ಬೆಳಗಾವಿ: ತಾಲೂಕಿನ ಭೂತರಾಮನಹಟ್ಟಿ ಬಳಿ ಇರುವ ಕಿತ್ತೂರು ರಾಣಿ ಚನ್ನಮ್ಮ ಕಿರು ಮೃಗಾಲಯದ ನಿರುಪಮಾ ಹೆಸರಿನ ಸಿಂಹ(ಹೆಣ್ಣು ಸಿಂಹ) ಬಹು ಅಂಗಾಂಗ ವೈಫಲ್ಯದಿಂದ ಗುರುವಾರ ಮೃತಪಟ್ಟಿದೆ ಎಂದು ಮೃಗಾಲಯದ ಅಧಿಕಾರಿಗಳು ತಿಳಿಸಿದ್ದಾರೆ.
15 ವರ್ಷದ ಈ ಸಿಂಹಿಣಿ ಶ್ವಾಸಕೋಶ ಮತ್ತು ಲಿವರ್ ವೈಲ್ಯದಿಂದ ಬಳಲುತ್ತಿತ್ತು. 15 ದಿನಗಳಿಂದ ವೈದ್ಯರು ಜೀವ ಉಳಿಸಲು ಸಾಕಷ್ಟು ಪ್ರಯತ್ನಿಸಿದ್ದರು. ಗುರುವಾರ ಮಧ್ಯಾಹ್ನ 12.55ಕ್ಕೆ ಚಿಕಿತ್ಸೆ ಫಲಕಾರಿ ಆಗದೇ ಮೃಗಾಲಯದಲ್ಲಿ ಮೃತಪಟ್ಟಿದೆ. ವನ್ಯಜೀವಿ ವೈದ್ಯರ ಸಲಹೆಯಂತೆ ಮರಣೋತ್ತರ ಪರೀಕ್ಷೆ ಮಾಡಿದ ನಂತರ ಮೃಗಾಲಯದ ಆವರಣದಲ್ಲೇ ಗೌರವಯುತವಾಗಿ ಅಂತ್ಯಕ್ರಿಯೆ ನೆರವೇರಿಸಲಾಯಿತು. ಈ ವೇಳೆ ಡಿಎಫ್‌ಒ ಮಾರಿಯಾ ಕ್ರಿಸ್ಟೋ ರಾಜಾ, ವಲಯ ಅರಣ್ಯ ಅಧಿಕಾರಿ ಪವನ ಕುರನಿಂಗ, ಹಿರಿಯ ವೈದ್ಯಾಧಿಕಾರಿ ಡಾ.ಹನುಮಂತ ಸಣ್ಣಕ್ಕಿ, ತಜ್ಞ ವೈದ್ಯ ಡಾ.ಶ್ರೀಕಾಂತ ಕೋಹಳ್ಳಿ, ಮೃಗಾಲಯದ ವೈದ್ಯ ಡಾ. ನಾಗೇಶ ಹುಯಿಲಗೋಳ ಸೇರಿ ಸಿಬ್ಬಂದಿ ಇದ್ದರು. ಬನ್ನೇರುಘಟ್ಟ ಮೃಗಾಲಯದಿಂದ 2020ರಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ಕಿರು ಮೃಗಾಲಯಕ್ಕೆ ತರಲಾಗಿತ್ತು.