ವಿದೇಶದಲ್ಲಿ ಸದ್ ಮಾಡ್ತಿದಾರೆ ಸಿದ್: ಆಸ್ಟ್ರೇಲಿಯನ್​ ಸಿನಿಮಾಗೆ ಕನ್ನಡಿಗನ ಸಂಗೀತ ನಿರ್ದೇಶನ

blank

ಬೆಂಗಳೂರು: ಕನ್ನಡಿಗರೊಬ್ಬರು ಇದೀಗ ವಿದೇಶದಲ್ಲಿ ಭಾರಿ ಸದ್ದು ಮಾಡುತ್ತಿದ್ದಾರೆ. ಹಾಗೆ ಸದ್ದಿಗೂ ಸುದ್ದಿಗೂ ಪ್ರಸಿದ್ಧಿಗೂ ಕಾರಣರಾಗಿರುವ ವ್ಯಕ್ತಿಯ ಹೆಸರು ಸಿದ್. ಹೌದು.. ವಿದೇಶದಲ್ಲಿ ಸಿದ್ ಎಂದೇ ಗುರುತಿಸಲ್ಪಡುತ್ತಿರುವ ಸಿದ್ಧಾರ್ಥ್ ಆಚಾರ್ಯ ಆಸ್ಟ್ರೇಲಿಯನ್​ ಸಿನಿಮಾವೊಂದಕ್ಕೆ ಸ್ವತಂತ್ರವಾಗಿ ಪೂರ್ಣಪ್ರಮಾಣದ ಹಿನ್ನೆಲೆ ಸಂಗೀತ (ಬಿಜಿಎಂ) ನೀಡುವ ಜೊತೆಗೆ ಸಂಗೀತ ಸಂಯೋಜನೆಯನ್ನು ಕೂಡ ಮಾಡಿದ್ದಾರೆ.

ಸಿದ್ ಬಿಜಿಎಂ ಹಾಗೂ ಸಂಗೀತ ಸಂಯೋಜಿಸಿರುವ ಸಿನಿಮಾ ಹೆಸರು ‘ಬೀಟ್’. ಈ ಆಸ್ಟ್ರೇಲಿಯನ್ ಚಿತ್ರವನ್ನು ‘ಗ್ರೀನ್ ಫ್ರಾಗ್ ಪ್ರೊಡಕ್ಷನ್ಸ್’ ಸಂಸ್ಥೆ ನಿರ್ಮಾಣ ಮಾಡಿದ್ದು, ನೊವೊಕ್ಯಾಸ್ಟ್ರಿಯನ್ ಜೈ ಕ್ಯೂರಿ ನಿರ್ದೇಶನ ಮಾಡಿದ್ದಾರೆ. ಈ ಚಿತ್ರವು ನಿರಾಶ್ರಿತರು ಮತ್ತು ಸಮಾಜದಲ್ಲಿನ ತಾರತಮ್ಯದ ಕಥಾಹಂದರವನ್ನು ಹೊಂದಿದೆ‌.

2020ರಲ್ಲಿ ಜೈ ನಿರ್ದೇಶಿಸಿದ್ದ ‘ವಿಕ್ಟಿಮ್’ ಎಂಬ ಕಿರುಚಿತ್ರ 11 ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನು ಗಳಿಸಿತ್ತು. ‘ಬೀಟ್’ ಸಿನಿಮಾದಲ್ಲಿ ಆಸ್ಟ್ರೇಲಿಯಾದ ಪ್ರಶಸ್ತಿ ಪುರಸ್ಕೃತ ನಟ ಜಾನ್ ವುಡ್, ನಟಿ ರಾಚೆಲ್ ಕಾರ್ಪನಿ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಅಂಥ ಪ್ರತಿಭಾವಂತ ನಿರ್ದೇಶಕರ ನಿರ್ದೇಶನ ಮತ್ತು ಖ್ಯಾತ ಕಲಾವಿದರ ಅಭಿನಯದಲ್ಲಿ ಮೂಡಿ ಬಂದಿರುವ ಫೀಚರ್ ಫಿಲ್ಮ್ ‘ಬೀಟ್’ಗೆ ಕನ್ನಡಿಗ ಸಿದ್ ಆಚಾರ್ಯ ಸಂಗೀತ ಸಂಯೋಜಿಸಿದ್ದಾರೆ.

