ಅಭಿವೃದ್ಧಿಗಾಗಿ ಖರ್ಗೆ ಅವರನ್ನು ಬೆಂಬಲಿಸಿ

ಸೈದಾಪುರ: ಕ್ಷೇತ್ರದ ಸಮಗ್ರ ಅಭಿವೃದ್ಧಿಗಾಗಿ ಕಾಂಗ್ರೆಸ್ ಪಕ್ಷದ ಡಾ. ಮಲ್ಲಿಕಾರ್ಜುನ ಖರ್ಗೆ ಅವರನ್ನು ಬೆಂಬಲಿಸಿ ಎಂದು ಜಿಲ್ಲಾ ಕಿಸಾನ ಘಟಕದ ಅಧ್ಯಕ್ಷ ಬಸವರಾಜಯ್ಯ ಸ್ವಾಮಿ ಬದ್ದೇಪಲ್ಲಿ ಮನವಿ ಮಾಡಿದರು.

ದುಪ್ಪಲ್ಲಿ, ಬದ್ದೇಪಲ್ಲಿ, ಅಜಲಾಪುರ ಗ್ರಾಮಗಳಲ್ಲಿ ಕಾಂಗ್ರೆಸ್ ಪಕ್ಷದ ಪರ ಪ್ರಚಾರ ಮಾಡಿ ಮಾತನಾಡಿದ ಅವರು, ಹೈದರಾಬಾದ್ ಕನರ್ಾಟಕ ಅಭಿವೃದ್ಧಿ ರೂವಾರಿ ಡಾ. ಮಲ್ಲಿಕಾರ್ಜುನ ಖರ್ಗೆ ಅವರು, ಇಲ್ಲಿನ ಜನತೆಯ ಅನುಕೂಲಕ್ಕಾಗಿ 371(ಜೆ) ಜಾರಿಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಯುಪಿಎ ಸರ್ಕಾರದ ಅವಧಿಯಲ್ಲಿ ಕೇಂದ್ರ ಸಚಿವರಾಗಿದ್ದಾಗ ಇಎಸ್ಐ ಆಸ್ಪತ್ರೆ, ಕಡೇಚೂರು-ಬಾಡಿಯಾಳ ಕೈಗಾರಿಕಾ ಪ್ರದೇಶದಲ್ಲಿ ರೈಲು ಬೋಗಿ ಕಾರ್ಖಾನೆ, ನಾರಾಯಣಪೇಟ ರೋಡ್ ಎಂದಿದ್ದ ರೈಲು ನಿಲ್ದಾಣಕ್ಕೆ ಸೈದಾಪುರ ಎಂದು ಪುನರ್ ನಾಮಕರಣ ಮಾಡುವಲ್ಲಿ ಖರ್ಗೆ ಪಾತ್ರ ಪ್ರಮುಖವಾಗಿದೆ. ಅಭಿವೃದ್ಧಿಗಾಗಿ ಇನ್ನೊಮ್ಮೆ ಖರ್ಗೆ ಅವರಿಗೆ ಮತ ನೀಡಿ ಎಂದು ಮನವಿ ಮಾಡಿದರು.

ಬಿಜೆಪಿಯವರ ಅಭಿವೃದ್ಧಿ ಮಂತ್ರ ಕೇವಲ ಚುನಾವಣೆ ಗಿಮಿಕ್ ಆಗಿದೆ. ಮೋದಿ ಸುಳ್ಳು ಹೇಳುವುದರಲ್ಲಿ ನಿಸ್ಸೀಮರಾಗಿದ್ದಾರೆ ಎಂದು ವಾಗ್ದಾಳಿ ನಡೆಸಿದರು. ಚುನಾವಣೆಯಲ್ಲಿ ಸೋತ ನಾಯಕರೆಲ್ಲ ಒಂದಾಗಿ ಖರ್ಗೆಯವರನ್ನು ಸೋಲಿಸುವ ಕನಸು ಕಾಣುತ್ತಿದ್ದಾರೆ ಎಂದ ವ್ಯಂಗ್ಯವಾಡಿದರು.

ಜಿಪಂ ಮಾಜಿ ಉಪಾಧ್ಯಕ್ಷ ಶರಣಿಕ ಕುಮಾರ ದೋಖಾ, ಮುಖಂಡರಾದ ಚಂದ್ರಶೇಖರ ವಾರದ, ಪ್ರಭುಲಿಂಗ ವಾರದ, ನ್ಯಾಯವಾದಿ ಮಹಿಪಾಲರೆಡ್ಡಿ ದುಪ್ಪಲ್ಲಿ, ನಿರಂಜನರೆಡ್ಡಿ ಶಟ್ಟಿಹಳ್ಳಿ ಇತರರಿದ್ದರು.

Leave a Reply

Your email address will not be published. Required fields are marked *