
ಕೋಟ: ತೆಕ್ಕಟ್ಟೆಯ ಕೊಮೆ ಯಶಸ್ವೀ ಕಲಾವೃಂದದ ಬೆಳ್ಳಿ ಹಬ್ಬ ವರ್ಷದ ಅಂಗವಾಗಿ ರಾಜ್ಯಾದ್ಯಂತ ಒಟ್ಟು 124 ಕಾರ್ಯಕ್ರಮಗಳನ್ನು ನಡೆಸಲಾಗಿದ್ದು, ಶ್ವೇತಾಯಾನ ಸಮಾಪನದಲ್ಲಿ ಮಧ್ಯಮಾವತಿ ಶೀರ್ಷಿಕೆಯೊಂದಿಗೆ 125ನೇ ಕೊನೆಯ ಕಾರ್ಯಕ್ರಮ ಏ.19ರಂದು ನಡೆಯಲಿದೆ. ಸಂಜೆ 4ರಿಂದ ತೆಕ್ಕಟ್ಟೆಯ ಹಯಗ್ರೀವ ಕಲ್ಯಾಣ ಮಂಟಪದಿಂದ ಮೆರವಣಿಗೆ ಹೊರಡಲಿದ್ದು ಕನ್ನುಕೆರೆ ನವಶಕ್ತಿ ಕಲ್ಯಾಣ ಮಂಟಪದ ತನಕ ತೆರಳಿ ಕುವೆಂಪು ಶತಮಾನೋತ್ಸವ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕೊನೆಗೊಳ್ಳಿದೆ. ಮೆರವಣಿಗೆಗೆ ಶಿವರಾಮ ಶೆಟ್ಟಿ ಮಲ್ಯಾಡಿ ಚಾಲನೆ ನೀಡುವರು. ಬಳಿಕ ತೆಕ್ಕಟ್ಟೆ ಯಕ್ಷಗಾನ ಕೇಂದ್ರದ ವಿದ್ಯಾರ್ಥಿಗಳಿಂದ ಗಾನ ವೈಭವ, ಕೊಡವೂರು ಮಾನಸಿ ಸುಧೀರ್ ಬಳಗದಿಂದ ನೃತ್ಯ, ನಿಕೇತನ ಕೊಡವೂರು ಅವರಿಂದ ನೃತ್ಯೋಪಾಸನೆ ಹಾಗೂ ಅತಿಥಿ ಕಲಾವಿದರ ಕೂಡುವಿಕೆಯಲ್ಲಿ ಯಕ್ಷಗಾನ ಚಕ್ರವ್ಯೆಹ ಪ್ರದರ್ಶನಗೊಳ್ಳಲಿದೆ.
ಕೊಕೂರು ಸೀತಾರಾಮ ಶೆಟ್ಟಿ ಅವರಿಗೆ ಗುರುವಂದನಾ ಕಾರ್ಯಕ್ರಮ ನಡೆಯಲಿದೆ. ಉದ್ಯಮಿ ಕೋಟ ಆನಂದ ಸಿ.ಕುಂದರ್ ಉದ್ಘಾಟಿಸುವರು. ಕೆ.ಜಯಪ್ರಕಾಶ್ ಹೆಗ್ಡೆ ಅಧ್ಯಕ್ಷತೆ ವಹಿಸಲಿದ್ದಾರೆ. ನಾಡೋಜ ಡಾ.ಜಿ.ಶಂಕರ್, ಡಾ.ಟಿ.ಶ್ಯಾಮ್ ಭಟ್, ಆಂಡ್ರೂೃ ಡಿಸಿಲ್ವ, ಮುರಳಿ ಕಡೆಕಾರ್, ಲಲಿತಾ ಸಕಾರಾಂ, ಡಾ.ಜಗದೀಶ್ ಶೆಟ್ಟಿ ಮುಖ್ಯ ಅತಿಥಿಯಾಗಿರುವರು. ಡಾ.ಕೆ.ಸಿ.ಬಲ್ಲಾಳ್ ಬೆಂಗಳೂರು, ಪ್ರೊ.ಪವನ್ ಕಿರಣ್‌ಕೆರೆ ಉಪಸ್ಥಿತರಿರುವರು. ಸ್ಮರಣ ಸಂಚಿಕೆಯ ಮುಖಪುಟವನ್ನು ಸಾಹಿತಿ ಸುಧಾ ಆಡುಕುಳ ಅನಾವರಣ ಮಾಡಲಿದ್ದಾರೆ ಎಂದು ಶ್ವೇತಯಾನದ ಕಾರ್ಯಾಧ್ಯಕ್ಷ ಮಲ್ಯಾಡಿ ಸುಜಯ್ ಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.