ವಿದೇಶದಲ್ಲಿ ಸದ್ ಮಾಡ್ತಿದಾರೆ ಸಿದ್: ಆಸ್ಟ್ರೇಲಿಯನ್​ ಸಿನಿಮಾಗೆ ಕನ್ನಡಿಗನ ಸಂಗೀತ ನಿರ್ದೇಶನ

ಸಿದ್ಧಾರ್ಥ್​ ಆಚಾರ್ಯ ಮೂಲತಃ ಉಡುಪಿ ಜಿಲ್ಲೆಯ ಕುಂದಾಪುರದವರು‌. ಇವರು ಆಸ್ಟ್ರೇಲಿಯಾದ ಪ್ರಮುಖ ಕಂಟೆಂಪೊರರಿ ಕ್ಲಾಸಿಕ್ ಮ್ಯೂಸಿಕಲ್ ಕಾಂಪೋಸರ್ ಆಗಿ ಗುರುತಿಸಿಕೊಂಡಿದ್ದಾರೆ. ಇದೀಗ ಇವರು ಮೊದಲ ಬಾರಿಗೆ ಆಸ್ಟ್ರೇಲಿಯನ್ ಸಿನಿಮಾವೊಂದಕ್ಕೆ ಪೂರ್ಣಪ್ರಮಾಣದಲ್ಲಿ ಹಿನ್ನೆಲೆ ಸಂಗೀತ ಹಾಗೂ ಸಂಗೀತ ಸಂಯೋಜನೆ ಮಾಡುವ ಮೂಲಕ ಸಂಗೀತ ಕ್ಷೇತ್ರದಲ್ಲಿ ಮತ್ತೊಂದು ಮಜಲನ್ನು ತಲುಪಿದ್ದಾರೆ. ಕನ್ನಡಿಗನ ಬಿಜಿಎಂ-ಸಂಗೀತ ನಿರ್ದೇಶನಕ್ಕೆ ಆಸ್ಟ್ರೇಲಿಯಾದಲ್ಲಿ ಉತ್ತಮ‌ ಪ್ರತಿಕ್ರಿಯೆ ಜೊತೆಗೆ ಮೆಚ್ಚುಗೆ ಕೂಡ ವ್ಯಕ್ತವಾಗಿದೆ.

‘ನಾಸಾ’ಗೂ ಸಿದ್ ನಾದ

ಬೆಂಗಳೂರಿನಲ್ಲಿ ಹುಟ್ಟಿ ಇಂಗ್ಲೆಂಡ್‌ನಲ್ಲಿ ಬೆಳೆದು, ಸದ್ಯ ಆಸ್ಟ್ರೇಲಿಯಾದ ನ್ಯೂಕ್ಯಾಸಲ್‌ನಲ್ಲಿ ನೆಲೆಸಿರುವ ಸಿದ್ ಸಂಗೀತದ ಬಗ್ಗೆ ಅಪಾರ ಆಸಕ್ತಿ ಹೊಂದಿದ್ದಾರೆ. ಪ್ರಸ್ತುತ ಬಯೋಟೆಕ್ ಇಂಜಿನಿಯರ್ ವ್ಯಾಸಂಗ ಮಾಡುತ್ತಿರುವ ಇವರು, ಅಂತಾರಾಷ್ಟ್ರೀಯ ಮಟ್ಟದ ಆಲ್ಬಂ ಮತ್ತು ಸಿನಿಮಾಗಳಿಗೆ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ.

