21 C
Bengaluru
Thursday, January 23, 2020

PHOTOS| ಮುದ್ದು ಕಂದನ ನಿರೀಕ್ಷೆಯಲ್ಲಿ ನಟಿ ಶ್ವೇತಾ ಚಂಗಪ್ಪ: ಗರ್ಭಿಣಿ ಫೋಟೊ ಬಗ್ಗೆ ಕೆಟ್ಟ ಕಮೆಂಟ್​ ಮಾಡಿದ್ದ ನೆಟ್ಟಿಗನಿಗೆ ತಿರುಗೇಟು!

Latest News

ಮೊಕದ್ದಮೆ ಹಿಂಪಡೆಯಲು ಒತ್ತಾಯ

ಮೈಸೂರು: ಮಾನಸಗಂಗೋತ್ರಿಯಲ್ಲಿ ಎನ್‌ಆರ್‌ಸಿ, ಸಿಎಎ ವಿರೋಧಿಸಿ ನಡೆದ ಪ್ರತಿಭಟನೆ ಸಂದರ್ಭ ‘ಫ್ರೀ ಕಾಶ್ಮೀರ’ ಫಲಕ ಪ್ರದರ್ಶನಕ್ಕೆ ಸಂಬಂಧಿಸಿದಂತೆ ವಿದ್ಯಾರ್ಥಿಗಳ ಮೇಲೆ ಹೂಡಿರುವ ಮೊಕದ್ದಮೆ...

ವಿದ್ಯಾಭ್ಯಾಸದ ಸಂದರ್ಭ ಪ್ರತಿಭಟನೆ ಬೇಡ

ಮೈಸೂರು: ಶಿಕ್ಷಣಕ್ಕೆ ಸಂಬಂಧಿಸಿದ ಸಮಸ್ಯೆಗಳಿದ್ದಲ್ಲಿ ವಿಶ್ವವಿದ್ಯಾಲಯಗಳ ಒಳಗೆ ಬಗೆಹರಿಸಿಕೊಳ್ಳಬೇಕೇ ಹೊರತು, ವಿದ್ಯಾಭ್ಯಾಸದ ಸಂದರ್ಭದಲ್ಲಿ ಪ್ರತಿಭಟನೆಗಳಿಗೆ ಮುಂದಾಗಬಾರದು ಎಂದು ಲೋಕಾಯುಕ್ತ ನಿವೃತ್ತ ನ್ಯಾಯಮೂರ್ತಿ ಸಂತೋಷ್...

ಮಹಿಳೆಯರಿಗೆ ಶೇ.50ರಷ್ಟು ಮೀಸಲಾತಿ ಜಾರಿಗೊಳಿಸಿ

ಮೈಸೂರು: ವಿಧಾನಸಭೆ, ಲೋಕಸಭೆಯಲ್ಲಿ ಮಹಿಳೆಯರಿಗೆ ಶೇ. 50ರಷ್ಟು ಮೀಸಲಾತಿ ಜಾರಿಗೊಳಿಸಬೇಕು ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಒತ್ತಾಯಿಸಿದರು. ಕರ್ನಾಟಕ ಪ್ರದೇಶ ಮಹಿಳಾ...

ಕೇಂದ್ರದ ಬಿಜೆಪಿ ಸರ್ಕಾರ ಬಿದ್ದ ದಿನ ಪೌರತ್ವ ತಿದ್ದುಪಡಿ ಕಾಯ್ದೆಯೂ ರದ್ದಾಗುತ್ತದೆ: ನಿವೃತ್ತ ಐಎಎಸ್​ ಅಧಿಕಾರಿ ಕಣ್ಣನ್​ ಗೋಪಿನಾಥನ್​

ಧಾರವಾಡ: ಪೌರತ್ವ ತಿದ್ದುಪಡಿ ಕಾಯ್ದೆ ಇಡೀ ರಾಷ್ಟ್ರಕ್ಕೆ ಸಂಬಂಧಿಸಿದ ಹಿನ್ನೆಲೆಯಲ್ಲಿ ಎಲ್ಲ ರಾಜ್ಯಗಳಲ್ಲೂ ಹೋರಾಟ ತೀವ್ರಗೊಂಡಿದೆ ಎಂದು ನಿವೃತ್ತ ಐಎಎಸ್​ ಅಧಿಕಾರಿ ಕಣ್ಣನ್​...

