಭದ್ರೇಶ್ವರ ವಿಭೂತಿ ನಿರ್ಮಾಣ ಕೇಂದ್ರ (ಮುಚಖಂಡಿ)

ಸಿದ್ಧಗಂಗಾ ಮಠದ ಶ್ರೀಗಳು ಸಾಕ್ಷಾತ್ ದೇವರಿದ್ದಂತೆ. ಅವರ ಆಶೀರ್ವಾದ ಪಡೆದುಕೊಳ್ಳಲು, ಸೇವೆ ಮಾಡಲು ಪುಣ್ಯ ಮಾಡಿರಬೇಕು. ಸ್ವಾಮೀಜಿಗಳ ಸಮಾಧಿಗೆ ನಮ್ಮ ಕ್ರಿಯಾ ಭಸ್ಮದ ವಿಭೂತಿ ಬಳಸಿರುವುದು ನಮಗೆ ಹೆಮ್ಮೆ. ಇದಕ್ಕೆ ಬೆಲೆ ಕಟ್ಟಲಾಗದು. ಇದು ದೇವರ ಸೇವೆಗೆ ಸಿಕ್ಕ ಭಾಗ್ಯ. ಶ್ರೀಗಳು ಲಿಂಗೈಕ್ಯರಾಗುವುದಕ್ಕಿಂತ ಮುಂಚೆಯೇ ಅವರಿಗೆ ತಲುಪಿಸಬೇಕಾಗಿತ್ತು. ಕೊನೆಯಲ್ಲಿ ಅವರ ಸೇವೆ ಮಾಡಿದ್ದು ಸಾರ್ಥವೆನಿಸಿದೆ.

| ವೀರಯ್ಯ ಹಿರೇಮಠ ವೀರಭದ್ರೇಶ್ವರ ವಿಭೂತಿ ನಿರ್ಮಾಣ ಕೇಂದ್ರ (ಮುಚಖಂಡಿ)