2018ರಲ್ಲಿ ಟೊಮರಿ ನ್ಯಾಷನಲ್ ಪಾರ್ಕ್ ಯುನಿವರ್ಸಿಟಿಯ ಡಾಕ್ಯುಮೆಂಟರಿಗೆ ನೀಡಿದ್ದ ಸಂಗೀತ ಇವರ ಪ್ರಪ್ರಥಮ ಸೌಂಡ್ ಟ್ರ್ಯಾಕ್. ಅದೇ ವರ್ಷದಲ್ಲಿ ಇವರು ತಮ್ಮ ಮೊದಲ ಆಲ್ಬಂ ‘ಆ್ಯನ್ ಓಷನ್ ಆಫ್ ಸ್ಟಾರ್ಸ್’ ಬಿಡುಗಡೆ ಮಾಡಿದ್ದರು‌. 2019ರಲ್ಲಿ ‘ಹರ್ ಹಾರ್ಟ್’ ಎಂಬ ಮತ್ತೊಂದು ಆಲ್ಬಂ ಬಿಡುಗಡೆ ಮಾಡಿದರು‌. 2020ರಲ್ಲಿ ಬಿಡುಗಡೆಯಾದ ‘ಸ್ಟೋರೀಸ್ ಆಫ್ ಸ್ಕೈ’ ಆಲ್ಬಂ ಇವರಿಗೆ ಬಹಳಷ್ಟು ಜನಪ್ರಿಯತೆಯನ್ನು ತಂದುಕೊಟ್ಟಿತು.

ಇನ್ನು 2020ರಲ್ಲಿ ಇವರಿಗೆ ‘ನಾಸಾ’ಗಾಗಿ ನಾದ ಸಂಯೋಜಿಸುವ ಅವಕಾಶವೂ ಒದಗಿಬಂತು. ಹೊಸದಾಗಿ ನೇಮಿಸಲ್ಪಟ್ಟವರಿಗೆ ‘ಯುಎಸ್ಎಆರ್‌ಇಸಿ’ ಪ್ರತಿಜ್ಞಾವಿಧಿಯನ್ನು ಇಂಟರ್‌ನ್ಯಾಷನಲ್ ಸ್ಪೇಷ್ ಸ್ಟೇಷನ್‌ನ ಆ್ಯಸ್ಟ್ರೋನಾಟ್ ಆ್ಯಂಡ್ರ್ಯೂ ಮಾರ್ಗನ್ ಬೋಧಿಸಿದ ‘ನಾಸಾ’ದ ಈ ಕಾರ್ಯಕ್ರಮಕ್ಕೆ ಸಿದ್ ಸಂಗೀತ ನೀಡಿದ್ದರು.

ವಿದೇಶದಲ್ಲಿ ಸದ್ ಮಾಡ್ತಿದಾರೆ ಸಿದ್: ಆಸ್ಟ್ರೇಲಿಯನ್​ ಸಿನಿಮಾಗೆ ಕನ್ನಡಿಗನ ಸಂಗೀತ ನಿರ್ದೇಶನ
ಬೀಟ್ ಪ್ರೀಮಿಯರ್ ಶೋನಲ್ಲಿ ತಂದೆಯೊಂದಿಗೆ ಸಿದ್ಧಾರ್ಥ್ ಆಚಾರ್ಯ

ತಂದೆ ಡಾ.ಶ್ಯಾಮಸುಂದರ್, ತಾಯಿ ಪ್ರಸೀತ ಜತೆ ಸಿದ್ ಆಸ್ಟ್ರೇಲಿಯಾದಲ್ಲಿ ನೆಲೆಸಿದ್ದು, ಇನ್​ಫಾರ್ಮೇಷನ್ ಟೆಕ್ನಾಲಜಿಯಲ್ಲಿ ಪದವಿ ಗಳಿಸಿದ್ದಾರೆ. ಇದೀಗ ಬಯೋಟೆಕ್ನಾಲಜಿಯಲ್ಲೂ ಮತ್ತೊಂದು ಪದವಿ ವ್ಯಾಸಂಗ ಮಾಡುತ್ತಿದ್ದಾರೆ. ಡಾ.ಶ್ಯಾಮಸುಂದರ್ ಆಚಾರ್ಯ ಆಸ್ಟ್ರೇಲಿಯಾದ ನ್ಯೂಕ್ಯಾಸಲ್​ನ ಜಾನ್ ಹಂಟರ್ ಆಸ್ಪತ್ರೆಯ ಎಂಡೋಕ್ರೈನಾಲಜಿಸ್ಟ್​ ಆಗಿದ್ದು, ಆ ವಿಭಾಗದ ನಿರ್ದೇಶಕ ಕೂಡ ಆಗಿದ್ದಾರೆ. ಡಾ.ಶ್ಯಾಮ್ ಖ್ಯಾತ ಟಿವಿ ನಿರೂಪಕಿ ಶೈಲಜಾ ಸಂತೋಷ್​ ಅವರ ಸಹೋದರ. ‘ಬೀಟ್​’ ಸಿನಿಮಾದ ಪ್ರೀಮಿಯರ್ ಶೋ ಇತ್ತೀಚೆಗಷ್ಟೇ ನಡೆದಿದ್ದು, ಚಿತ್ರ ಇನ್ನಷ್ಟೇ ಬಿಡುಗಡೆ ಆಗಬೇಕಿದೆ.

ವಿದೇಶದಲ್ಲಿ ಸದ್ ಮಾಡ್ತಿದಾರೆ ಸಿದ್: ಆಸ್ಟ್ರೇಲಿಯನ್​ ಸಿನಿಮಾಗೆ ಕನ್ನಡಿಗನ ಸಂಗೀತ ನಿರ್ದೇಶನ

#MarriageStrike : ಮದುವೆ ವಿರುದ್ಧ ಪುರುಷರ ಅಭಿಯಾನ!

Share This Article

2025ರಲ್ಲಿ ಈ 3 ರಾಶಿಯವರಿಗೆ ರಾಜಯೋಗ!? ಅನೇಕ ರೀತಿಯಲ್ಲಿ ಹಣದ ಹರಿವು, ಐಷಾರಾಮಿ ಜೀವನ | Royal Life

Royal Life : ಸಾಮಾನ್ಯವಾಗಿ ನಮ್ಮ ನಡುವೆ ಜಾತಕವನ್ನು ನಂಬುವಂತಹ ಅನೇಕ ಜನರಿದ್ದಾರೆ. ಅದೇ ರೀತಿ…

ಜೇನುತುಪ್ಪ ಜತೆ ಹುರಿದ ಶುಂಠಿ ತಿಂದರೆ ಗಂಟಲು ನೋವು ಮಾಯಾ! ಹೀಗಿವೆ ಪ್ರಯೋಜನಗಳು

ಬೆಂಗಳೂರು: ಜೇನುತುಪ್ಪ ಮತ್ತು ಶುಂಠಿ ಆರೋಗ್ಯಕ್ಕೆ ತುಂಬಾ ಪ್ರಯೋಜನ ಎಂಬ ವಿಷಯ ಬಹುತೇಕರಿಗೆ ತಿಳಿದಿದೆ. ಈ…

ಸಾಮಾನ್ಯವಾಗಿ ಮಾಡುವ ಈ ತಪ್ಪುಗಳಿಂದಲೇ ಲೈಂಗಿಕ ಜೀವನದಲ್ಲಿ ಸಾಕಷ್ಟು ಸಮಸ್ಯೆ ಎದುರಿಸಬೇಕಾಗುತ್ತೆ ಎಚ್ಚರ! Relationship Tips

Relationship Tips : ಪರಸ್ಪರ ತಿಳುವಳಿಕೆಯುಳ್ಳ ಉತ್ತಮ ಲೈಂಗಿಕ ಜೀವನವು ಸಂತೋಷದ ದಾಂಪತ್ಯಕ್ಕೆ ಕಾರಣವಾಗುತ್ತದೆ. ಲೈಂಗಿಕ…