ಕಾಲೇಜ್ ವಿದ್ಯಾರ್ಥಿಗಳ ಮೇಲೆ ಹೆಜ್ಜೇನು ದಾಳಿ

ಹಾವೇರಿ: ಇಲ್ಲಿನ ಪಿಬಿ ರಸ್ತೆಯಲ್ಲಿರುವ ಜಿಎಚ್ ಕಾಲೇಜ್​ನಲ್ಲಿ ಹೆಜ್ಜೇನು ದಾಳಿಯಿಂದ 30ಕ್ಕೂ ಹೆಚ್ಚು ವಿದ್ಯಾರ್ಥಿಗಳು ಗಾಯಗೊಂಡಿರುವ ಘಟನೆ ಬುಧವಾರ ಮಧ್ಯಾಹ್ನ ಸಂಭವಿಸಿದೆ.

ಬೆಂಗಳೂರು: ಕನ್ನಡ ಕಿರುತೆರೆಯ ಪ್ರಸಿದ್ಧ ಕಾಮಿಡಿ ಶೋ ಮಜಾ ಟಾಕೀಸ್​ನಲ್ಲಿ ರಾಣಿ ಹೆಸರಿನಲ್ಲಿ ಮನೆ ಮಾತಾಗಿರುವ ನಟಿ ಶ್ವೇತಾ ಚಂಗಪ್ಪ ಗರ್ಭಿಣಿಯಾಗಿದ್ದು, ಮುದ್ದು ಕಂದನ ಆಗಮನಕ್ಕಾಗಿ ಕಾಯುತ್ತಿದ್ದಾರೆ. ಸದ್ಯ ಮಜಾ ಟಾಕೀಸ್​ನಿಂದ ಕೊಂಚ ವಿರಾಮ ಪಡೆದುಕೊಂಡಿರುವ ಶ್ವೇತಾ ಆರೋಗ್ಯದ ಕಡೆ ಗಮನ ಹರಿಸಿದ್ದಾರೆ. ಉಬ್ಬಿದ ಹೊಟ್ಟೆಯಲ್ಲಿ ತಾಯಿಯಾಗುವ ನಿರೀಕ್ಷೆಯಲ್ಲಿ ಫೋಟೊಶೂಟ್​ ಮಾಡಿಸಿರುವ ಶ್ವೇತಾ, ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಇದರ ನಡುವೆ ಅಭಿಮಾನಿಯೊಬ್ಬ ಫೋಟೊ ಕುರಿತು ಮಾಡಿದ ಅಸಭ್ಯ ಕಮೆಂಟ್​ಗೆ ಶ್ವೇತಾ ಖಡಕ್​ ಉತ್ತರ ನೀಡಿದ್ದಾರೆ.

ಕಾದಂಬರಿ ಧಾರವಾಹಿ ಮೂಲಕ ಕನ್ನಡಿಗರಿಗೆ ಪರಿಚಿತಳಾದ ಶ್ವೇತಾ ಚಂಗಪ್ಪ ಬಳಿಕ ಕೆಲ ಚಿತ್ರಗಳಲ್ಲಿ ನಟಿಸುವ ಮೂಲಕ ಸಿನಿರಸಿಕರಿಗೆ ಮತ್ತಷ್ಟು ಹತ್ತಿರವಾದರು. ಈ ನಡುವೆ ರಿಯಾಲಿಟಿ ಶೋ ಬಿಗ್​ಬಾಸ್​ ಸೀಸನ್​ 2ನಲ್ಲಿ ಸ್ಪರ್ಧಿಯಾಗುವ ಮೂಲಕ ಮತ್ತಷ್ಟು ಖ್ಯಾತಿ ಗಳಿಸಿದರು. ಆದರೆ, ಶ್ವೇತಾರಿಗೆ ಒಳ್ಳೆಯ ಯಶಸ್ಸು ತಂದು ಕೊಟ್ಟಿದ್ದು ಮಾತ್ರ ಮಜಾ ಟಾಕೀಶ್​ ಎಂಬ ಕಾಮಿಡಿ ಶೋ. ರಾಣಿ ಪಾತ್ರದಲ್ಲಿ ಸೃಜನ್​​ ಲೋಕೇಶ್​ ಪತ್ನಿಯಾಗಿ ನಟಿಸುತ್ತಿರುವ ಶ್ವೇತಾ ತಮ್ಮ ಓವರ್​ ಆ್ಯಕ್ಟಿಂಗ್​ ಮೂಲಕ ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸುತ್ತಿದ್ದಾರೆ.

