More

    ಮದುವೆಯಾದ ವರ್ಷದ ಬೆನ್ನಲ್ಲೇ ಪತಿಯೊಂದಿಗೆ ವಿಚ್ಛೇದನ: ನಟಿ ಶ್ವೇತಾ ಬಸು ನೀಡಿದ ಕಾರಣ ಇದು…

    ಮುಂಬೈ: ಬಹುಭಾಷಾ ನಟಿ ಶ್ವೇತಾ ಬಸು ಪ್ರಸಾದ್​​ ಅವರು ತಮ್ಮ ಪತಿ ಹಾಗೂ ನಿರ್ದೇಶಕ ರೋಹಿತ್​ ಮಿತ್ತಲ್​ರಿಂದ ಬೇರೆಯಾಗಿದ್ದು, ಅದಕ್ಕೆ ಕಾರಣ ಏನೆಂಬುದನ್ನು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

    ಗೋವಾದಲ್ಲಿ 2017ರಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದ ಶ್ವೇತಾ ಬಸು ಪ್ರಸಾದ್​ ಮತ್ತು ರೋಹಿತ್, 2018​ ಡಿಸೆಂಬರ್​ 13ರಂದು ಪುಣೆಯಲ್ಲಿ ವಿವಾಹವಾದರು. ವೈವಾಹಿಕ ಜೀವನ ಒಂದು ವರ್ಷ ತುಂಬಿದ ಬೆನ್ನಲ್ಲೇ ಶ್ವೇತಾ ತಮ್ಮ ಪತಿಯಿಂದ ಬೇರ್ಪಟ್ಟಿರುವುದಾಗಿ ಇನ್​ಸ್ಟಾಗ್ರಾಂನಲ್ಲಿ ಘೋಷಿಸಿದ್ದಾರೆ.

    ರೋಹಿತ್​ ಮತ್ತು ನಾನು ಬೇರೆ ಬೇರೆ ದಾರಿಯಲ್ಲಿ ಹೋಗಲು ಪರಸ್ಪರ ನಿರ್ಧರಿಸಿದ್ದೇವೆ. ಈ ಮೂಲಕ ನಮ್ಮ ವೈವಾಹಿಕ ಜೀವನಕ್ಕೆ ಕೊನೆಗಾಣಿಸಿದ್ದೇವೆ. ಹಲವು ತಿಂಗಳು ಯೋಚಿಸಿ ನಮ್ಮ ಹಿತಾಸಕ್ತಿಗೆ ಅನುಗುಣವಾಗಿ ಬೇರೆಯಾಗಿ ಸಾಗಲು ಕೆಲ ತಿಂಗಳ ಹಿಂದೆ ನಿರ್ಧಾರಕ್ಕೆ ಬಂದಿದ್ದೇವೆ. ಭರಿಸಲಾಗದ ನೆನಪುಗಳು ನೀಡಿದ ರೋಹಿತ್​ಗೆ ಧನ್ಯವಾದಗಳು. ಅವರು ಯಾವಾಗಲು ನನಗೆ ಸ್ಫೂರ್ತಿಯಾಗಿರುತ್ತಾರೆ. ಮುಂದಿನ ದಿನಗಳಲ್ಲಿ ಒಳ್ಳೆಯ ಜೀವನ ನಿಮ್ಮದಾಗಲಿ ಎಂದು ಶ್ವೇತಾ ಶುಭಕೋರಿದ್ದಾರೆ.

    ಅಂದಹಾಗೆ ಶ್ವೇತಾ ಬಸು ಬಾಲ ನಟಿಯಾಗಿ ಹಿಂದಿ ಸಿನಿಮಾ ರಂಗಕ್ಕೆ ಪರಿಚಿತರಾದರು. ತೆಲುಗು ಮತ್ತು ತಮಿಳಿನ ಅನೇಕ ಚಿತ್ರಗಳನ್ನು ಶ್ವೇತಾ ನಟಿಸಿದ್ದಾರೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts