ಜಯಂತಿ, ಕುರ್ಲಾ ರೈಲು ನಿಲುಗಡೆಗೆ ಆಗ್ರಹ

ಸೈದಾಪುರ: ಪಟ್ಟಣದ ರೈಲ್ವೆ ನಿಲ್ದಾಣಕ್ಕೆ ಸೋಮವಾರ ಭೇಟಿ ನೀಡಿದ ಸಿಕಿಂದ್ರಾಬಾದ್ ರೈಲ್ವೆ ವಿಭಾಗದ ವ್ಯವಸ್ಥಾಪಕ ನಿರ್ದೇಶಕ ಗಜಾನನ್ ಅವರಿಗೆ ಸೈದಾಪುರ ಪಟ್ಟಣದ ನಾಗರಿಕರು ಜಯಂತಿ, ಕುರ್ಲಾ ರೈಲು ನಿಲ್ಲಿಸುವುದು ಮತ್ತು ಮೂಲ ಸೌಕರ್ಯ ಒದಗಿಸುವಂತೆ ಮನವಿ ಮಾಡಿದರು.

ಪಟ್ಟಣದ ಸುತ್ತಲು 60ಕ್ಕೂ ಹೆಚ್ಚಿನ ಗ್ರಾಮಗಳ ಸಂಪರ್ಕ ಕಲ್ಪಿಸುವ ಮಹತ್ವ ರೈಲು ನಿಲ್ದಾಣ ಇದಾಗಿದ್ದು, ಶುದ್ಧ ಕುಡಿಯುವ ನೀರು, ಶೌಚಗೃಹ ಇಲ್ಲದೆ ತೊಂದರೆ ಅನುಭವಿಸುವಂತಾಗಿದೆ. ಮಹಿಳೆಯರು, ಮಕ್ಕಳು, ವಯೋವೃದ್ಧರ ಪಾಡು ಹೇಳತಿರದಾಗಿದೆ. ಈ ಸಮಸ್ಯೆ ಕೂಡಲೇ ಪರಿಗಣಿಸಿ ಸೌಲಭ್ಯಗಳನ್ನು ಕಲ್ಪಿಸುವಂತೆ ಆಗ್ರಹಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸಿಕಿಂದ್ರಾಬಾದ್ ರೈಲ್ವೆ ವಿಭಾಗದ ವ್ಯವಸ್ಥಾಪಕ ನಿದರ್ೇಶಕ ಗಜಾನನ್, ಈ ಬಗ್ಗೆ ವಿಚಾರಣೆ ನಡೆಸಿ ಎರಡು ರೈಲುಗಳು ನಿಲುಗಡೆಗೆ ಪ್ರಯತ್ನಿಸಲಾಗುವುದು ಎಂದು ಭರವಸೆ ನೀಡಿದರು. ಅನೀಲಕುಮಾರ ಬೆಳಗುಂದಿ, ಯೇಸು ಮೇಲಗಿರಿ, ಅಲ್ಲಾ ಭಾಷಾ ಹಿಚಗೇರಿ, ನಾರಾಯಣ, ಅರುಣ ಬಗಾಡೆ ಇತರರಿದ್ದರು.