ಸದ್ಯ ಮಜಾ ಟಾಕೀಸ್​ನಿಂದ ಶ್ವೇತಾ ಬಿಡುವು ಪಡೆದುಕೊಂಡಿದ್ದಾರೆ. ಅದಕ್ಕೆ ಕಾರಣ ತಾಯಿಯಾಗುತ್ತಿರುವ ಶ್ವೇತಾ ಆರೋಗ್ಯದ ಕಡೆ ಗಮನ ಹರಿಸಿರುವುದರಿಂದ ಸಾಕಷ್ಟು ವಿಶ್ರಾಂತಿ ಬೇಕಿದೆ. ಗರ್ಭಿಣಿಯಾಗಿರುವ ಶ್ವೇತಾ ಮುದ್ದು ಕಂದನ ಬರುವಿಕೆಗಾಗಿ ಕಾಯುತ್ತಿದ್ದು, ಇದರ ಖುಷಿಯಲ್ಲಿ ಪತಿ ಜತೆ ಫೋಟೋಶೂಟ್​ ಮಾಡಿಸಿದ್ದು, ಫೋಟೊಗಳನ್ನು ತಮ್ಮ ಇನ್​ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಕೊಡವರ ಹೆಣ್ಣು ಹೆತ್ತರೆ ಸ್ವರ್ಗ ಎನ್ನುವಂತೆ ಆ ದಿನಕ್ಕಾಗಿ ನಾನು ಕಾಯುತ್ತಿದ್ದೇನೆ ಎಂದು ಸಂತಸ ಹಂಚಿಕೊಂಡಿದ್ದಾರೆ.

ಶ್ವೇತಾರ ಫೋಟೊಗಳಿಗೆ ಸಾಕಷ್ಟು ಶುಭಾಶಯಗಳು ಹರಿದುಬಂದಿದೆ. ಆದರೆ, ಕಿಂಗ್​ ಆಫ್​ ಶೆಟ್ಟಿ ಹೆಸರಿನ ನೆಟ್ಟಿಗನೊಬ್ಬ ಸೃಜನ್​ಗೆ ಸಂಬಂಧ ಕಲ್ಪಿಸಿ ಕಮೆಂಟ್​ ಮಾಡಿರುವುದು ಶ್ವೇತಾರ ಕೆಂಗಣ್ಣಿಗೆ ಗುರಿಯಾಗಿದೆ. ಸೃಜನ್​ ಲೋಕೇಶ್​ ಕೊನೆಗೂ ತಂದೆಯಾದ್ರಲ್ಲ. ಮಜಾ ಟಾಕೀಸ್​ ಹೊಸ ಪ್ರವೇಶ ಎಂದು ಕಮೆಂಟಿಸಿದ್ದಾನೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಶ್ವೇತಾ, ನನ್ನ ಫೋಟೊವನ್ನು ನೀನು ಫನ್ನಿ ಎಂದು ತಿಳಿದಿಬಹುದು. ಆದರೆ, ಅದಲ್ಲ. ಇಲ್ಲಿರುವ ಸೂಕ್ಷ್ಮತೆಯನ್ನು ಅರ್ಥಮಾಡಿಕೊಳ್ಳಿ, ವೈಯಕ್ತಿಕ ಜೀವನ ಹಾಗೂ ವೃತ್ತಿ ಜೀವನದ ನಡುವಿನ ವ್ಯಾತ್ಯಾಸವನ್ನು ತಿಳಿಯಿರಿ ಎಂದು ಕಿವಿಮಾತು ಹೇಳಿದ್ದಾರೆ.

ವಿಶೇಷವೆಂದರೆ, ಕೆಲ ದಿನಗಳ ಹಿಂದೆ ಸೃಜನ್​ ಪತ್ನಿ ಗ್ರೀಷ್ಮಾ ಮತ್ತು ತಾಯಿ ಗಿರಿಜಾ ಲೋಕೇಶ್​ ಅವರು ಶ್ವೇತಾ ಅವರ ಮನೆಗೆ ತೆರಳಿ ಉಡುಗೊರೆಯನ್ನು ನೀಡಿ, ಇಷ್ಟದ ಊಟವನೆಲ್ಲಾ ಮಾಡಿ ಬಡಿಸಿ ಸಂತೋಷದ ಕ್ಷಣಗಳನ್ನು ಕಳೆದು ಬಂದಿದ್ದಾರೆ. (ದಿಗ್ವಿಜಯ ನ್ಯೂಸ್​)

View this post on Instagram

Here is Our Lovely Team who worked for my Maternity photoshoot ? First of all I would like to thank my Hubby @kiranappachu for agreeing to make it Happen♥️ then my darling @karishmauthappa_makeup for co-ordinating with every one and make it happen in a short period and make me look beautiful with her magical Hands? And Dear @aashish__photography for this memorable photoshoot of my life ♥️ trust me aashish. I look into these pics again n again can't get over of it. You are too good??? and finally I m always thankful to my Mother who is been my all time support. No words to explain about her? and @paramparika_vastra for the lovely peach perfect outfit ? and @sscreations719 for the cute tiyara☺️ once again Thank u all guys? #pregnancy #photoshoot #babybump #maternityphotoshoot #motherhood #momtobe #godsgift #lovemyfamily #lovemyhubby #mystrength #myeverything #lovemylife #loveuzindagi?

A post shared by Swetha Changappa (@swethachangappa) on

View this post on Instagram

Hiii My dear friends. Don't know how to express through words. I'm so so happy and grateful for the love u guys have shown me as soon as I announced our sweet news?. I'm overwhelmed by the way u all have showed your Love and Blessings through Calls,messages,what's app,Facebook,messanger, Instagram..etc. I Have tried my best replying each n everyone to their respective comments and wishes?. All I can say is This is wat the bonding, I have with u all since more than a decade ? N I truly Love u all till the end of my Life❤ will definitely be in touch with u all and tell u wats happening in my life? Let's stay in touch. ?. Photography:[email protected]__photography Make-up:[email protected]_makeup Outfit:[email protected]_vastra Tiyara:[email protected] #maternity #babybump #pregnancy #motherhood #momtobe #trulyblessed #waitingforthelittleone #ilovemyhubby #mystrength #god'sgift #lovemylife #loveuzingadi?

A post shared by Swetha Changappa (@swethachangappa) on

View this post on Instagram

Hi my dear friends ❣️I'm very greatful to all your LOVE and BLESSINGS showered on me all these years, for the work I have been doing and the PERSON I am♥️….. U all have known me for more than a decade?. U guys have LIKED ME, LOVED ME,n BLESSED ME for the kind of roles I have been doing in the television & cinemas?? on this SPECIAL DAY being my HUSBAND'S @kiranappachu BIRTHDAY I want to tell you all a very SPECIAL NEWS. Happy to Announce that in my REAL life I will be portraying a Role of A "MOTHER"? With the BLESSINGS of GOD, Me and My Hubby are gonna welcome our BUNDLE OF JOY very soon? Need all your BEST WISHES and BLESSINGS to us and our family? like u guys have always shown??. LOVE YOU All??. [email protected]__photography ography. thank u soo much aashish for the beautiful pics.im happy that my first ever maternity shoot is done by u? Makeup and hair- @karishmauthappa_makeup p. Karishma u rock girl…. amazing job. Love u? Outfit- @paramparika_vastra . U guys are too good. And made my outfit look really cute and beautiful on pics ? Tiyara- @sscreations719 ons719 thank u guys for the lovely tiyara which is adding it's magic for these pics?. Love u all guys?. #happy #goodnews @bangalore_times #maternity #journey #godsgift #blessed?. #lovemylife #loveuzindagi,?

A post shared by Swetha Changappa (@swethachangappa) on

ವಿಡಿಯೋ ನ್ಯೂಸ್

VIDEO: ಮಾವುತನ ಊಟದ ಎಲೆಯಿಂದ ತುತ್ತು ಅನ್ನ ತಿಂದು, ನೆಟ್ಟಿಗರ...

ತಿರುವನಂತಪುರ: ಆನೆಗಳ ಆಟ, ದಾಳಿ, ಮರ ಹತ್ತುವುದು ಹೀಗೆ ಹಲವು ವಿಡಿಯೋಗಳು ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿವೆ. ಆದರೆ ಈಗ ವೈರಲ್​ ಆಗಿರುವ ಆನೆಯ ವಿಡಿಯೋ ಸಾಮಾಜಿಕ ಬಳಕೆದಾರರ ಮನಸ್ಸು ಗೆದ್ದಿದೆ. ಹಸಿದ...

VIDEO| ರಾಷ್ಟ್ರಪತಿ ರಾಮನಾಥ್​ ಕೋವಿಂದ್​ರಿಂದ ಪ್ರಧಾನಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ...

ನವದೆಹಲಿ: ದೆಹಲಿಯ ರಾಷ್ಟ್ರಪತಿ ಭವನದಲ್ಲಿ ಇಂದು ನಡೆದ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ರಾಮನಾಥ್​ ಕೋವಿಂದ್​ ಅವರು ಪ್ರಧಾನಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ ಪ್ರಶಸ್ತಿ ಪ್ರದಾನ ಮಾಡಿದರು. ವಿವಿಧ ಕ್ಷೇತ್ರಗಳಲ್ಲಿ ಅದ್ವಿತೀಯ ಸಾಧನೆ ಮಾಡಿದ...

VIDEO| ಬೇಲಿಯೇ ಎದ್ದು ಹೊಲ ಮೇಯ್ದಂತೆ ಎಂಬ ಗಾದೆ ಮಾತಿಗೆ...

ಲಖನೌ: ಬೇಲಿಯೇ ಎದ್ದು ಹೊಲ ಮೇಯ್ದಂತೆ ಎಂಬ ಗಾದೆ ಮಾತಿಗೆ ಪೂರಕವಾದ ಘಟನೆ ಇದಾಗಿದೆ. ಉತ್ತರ ಪ್ರದೇಶದ ನೋಯ್ಡಾದಲ್ಲಿ ನಡೆದ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ. ನೋಯ್ಡಾದಲ್ಲಿ ಅಂಗಡಿ ಹೊರಭಾಗದಲ್ಲಿ ಇಟ್ಟಿದ್ದ ಬಾಕ್ಸ್​ನಿಂದ...

VIDEO| ನಟಿಯಾಗಿರೋ ಆಲಿಯಾ ಇದೀಗ ಶೆಫ್​: ಬಾಲಿವುಡ್​ ಬ್ಯೂಟಿಯ ಅಡುಗೆ...

ಮುಂಬೈ: ಬಾಲಿವುಡ್​ ಬ್ಯೂಟಿ ಆಲಿಯಾ ಭಟ್ ನಟನೆ ಜತೆಗೆ ಹೊಸ ಸಾಹಸಕ್ಕೆ ಕೈಹಾಕಿದ್ದಾರೆ. ನಟಿಯಾಗಿರುವ ಆಲಿಯಾ ಇದೀಗ ಶೆಫ್ ಆಗಿದ್ದು, ಹೊಸ ಬಗೆಯ ಅಡುಗೆ ಪರಿಚಯಿಸಲು ಮುಂದಾಗಿದ್ದಾರೆ. ಯೂಟ್ಯೂಬ್​ನಲ್ಲಿ ಆಲಿಯಾ ಭಟ್...

VIDEO| ಅತಿವೇಗದ ಎಸೆತ, ಮಥೀಶಾ ಪಥಿರಣ ವಿಶ್ವದಾಖಲೆ!

ಬ್ಲೂಮ್​ಫಾಂಟೆನ್: ಶ್ರೀಲಂಕಾ ವಿರುದ್ಧ ಭಾನುವಾರ ನಡೆದ 19 ವಯೋಮಿತಿ ಏಕದಿನ ವಿಶ್ವಕಪ್ ಟೂರ್ನಿಯ ಮುಖಾಮುಖಿಯಲ್ಲಿ ಭಾರತ ತಂಡ 90 ರನ್​ಗಳಿಂದ ಗೆಲುವು ಸಾಧಿಸಿತು. ಆದರೆ, ಲಂಕಾ ಕಡೆಯಿಂದಲೂ ಸ್ಮರಣೀಯ ದಾಖಲೆಯೊಂದು...

VIDEO| ತಮಿಳಿನ ಕೌನ್​ ಬನೇಗಾ ಕರೋಡ್​ಪತಿ ಶೋನಲ್ಲಿ 1 ಕೋಟಿ...

ಚೆನ್ನೈ: ತಮಿಳು ಆವೃತ್ತಿಯ ಕೌನ್​ ಬನೇಗಾ ಕರೋಡ್​ಪತಿ(ಕೊಡೀಶ್ವರಿ) ರಿಯಾಲಿಟಿ ಶೋನಲ್ಲಿ ವಿಕಲಾಂಗ ಮಹಿಳೆಯೊಬ್ಬಳು ಬರೋಬ್ಬರಿ 1 ಕೋಟಿ ರೂ. ಬಹುಮಾನ ಮೊತ್ತವನ್ನು ಗೆದ್ದು ಎಲ್ಲರ ಗಮನ ಸೆಳೆದಿದ್ದಾಳೆ.ಮದುರೈ ನಿವಾಸಿಯಾಗಿರುವ ಕೌಶಲ್ಯ...